ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 27 ಈ ಸೇವಕನು ಇದು ಎಲ್ಲಿಯ ತಂಟೆ ಬಂದಿತಪ್ಪಾ ಎಂದು ಗೊಣಗುಟ್ಟುತ್ತಾದೊರೆಯೇ ! ಲೋಕದಲ್ಲಿ ಮನುಷ್ಯನಾಗಿ ಹುಟ್ಟಿದವನು ಯಾವಾಗಲಾದರೂ ಒಂದು ದಿವಸ ಸಾಯಲೇ ಬೇಕು. ಹೀಗಿರುವಲ್ಲಿ ತಾವು ಊಾಕೆ ಇಷ್ಟು ತೊಂದರೆಯನ್ನು ಅನು ಭವಿಸಬೇಕು?ಎಂದು ಮುಚ್ಚಿದ ಮುಸುಕಿನಲ್ಲಿಯೇ ಉತ್ತರವನ್ನು ಹೇಳುತ್ತಾ ಬಂದನು. ಆಗ ಆ ತುರುಕನು ಇವನ ಮಾತುಗಳನ್ನು ಕೇಳಿ ನಕ್ಕು ಸುಮ್ಮನೆ ಮಲಗಿಕೊಂಡನು. 28, THE REDDI AND THE BRAHMAN. ೨೮, ರಡ್ಡಿ ಯೂ ಬ್ರಾಹ್ಮಣನೂ. ತೆಲುಗಾಣ್ಯದಲ್ಲಿ ಚನ್ನಾರಡ್ಡಿ ಎಂಬ ಗೌಡನು ನೂರಾರು ಆಳುಗಳನ್ನು ಇಟ್ಟು ಕೊಂಡು ಅನೇಕವಾದ ಉಳುವ ಎತ್ತುಗಳನ್ನೂ ಹೇರುವ ಎತ್ತುಗಳನ್ನೂ ಕಟ್ಟಿಕೊಂಡು ಆರಂಭವನ್ನೂ ಹೇರಾಟವನ್ನೂ ಮಾಡಿಕೊಂಡು ನೂರಿನ್ನೂರು ಗುಳಿಗಳಲ್ಲಿ ಧಾನ್ಯ ಗಳನ್ನು ತುಂಬಿಕೊಂಡು ಸರಿಯವರಲ್ಲಿ ಬಲು ಹೆಸರುವಾಸಿಯುಳ್ಳವನಾಗಿ ಇದ್ದನು. ಇವನ ದಳಸರವನ್ನು ಒಬ್ಬ ಬಡವನಾದ ಬ್ರಾಹ್ಮಣನು ಕಂಡು ಇವನನ್ನು ಆಶ್ರಯಿ ಸಿದರೆ ತನಗೆ ಏನಾದರೂ ಪ್ರಯೋಜನವಾಗಿ ಅದರಿಂದ ತನ್ನ ಬಡತನ ಇ೦ಗೀತು ಎಂದು ನಾಲ್ಕಾರು ವರುಷಗಳಿಂದ ಆಶ್ರಯವನ್ನು ಮಾಡಿಕೊಂಡು ಇದ್ದಾಗ ಅವನು ಒಂದು ಕಾಸಾಗಲಿ ಒಂದು ಕಾಳು ದವಸವಾಗಲಿ ಕೊಡಲಿಲ್ಲ, ಹೀಗಿರುವಲ್ಲಿ ಆ ರಡ್ಡಿ ಯು ಒಂದು ಹೊಸ ಮನೆಯನ್ನು ಕಟ್ಟಿಸಬೇಕೆಂದು ಚೆಲುವಾದ ಸ್ಥಳದಲ್ಲಿ ಸಮವಾಗಿ ನೆಲಗಟ್ಟು ಮಾಡಿಸಿ ಗಜ ಅಗಲ ಗಜಮಟ್ಟ ಕೈ ತಳಾದಿಯನ್ನು ತೆಗೆಸಿ ಅದನ್ನು ಪಡಿಗುಂಡುಗಳಿಂದ ತುಂಬಿಸಿ ಎರಡು ಗಜ ಉದ್ದಕ್ಕೆ ಇಟ್ಟಿಗೆ ಗಾರೆಗಳಿ೦ದ ಗೋಡೆಯನ್ನು ಹಾಕಿಸಿ ಇದ್ದನು. ಒಂದು ದಿವಸ ಸಾಯಂಕಾಲದ ವೇಳೆಯಲ್ಲಿ ಒಂದು ಬಿಳಿಯ ನಾಯಿ ಒಂದು ಒಂದು ಗೋಡೆಯಿಂದ ಮತ್ತೊಂದು ಗೋಡೆಗೆ ಹಾರಿ ಮತ್ತೊಂದು ಸಾರಿಯ ಅದೇ ಪ್ರಕಾರ ಹಾರಿ ಓಡಿ ಹೋಯಿತು, ಆದ ರಡ್ಡಿಯು ಕಂಡು ಹೊಸ ಗೋಡೆಯ ಮೇಲೆ ನಾಯಿ ಹಾರಿ ಹೋಯಿತಲ್ಲಾ ! ಇದ 5ಂದ ತನಗೇನಾದರೂ ಕೇಡು ಬಂದೀತೋ ಏನೋ ಎಂದು ಕೊರಗುತ್ತಾ ರಾತ್ರಿ ಯಲ್ಲಿ ತನ್ನ ರಡ್ಡಿ ಸಾನಿಯ ಸಂಗಡ ಈ ಸಂಗತಿಯನ್ನು ಹೇಳಲು ಆಕೆಯುತಮ್ಮನ್ನು ಕಾದು ಕೊಂಡಿರುವ ಹಾರವಯ್ಯನ ಸಂಗಡ ಹೇಳಿರಿ ಅಂದಳು, ಹೊತ್ತಾರೆ ಈ ಬ್ರಾಹ್ಮಣನು ಕಟ್ಟಿಯ ಪ್ರಕಾರವಾಗಿ ರಡ್ಡಿಯನ್ನು ಕಂಡು ಆಶೀರ್ವಾದವನ್ನು ಮಾಡಿ ಮಂತ್ರಾಕ್ಷತೆಯನ್ನು ಕೊಡಲು ರಡ್ಡಿ ಯು ಅವನಿಗೆ ನಾಯಿ ಗೋಡೆಯ ದಾಟಿದುದನ್ನು ಹೇಳಿದನು. ಆಗ ಬ್ರಾಹ್ಮಣನು ಈ ಲೋಭಿಯಿಂದ ಹಣವನ್ನು ಎಳೆಯುವುದಕ್ಕೆ ಇದೇ ಸಮಯವೆಂದು ತನ್ನ ಮನಸ್ಸಿನಲ್ಲಿ ಎಣಿಸಿ ಬೇಗ ಮನೆಗೆ ಹೋಗಿ ಒಂದು ಪುಸ್ತಕವನ್ನು ತಂದು ಅವನ ಮುಂದೆ ಎರಡು ಗಳಿಗೆ ಹುಡುಕಿದ ಹಾಗೆ ಮಾಡಿ ಗೋಡೆಯನ್ನು ಬಿಳಿಯ ನಾಯಿಯು ಮೊದಲು ಒಂದು ಸಾರಿ ಹಾರಿ