ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ ನೆಯ ಭಾಗ ಇದು ತನ್ನಷ್ಟಕ್ಕೆ ತಾನೇ ಸತ್ತಿದೆ ಎಂದು ಎಣಿಸಿ ಬಲೆಯನ್ನು ಬಿಚ್ಚಿ ಇಟ್ಟು ಹುಲ್ಲೆ ಯನ್ನು ತೆಗೆದುಕೊಳ್ಳುವುದಕ್ಕೆ ಬರುತ್ತಿರಲು ಕಾಗೆಯು ಕೂಗಿಕೊಂಡು ಹಾರಿ ಹೋಯಿತು. ಸಂಗಡಲೇ ಹುಲ್ಲೆಯ ಹಾರುತ್ತಿರಲಾಗಿ ಗದ್ದೆಯವನು ಕಂಡು ದೊಣ್ಣೆಯನ್ನು ಎಸೆಯಲು ಅದು ಹುಲ್ಲೆಗೆ ತಗುಲದೆ ಕೂತಿದ್ದ ನರಿಗೆ ತಗುಲಿ ನರಿಯು ಸತ್ತು ಹೋಯಿತು. ಆದುದರಿಂದ ಒಬ್ಬರಿಗೆ ಮೋಸವನ್ನು ಮಾಡಬೇಕೆಂದೆಣಿಸಿದವ ರನ್ನು ದೇವರು ಕೆಡಿಸುವನು. 32. THE SHOPKEEPER'S SON AND THE JEWEL ೩೨. ಕೋಮಟಿಗನ ಮಗನಿಗೆ ರತ್ನ ಸಿಕ್ಕಿದುದು. ಅಳಕವತೀ ಎಂಬ ಪಟ್ಟಣದಲ್ಲಿ ಅಳಕಶೇಖರನೆಂಬ ಅರಸು ಇದ್ದನು. ಆ ನಗ ರದಲ್ಲಿ ಚಿನ್ನ ಸೆಟ್ಟಿ ಎಂಬ ಕೋಮಟಿಗನು ಚಿಲ್ಲರೆಯ ಅಂಗಡಿಯನ್ನು ಹಾಕಿಕೊಂಡ ವ್ಯಾಪಾರವನ್ನು ಮಾಡಿಕೊಂಡು ಇದ್ದನು. ಅವನು ಒಂದಾನೊಂದು ದಿವಸ ತನ್ನ ಮಗನಾದ ಯೆಂಗಶೆಟ್ಟಿ ಎಂಬವನನ್ನು ಕರೆದು ಅಂಗಡಿಯಲ್ಲಿ ಚವುಳುಪು ಇಲ್ಲ : ಉಪ್ಪಾರರ ಮೊಳೆಗೆ ಹೋಗಿ ಚವುಳುಪ್ಪನ್ನು ತೆಗೆದುಕೊಂಡು ಬಾ ಎಂದು ಒಂದು ರೂಪಾಯಿಯನ್ನು ಕೊಟ್ಟು ಕಳುಹಿಸಿದನು. ಈ ಯಂಗಶೆಟ್ಟಿ ಯು ಪಕ್ಕಾಸೇರನ್ನೂ ಕುಕ್ಕೆಯನ್ನೂ ತೆಗೆದುಕೊಂಡು ಉಪ್ಪಾರರ ಮೋಳೆಗೆ ಹೋಗಿ ಚವುಳುಪ್ಪನ್ನು ಅಗ್ಗ ವಾಗಿ ಕ್ರಯ ಮಾಡಿ ತೆಗೆದು ಕೊಂಡು ಬರುತ್ತಾ ಪಟ್ಟಣದ ಬೀದಿಯಲ್ಲಿ ಉಪ್ಪಿನ ಕುಕ್ಕೆ ಯನ್ನು ಎತ್ತಿ ಹಾಕಿಕೊಂಡು ಬಿದ್ದು ಅಳುತ್ತಾ ಆ ಉಪ್ಪನ್ನು ಮಣ್ಣಿನೊಡನೆ ಬಾಚಿ ಬಾಚಿ ಕುಕ್ಕೆಗೆ ತುಂಬಿಕೊಳ್ಳುತ್ತಾ ಇದ್ದನು. ಬರುವ ಹೋಗುವ ಜನರಲ್ಲಿ ಇವನ ಗುರುತು ಕಂಡವರು ಇದನ್ನು ನೋಡಿ ಅವನ ಅಪ್ಪನ ಬಳಿಗೆ ಹೋಗಿ--ನಿನ್ನ ಮಗನು ರಾಜಬೀದಿಯಲ್ಲಿ ಉಪ್ಪಿನ ಮಂಕರಿಯನ್ನು ಎತ್ತಿ ಹಾಕಿಕೊಂಡು ಬಿದ್ದು ಅಳುತ್ತಾ ತಿರಿಗಿ ಮಣ್ಣಿನಲ್ಲಿ ಬೆರೆದ ಉಪ್ಪನ್ನು ಕುಕ್ಕೆಗೆ ತುಂಬುತ್ತಲಿದ್ದಾನೆ ಅನ್ನಲು ಆ ಕೋಮಟಿ ಗನು--ನನ್ನ ಮಗ ಬಹು ಜಾಣನು ; ಏನೋ ಲಾಭವನ್ನು ಕಂಡು ಹೀಗೆ ಮಾಡಿ ದ್ದಾನೆಂದು ಮನಸ್ಸಿನಲ್ಲಿ ಸಂತೋಷವನ್ನು ಹೊ೦ದಿ ಹೇಳಿದವನ ಸಂಗಡ ನಷ್ಟ ಕಾಲ ! ಏನುಮಾಡಬೇಕು ? ಎಂದು ವ್ಯಸನವನ್ನು ನಟಿಸಿ ಕಳುಹಿಸಿಬಿಟ್ಟನು. ಆ ಮೇಲೆ ಮಣ್ಣು ಬೆರದ ಉಪ್ಪನ್ನು ಹೊತ್ತು ಕೊಂಡು ಅಳುತ್ತಾ ಬರುವ ಮಗನ ಕುಕ್ಕೆ ಯನ್ನು ಇಳಿಸಿಕೊಂಡು ತಲೆಬಾಗಿಲನ್ನು ಹಾಕಿ ತಾನೂ ಮಗನೂ ಸಹ ಆ ಉಪ್ಪನ್ನು ಕೇರಿ ನೋಡುವಲ್ಲಿ ಅದರೊಳಗೆ ಲಕ್ಷಾಂತರವರಹ ಬಾಳುವ ರತ್ನ ಸಿಕ್ಕಿದುದರಿಂದ ಅದನ್ನು ಮಾರಿ ಅದರಿಂದ ದ್ವೀಪಾಂತರಗಳ ವ್ಯಾಪಾರವನ್ನು ಮಾಡುತ್ತಾ ದೊಡ್ಡ ಸಾಹುಕಾರರು ಅನ್ನಿಸಿಕೊಂಡು ಚೆನ್ನಾಗಿ ಬದುಕಿದರು.