ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೧ನೆಯ ಭಾಗ 61 ನನ್ನು ಕಚ್ಚಿ ಹೋಯಿತು. ಆ ವಾಯಸವು-ಬ್ರಾಹ್ಮಣನು ಮೃತನಾದನೋ ? ಇಲ್ಲ ವೋ ? ಎಂದು ನೋಡುವ ಅಪೇಕ್ಷೆಯಿಂದ ಅವನ ಸಮಿಾಪದಲ್ಲಿದ್ದ ಕಮಂಡಲದ ಮೇಲೆ ಕುಳಿತು ನೋಡಿ ಮೃತನಾದನೆಂದು ನಿಶ್ಚಯಿಸಿ ದೈವಗತಿಯಿಂದ ತನಗೆ ದಾಹ ವಾಗಲು ಆ ಕಮಂಡದಲ್ಲಿದ್ದ ನೀರನ್ನು ಬಯಸಿ ಅದರಲ್ಲಿ ತನ್ನ ಮೂತಿಯನ್ನು ಇಟ್ಟಿತು. ಕೂಡಲೇ ಅದರಲ್ಲಿದ್ದ ಮಂಡೂಕವು ಈ ಬ್ರಾಹ್ಮಣನ ಮರಣವನ್ನು ಮೊದಲೇ ತಿಳಿದು ಇದ್ದ ಕಾರಣ ಆ ವಾಯಸದ ಕೊರಳನ್ನು ಗಟ್ಟಿಯಾಗಿ ಕಚ್ಚಿ ಹಿಡಿದು ಕೊಂಡು--ಎಲೋ ವಾಯಸನೇ ! ನನಗೆ ರಕ್ಷಕನಾದ ಈ ಎಪ್ರನನ್ನು ಬದು ಕಿಸಿಕೊಟ್ಟರೆ ನಿನ್ನನ್ನು ಬಿಡುವೆನು. ಇಲ್ಲದಿದ್ದರೆ ಈಗಲೇ ನಿನ್ನ ಪ್ರಾಣವನ್ನು ತೆಗೆ ಯುವೆನೆಂದು ಹೇಳಿತು, ವಾಯಸವು ಭಯಪಟ್ಟು ತನ್ನವರನ್ನು ಕೂಗಿ ಈಗ ತನಗೆ ಬಂದಿರುವ ವಿಪತ್ತನ್ನು ಕರ್ಕೋಟಕನೊಡನೆ ಹೇಳಿ ಕರೆದುಕೊಂಡು ಬನ್ನಿ ಎಂದು ಹೇಳಿ ಕಳುಹಿಸಲು ಆ ವಾಯಸನ ಮರಿಗಳು ಸರ್ಪನೊಡನೆ ಈ ಸಂಗತಿಯನ್ನು ಹೇಳಿ ಮೊರೆಯಿಟ್ಟುವು. ಕರ್ಕೊಟಕನು ತನ್ನ ಸ್ನೇಹಿತನಿಗೆ ವಿಪತ್ತು ಬಂದಿತೆಂದು ಅತಿ ವೇಗದಿಂದ ಹೊರಟು ಬಂದು ಬ್ರಾಹ್ಮಣನ ತಲೆಗೆ ಏರಿ ಇದ್ದ ತನ್ನ ವಿಷವೆಲ್ಲ ವನ್ನೂ ಹೀರಿಕೊಂಡು ಹೋಯಿತು. ಆಗೆ ಬ್ರಾಹ್ಮಣನು ನಿದ್ರೆ ತಿಳಿದವನ ಹಾಗೆ ಎದ್ದು ಕೂತು ಕೊಂಡು ತನ್ನ ಪ್ರಾಣವನ್ನು ಒದುಕಿಸಿದ ಮಂಡೂಕನನ್ನು ಕೊಂಡಾಡಿ -ಈ ಕಾಗೆಯನ್ನು ಬಿಟ್ಟು ಬಿಡು ಎಂದು ಹೇಳಿದನು. ಕಪ್ಪೆಯು ಆ ವಿಪ್ರನನ್ನು ನೋಡಿ-ಎಲೋ ಮರುಳು ಬ್ರಾಹ್ಮಣ ! ಈ ದುಷ್ಟ ಕಾಗೆಯನ್ನು ಬಿಟ್ಟರೆ ಸಕಲ ಪ್ರಾಣಿಗಳನ್ನೂ ಕೊಂದ ಪಾಪಕ್ಕೆ ಒಳಗಾಗುವೆವು ಎಂದು ಹೇಳಿ ಒಂದು ಕಥೆ ಯನ್ನು ಹೇಳಿತು. ಏನಂದರೆ- ಗೋದಾವರೀ ತೀರದಲ್ಲಿ ರಾಮ ಪುರವೆಂಬ ಒಂದು ಅಗ್ರಹಾರವು ಇರುವುದು. ಅಲ್ಲಿ ಕಾಲಶರ್ಮನೆಂಬ ಬ್ರಾಹ್ಮಣನು ವೇದಶಾಸ್ತ್ರಸಂಪನ್ನನಾಗಿ ಇಹಲೋಕದಲ್ಲಿ ಮಾಡತಕ್ಕ ಕರ್ಮಗಳನ್ನು ಮಾಡಿ ಮೋಕ್ಷಕ್ಕೆ ಸಾಧನವಾದ ಗಂಗಾಸ್ನಾ ನವನ್ನು ಮಾಡಿಕೊಂಡು ಬರಬೇಕೆಂದು ಕಾಶೀಯಾತ್ರೆಗಾಗಿ ಹೊರಟು ಗೊಂಡಾರಣ್ಯದಲ್ಲಿ ಬರುತ್ತಾ ಅಲ್ಲಿ ಒಂದು ಮಡುವಿನಲ್ಲಿ ನೀರು ಇರುವುದನ್ನು ಕಂಡು,ಇಲ್ಲಿ ಸ್ನಾನವನ್ನು ಮಾಡಿ ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ತೀರಿಸಿಕೊಳ್ಳುವ ದಕ್ಕೆ ಪ್ರಶಸ್ತವಾಗಿದೆ ಎಂದು ಅಲ್ಲಿ ನಿಂತು ಮಡುವಿನಲ್ಲಿ ಇಳಿದು ಸ್ನಾನವನ್ನು ಮಾಡುತ್ತಾ ಇರುವ ಸಮಯದಲ್ಲಿ ಅದರೊಳಗೆ ಇದ್ದ ಒಂದು ಮೊಸಳೆಯು ಈ ವಿಪ್ರನನ್ನು ನೋಡಿ--ನನ್ನನ್ನು ತೆಗೆದು ಕೊಂಡು ಹೋಗಿ ಗಂಗೆಯಲ್ಲಿ ಬಿಟ್ಟರೆ ನಿನಗೆ ಪ್ರತ್ಯುಪಕಾರವನ್ನು ಮಾಡುವೆನೆಂದಿತು. ಆ ಬ್ರಾಹ್ಮಣನು ಸಂಧ್ಯಾವಂದ ನಾದಿ ನಿತ್ಯಕರ್ಮಗಳನ್ನು ಮಾಡಿಕೊಂಡು ಅನಂತರದಲ್ಲಿ ತನ್ನನ್ನು ದೈನ್ಯದಿಂದ ಬೇಡಿಕೊಳ್ಳುವ ಮೊಸಳೆಯ ಮೇಲೆ ದಯೆಯುಳ್ಳವನಾಗಿ ಅದನ್ನು ಸಂಚಿ ಯಲ್ಲಿ ಹೊಗಿಸಿ ಬಿಗಿದು ತಲೆಯ ಮೇಲೆ ಹೊತ್ತು ಕೊಂಡು ಕಾಶಿಯನ್ನು ಸೇರಿ ಗಂಗಾ ಮಾಡಿ ಆ ಮೊಸಳೆಯನು ಗಂಗೆಯಲ್ಲಿ ಬಿಡಲು ಅದು