ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೇತುಬಂಧನದ ಕಥೆ 103 ರಡು ಗಳಿಗೆಗಳ ವರೆಗೂ ಸುಮ್ಮನಿದ್ದು ಒಣಗಿದ ತುಟಿಗಳನ್ನು ನಾಲಿಗೆಯಿಂದ ಒರಸಿ ಕೊಳುತ ಆ ಮೇಲೆ ಬೇಯಾ ! ಕಾಮರೂಪಿಗಳೂ ಮೈ ಕೊಚ್ಚುಳುವುಗಳ ಇಂದ್ರಾದಿ ದೇವತೆಗಳನ್ನೂ ಕೂಡ ಅಕ್ಷೀಕರಿಸದವುಗಳೂ ಗಿರಿ ವೃಕ್ಷಗಳೇ ಆಯುಧ ವಾಗುಳುವುಗಳೂ ಕಣ್ಣೆತ್ತಿ ನೋಡಕೂಡದುವುಗಳೂ ಆಗಿರುವ ಕಪಿಸಹಗಳಿಂದ ಕೂಡಿದ ಮಹಾ ಸೇನೆಯು ಸಮುದ್ರತೀರದಲ್ಲಿ ಬಂದಿಳಿದಿದೆ. ಆ ಕಪಿಸೇನಾಸಮುದ್ರ ದಲ್ಲಿ ಮೃತ್ಯುವಿನ ಮುಖದಂತೆ ಭೀಕರಾನನವುಳ್ಳುವುಗಳೂ ಮೊದಲು ನಮ್ಮ ಈ ಲಂಕೆಯನ್ನು ಬೆಂಕಿಗೆ ತುತ್ತಾಗಿ ಮಾಡಿದ ಕೋಡಗನಂತಿರುವ ಕೋಡಗಗಳೂ ಅಸಂ ಖ್ಯಾತವಾಗಿರುವುವು. ಈ ಕಪಿಗಳ ದಂಡು ನೀನು ಮೊದಲೆಳೆತಂದ ಸೀತೆಯ ಗಂಡನ ಸಹಾಯಕ್ಕಾಗಿ ಬಂದಿದೆಯಂತೆ. ಆ ಮಹಾಕಪಿಬಲಕ್ಕೆಲ್ಲಾ ಸುಗ್ರೀವನೆಂಬುವನು ಒಡೆಯನಂತೆ ಎಂದು ಬಿನ್ನವಿಸಿದರು. ರಾವಣನು ಅವರ ಮಾತುಗಳನ್ನು ಕೇಳಿ-ಹೊಡಿ, ಈ ರಕ್ಕಸನಾಯಿಗಳ ಬಾಯ್ಸಳ ಮೇಲೆ ಬಡಿ. ಇವರು ಹುಲುಮಾನಿಸನ ಕಾಡು ಕೋತಿಗಳ ಹಿಂಡಿಗೆ ಹೆದರಿ ಬೆಬ್ಬರ ಬಿದ್ದೋಡಿಬಂದ ಹೇಡಿಗಳಲ್ಲವೇ ಎಂದು ಹೇಳುತ್ತ ಮಹಾ ಕೋಪದಿಂದ ಕೂಡಿ ಜಗ್ಗನೆ ಸಿಂಹಾಸನದಿಂದಿಳಿದು ಅರಮನೆಗೆ ಹೋಗಿ ಕುಳಿತುಕೊಂಡು ಪ್ರಹಸೈ೦ ದ್ರಜಿದಾದಿ ರಾಕ್ಷಸ ನಾಯಕರನ್ನು ಕರಿಸಿಕೊಂಡು-ಬಡಗಣದಿಕ್ಕಿನ ಸುದ್ದಿಯ ಚಂದವನ್ನು ಕೇಳಿದಿರಾ ? ಸೀತೆಯ ಮೊದಲ ಗಂಡನಿಗೆ ಧೈರ್ಯವು ಮೊಳೆತು ನಮ್ಮೊ ಡನೆ ಕಾದುವುದಕ್ಕೆ ಕಪಿಬಲದೊಡನೆ ಬಂದು ಕಡಲ ದಡದಲ್ಲಿಳಿದಿದ್ದಾನೆಯಂತೆ. ಅದು ನಮಿ ಪೊಳಲನ್ನು ಉರಿಯಲ್ಲಿ ಸೇರಿಸಿದ ಕೋಡಗನಂದದ ಭಟರು ಅಪರಿಮಿತ ವಾಗಿ ಬಂದು ಕೂಡಿರುವರಂತೆ. ದಂಡು ಪಡಿಗಡಲಂತೆ ಅಸಂಖ್ಯಾತವಾಗಿರುವುದಂತೆ. ಈಗ ಈ ರೀತಿಯಾಗಿ ಒದಗಿರುವ ರಾಜಕಾರ್ಯಕ್ಕೆ ಏನು ಯೋಚನೆಯನ್ನು ಹೇಳು ವಿರಿ ಎಂದು ಕೇಳಲು ಆಗ ಪ್ರಹಸ್ತನು ರಾವಣನನ್ನು ಕುರಿತು-ಜೇಯಾ ! ನಿನ್ನ ಅದ್ಭುತಪರಾಕ್ರಮಕ್ಕೆ ಮುಕ್ಕಣ್ಣನಂಜುವನು. ನಿನ್ನ ಪ್ರತಾಪದ ವರ್ತಮಾನವನ್ನು ಕೇಳಿದ ಹರಿಬ್ರಹ್ಮ೦ದ್ರಾದಿಗಳು ತರತರನೆ ನಡುಗಿ ಮೈಮರೆವರು. ಹೀಗಿರು ವಲ್ಲಿ ಈ ಕೋಡಗಪಡೆಯ ಬಲುಮೆಯೆಷ್ಟರದು ? ಆದರೂ ಹಗೆಗಳು ಕೋತಿಗಳೂ ಮನುಷ್ಯರೂ ಆದುದರಿಂದ ಅಲ್ಪರೆಂದು ಭಾವಿಸಿ ಅಸಡ್ಡೆಯಿಂದಿರಕೂಡದು. ಶತ್ರುವು ಅಣುವಿನಷ್ಟಿದ್ದರೂ ಅವನನ್ನು ಆಗಲೇ ತೀರಿಸಿಬಿಡಬೇಕೆಂದು ನೀತಿಜ್ಞರು ಹೇಳುತ್ತಿರು ವರು. ಅದು ಕಾರಣ ನಾವು ಈ ಸಮಯದಲ್ಲಿ ಎಚ್ಚರವಾಗಿರಬೇಕು. ವೀರಭಟರು ಈ ನಮ್ಮ ಲಂಕಾನಗರವನ್ನು ಜಾಗರೂಕತೆಯಿಂದ ಕಾದುಕೊಂಡಿರುವಂತೆ ಅಪ್ಪಣೆ ಯನ್ನು ಕೊಡಿಸು, ಕೋಟೆ ಕೊತ್ತಲು ಹೆಬ್ಬಾಗಿಲು ಈ ಮೊದಲಾದ ಸ್ಥಳಗಳಲ್ಲಿಯ ಪಟ್ಟಣದ ಬೀದಿ ಬೀದಿಗಳ ಮಲೆಗಳಲ್ಲಿಯ ಸಕಲಾಯುಧ ಸಮೇತಗಳಾದ ಚತು ರಂಗ ಬಲಗಳು ಸರದಿಯ ಮೇರೆಗೆ ಎಡಬಿಡದೆ ಕಾದುಕೊಂಡಿರುವಂತೆ ನೇಮಿಸು. ಮತ್ತು ಹಗೆಗಳ ಬಲದಲ್ಲಿ ಬಲುಮೆಯುಳ್ಳವರಾರು ? ಆ ಬಲಿಷ್ಠ ರಲ್ಲಿ ಹೆಸರಾದ ಸಾಹ ಸಿಗಳು ಯಾರು ? ಆ ಸಾಹಸಿಗಳಲ್ಲಿ ದುಡುಕಿಗಳು ಯಾರು ? ಯಾರು ದುಡಕಿಲ್ಲದ