ಈ ಪುಟವನ್ನು ಪರಿಶೀಲಿಸಲಾಗಿಲ್ಲ.

102 ಕಥಾಸಂಗ್ರಹ-೪ ನೆಯ ಭಾಗ ದಕ್ಕೆ ಶಕ್ತನಾದ ನಿನಗೆ ಈ ಅಲ್ಪ ಜೀವಿಯಾದ ರಾವಣನು ಎಷ್ಟು ಮಾತ್ರದವನು ? ಅಲ್ಲದೆ ನಿನ್ನ ದಯೆಯಿಂದ ಇಲ್ಲಿರುವ ಕಪಿವೀರರೂ ಮಹಾಪರಾಕ್ರಮಶಾಲಿಗಳಾಗಿ ದ್ದಾರೆ. ನಿನ್ನ ಅಪ್ಪಣೆಯಾದರೆ ಮೂರೇ ದಿನಗಳಲ್ಲಿ ಬೆಟ್ಟ ಗಳಿಂದಲೂ ಗುಡ್ಡಗಳಿಂದಲೂ ಅನೇಕವಾದ ವೃಕ್ಷಗಳಿಂದಲೂ ಕಡಲನ್ನು ಮುಚ್ಚಿ ಪ್ರಯಾಣಕ್ಕೆ ಅನುಕೂಲವಾದ ಮಾರ್ಗವನ್ನು ಮಾಡಿಸುವೆನು, ಆ ಮೇಲೆ ನೀನು ಅಕ್ಷಣನೊಡನೆ ಕೂಡಿ ಈ ಕಪಿಸೇ ನಾಸಮೇತನಾಗಿ ಲಂಕೆಗೆ ಹೋಗಿ ದುಷನಾದ ರಾವಣನನ್ನು ಸಂಹರಿಸಬಹುದು. ಈಗ ಸಮಸ್ತ ಕಪಿವೀರರೊಡನೆ ಕೂಡಿದ ನಾನು ನಿನ್ನ ಕಾರ್ಯದಲ್ಲಿ ಬದ್ಧ ಕಂಕಣನಾಗಿ ನಿಂತು ನಮ್ಮ ನಮ್ಮ ಪ್ರಾಣಗಳನ್ನು ಹುಲ್ಲಿಗಿಂತಲೂ ಕಡೆಯಾಗಿ ಎಣಿಸುವವರಾಗಿದ್ದೇವೆ. ಇದೋ, ಈ ಅಗ್ನಿ ಯ ಮಗನಾದ ನೀಲನೆಂಬ ವ ನರೋತ್ತಮನು ಮಹಾಸಮರ್ಥ ನಾಗಿಯ ಯುಕ್ತಾಯುಕ್ತ ವಿಚಾರತತ್ಪರನಾಗಿಯೂ ಇರುವದರಿಂದ ಈತನು ಸಕಲ ಕಪಿಬಲಕ್ಕೂ ಯಜಮಾನನಾಗಿರುವಂತೆ ಈತನಿಗೆ ಪಟ್ಟಾಭಿಷೇಕವನ್ನು ಮಾಡಿಸ ಬೇಕು, ಜಾಂಬವಂತನು ಮುದುಕನಾಗಿಯೂ ಅನುಭವಶಾಲಿಯಾಗಿಯ ಸಕಲ ರಾಜನೀತಿಗಳನ್ನು ತಿಳಿದವನಾಗಿಯ ಸದಸದ್ರಿಚಾರವನ್ನು ಬಲ್ಲವನಾಗಿಯೂ ಇರುವು ದರಿಂದ ಈತನನ್ನು ಮಂತ್ರಾಲೋಚನೆಗೆ ಇರಿಸಿಕೊಳ್ಳಬೇಕು, ವಾಲಿಯ ಮಗನಾದ ಕಿಂಗದನು ಯುವರಾಜನಾಗಿಯ ಮಹಾಬಲಶಾಲಿಯಾಗಿಯೂ ಇರುವುದರಿಂದ ಆತನನ್ನು ನಮ್ಮ ಸರ್ವಕಪಿಸೇನೆಗಳ ಮೇಲೆ ವಿಚಾರಣೆಯನ್ನು ಮಾಡಿಕೊಂಡು ಕಾಪಾಡುವ ಕಾರ್ಯದಲ್ಲಿ ನಿಲ್ಲಿಸಬೇಕು, ಪರಾಕ್ರಮದಲ್ಲಿ ರುದ್ರನಿಗೆ ಸಮಾನನಾದ ಆಂಜನೇಯನನ್ನು ನಿಮ್ಮ ಮೈಗಾವಲಿಗೂ ಸೇವೆಗೂ ನೇಮಿಸಿಕೊಳ್ಳಬೇಕು ಎಂದು ವಿಜ್ಞಾಪಿಸಲು; ಆಗ ಶ್ರೀರಾಮಚಂದ್ರನು ಸಂತೋಷದಿಂದ ಆ ಮಾತಿಗೊಪ್ಪಿ ಅಂಗದ ಜಾಂಬವಂತ ಹನುಮಂತ ಇವರನ್ನು ಆಯಾ ಕಾರ್ಯಗಳಲ್ಲಿ ಅಧ್ಯಕ್ಷ ರಾಗಿರುವಂತೆ ನೇಮಿಸಿ ಸುಲಗ್ನದಲ್ಲಿ ಅಗ್ನಿ ಕುಮಾರನಾದ ನೀಲನನ್ನು ಪೀಠದ ಮೇಲೆ ಕುಳ್ಳಿರಿಸಿ ಚತುಸ್ಸಮುದ್ರೋದಕಗಳಿಂದಲೂ ಗಂಗಾದಿ ಸಕಲ ಪುಣ್ಯನದೀ ಜಲಗಳಿಂದಲೂ ದಿವ್ಯ ಷಧಿಗಳ ರಸಗಳಿಂದಲೂ ಅಭಿಷೇಕವನ್ನು ಮಾಡಿ ದಳಪತಿಪಟ್ಟವನ್ನು ಕಟ್ಟಿಸಿದನು. ಆಗ ಸಕಲ ಕಪಿಸೇನಾಪತಿಗಳೂ ಬಂದು ಬಂದು ನೀಲನನ್ನು ಕಾಣಿಸಿಕೊಂಡು ಪ್ರಷ್ಟ ಫಲಗಳನ್ನು ಕೈಗಾಣಿಕೆಯಾಗಿ ಕೊಟ್ಟು ಕೈ ಮುಗಿದರು. ಆ ಮೇಲೆ ನೀಲನೆದ್ದು ರಾಮ ಲಕ್ಷ್ಮಣ ಸುಗ್ರೀವ ಜಾಂಬವಂತರಿಗೆ ನಮಸ್ಕಾರವನ್ನು ಮಾಡಿ ಸಕಲ ಕಪಿ ಸೇನಾಪತಿತ್ವವನ್ನು ಹೊಂದಿ ತನ್ನ ತಂದೆಯಾದ ಅಗ್ನಿಯಂತೆ ತೇಜಸ್ಸಂಪನ್ನನಾಗಿ ರಾರಾಜಿಸಿದನು. ತರುವಾಯ ಮಾರ್ಗಶಿರಮಾಸದ ಶುಕ್ಲಪಕ್ಷದಲ್ಲಿ ಉತ್ತರಾನಕ್ಷತ್ರಯುಕ್ತ ವಾದ ಅಷ್ಟ ಮಿಯ ದಿನದ ನಡುವಗಲೆಂಬ ಅಭಿಜಿನ್ನುಹೂರ್ತದಲ್ಲಿ ಮಹಾಹರ್ಷ ದೊಡನೆ ವಿಜಯ ಪ್ರಯಾಣವನ್ನು ಬೆಳಿಸಿ ಶ್ರೀರಾಮನು ಹನುಮಂತನ ಮೇಲೆ ಕೂತು ಕೊಂಡು ಹೊರಟನು. ಲಕ್ಷ್ಮಣನು ಅಂಗದನ ಮೇಲೇರಿ ಬಂದನು, ಸಮಸ್ತ ಕಪಿ ಸೇನೆಗಳೂ ನೀಲನ ಅಪ್ಪಣೆಯ ಮೇರೆಗೆ ದೊಡ್ಡ ದೊಡ್ಡ ಮರಗಳನ್ನೂ ಪರ್ವತ ಶಿಖರ