ಸೇತುಬಂಧನದ ಕಥೆ 109 ಮನ ಕಿವಿಗಳಿಗೆ ಶರಣಾಗತನಾದ ವಿಭೀಷಣನ ದೈನ್ಯವಚನಾಮೃತವು ಸಂತೋಷ ವಯಲು ; ಎಸಳುಗಣ್ಣ ಡೆ ನೋಟದಿಂದ ವಿಭೀಷಣನನ್ನು ನೋಡಿ ಉಬ್ಬಿದ ಹರ್ಷ ದಿಂದ ಕೂಡಿ ಭಕ್ತ ಮುಖ್ಯನಾದ ಈತನನ್ನು ಅಂಗೀಕರಿಸಬೇಕೆಂದು ನಿಶ್ಚಯಿಸಿ ಹನು ಮಂತನ ಮುಖವನ್ನು ನೋಡಲು ; ಆತನು ಒಡೆಯನ ಇಂಗಿತವನ್ನು ತಿಳಿದು ಜತೆ ಯಲ್ಲಿ ಯುವರಾಜನಾದ ಅಂಗದನನ್ನು ಕರೆದುಕೊಂಡು ವಿಭೀಷಣನ ಬಳಿಗೆ ಬಂದು ಮೊದಲೇ ಅವನ ಸುಗುಣಗಳನ್ನು ತಿಳಿದವನಾಗಿದ್ದ ಕಾರಣ ಉಕ್ಕುತ್ತಿರುವ ಆನಂದ ಬಾಷ್ಪವುಳ್ಳವನಾಗಿ ಆತನನ್ನು ಆಲಿಂಗಿಸಿ ಮುಗುಳ್ಗೆಯುಳ್ಳವನಾಗಿ--ಏನ್ಯ ವಿಭೀ ಷಣನೇ, ಇದ್ದುದಕ್ಕಿದ್ದ ಹಾಗೇ ಬರುವಿಕೆಯಾಯಿತು. ಕಾರಣವೇನು ? ನಿಮ್ಮಣ್ಣ ನಾದ ರಾವಣನ ಅಪ್ಪಣೆಯೋ ? ಅಥವಾ ನಿನ್ನ ಮನಸ್ಸಿನ ಯೋಚನೆಯೋ ? ಈ ಎರಡರೊಳಗೆ ಯಾವುದು ನಿಶ್ಚಯವು ? ನಿಜವಾಗಿ ತಿಳಿಸುವವನಾಗು ಎಂದು ಬೆಸ ಗೊಳ್ಳಲು ; ವಿಭೀಷಣನು-ನೀನು ಕೇಳಿದ ಎರಡು ವಿಧವಾದ ಉದ್ದೇಶಗಳಿಂದಲೂ ನಾನು ಬಂದೆನು ಎನ್ನಲು ; ಆಂಜನೇಯನು ಕಣ್ಣು ಸನ್ನೆ ಯಿಂದ ವಿಭೀಷಣನ ಕಾವ ಲಿಗೆ ಅಂಗದನನ್ನು ಇರಿಸಿ ತಾನು ಹೊರಟು ಶೀಘ್ರವಾಗಿ ರಾಮನ ಬಳಿಗೆ ಬಂದು ಜೀಯಾ, ಈಗ ಬಂದಿರುವವನು ರಾವಣನ ತಮ್ಮ ನಾದ ವಿಭೀಷಣನು, ಈತನು ಚೆನ್ನಾಗಿ ನೀತಿಯನ್ನು ತಿಳಿದವನು, ಅಸಹಾಯ ಶೂರನು. ಉದಾರ ಗುಣಮಣಿ ಭೂಷಿತನು. ಧೀರನು ಮತ್ತು ಧಾರ್ಮಿಕನು, ಇವನಲ್ಲಿ ಮಾಯೆಯೆಂಬುದು ಸ್ವಲ್ಪವಾದರೂ ಇಲ್ಲ, ಇವನು ಮೊದಲು ಲಂಕಾದುರ್ಗದಲ್ಲಿ ದುಷ್ಟ ನಾದ ರಾವಣ ನಿಗೆ ನೀತಿಯನ್ನು ಬೋಧಿಸಿ ನನಗುಂಟಾಗಿದ್ದ ಕಷ್ಟಗಳನ್ನೆಲ್ಲಾ ತಪ್ಪಿಸಿದನು, ಈತನು ರಕ್ಕಸರೊಳಗೆ ತಪ್ಪಿ ಹುಟ್ಟಿದ್ದಾನೆ. ಈತನು ತನ್ನ ಅಣ್ಣನಾದ ರಾವಣನಿಗೆ ಜಗತ್ಪತಿ ಯಾದ ರಾಮನ ಹೆಂಡತಿಯನ್ನು ಬಿಟ್ಟು ಬದುಕು, ಆಕೆಯನ್ನು ಬಿಡದಿದ್ದರೆ ಈ ಭೂಲೋಕದಲ್ಲಿ ನಿನಗೆ ಉಳಿವಿಲ್ಲವು ಎಂದು ಬಹುವಿಧವಾಗಿ ತಿಳಿಯ ಹೇಳಿದರೂ ಅವನು ಗರ್ವದಿಂದ ಕೂಡಿದವನಾಗಿ ಕೇಳದೆ ತಮ್ಮನೆಂದಾದರೂ ಗಣಿಸದೆ ವಿರೋಧ ದಿಂದ ಸಭೆಯನ್ನು ಬಿಟ್ಟು ನೂಕಿಸಿ ಬಿಟ್ಟುದರಿಂದ ಈ ವಿಭೀಷಣನು ದೇವನಾದ ನಿನ್ನ ಅಡಿದಾವರೆಗಳನ್ನು ಸೇವಿಸಿ ಕೃತಾರ್ಥನಾಗುವುದಕ್ಕೆ ಬಂದಿದ್ದಾನೆ ಎಂದು ಬಿನ್ನ ವಿಸಿದನು. ಆಗ ಸುಗ್ರೀವನು ಕೈಮುಗಿದು ರಾಮನನ್ನು ಕುರಿತು ಸ್ವಾಮಿ, ಈ ಜಗ ತಿನ ಜೀವರಾಶಿಯ ಆಂತರ್ಯವು ಸ್ವಲ್ಪವಾದರೂ ನಿನಗೆ ತಿಳಿಯದಿರುವುದಿಲ್ಲ. ಹೀಗಿದ್ದರೂ ನಾನು ನಿನ್ನ ಸನ್ನಿಧಾನದಲ್ಲಿ ಭಯಭಕ್ತಿಯಿಂದ ಅರಿಕೆಮಾಡಿಕೊಳ್ಳುವ ಮಾತುಗಳನ್ನು ಲಾಲಿಸಿ ಸರ್ವಜ್ಞ ಚಿತ್ರಕ್ಕೆ ಒಪ್ಪಿಕೆಯಾದ ರೀತಿಯಿಂದ ನಮ್ಮನ್ನು ನಡಿಸಬಹುದು, ಅದೇನೆಂದರೆ ರಕ್ಕಸರು ಸ್ವಭಾವವಾಗಿ ಮಾಯಾವಿಗಳು, ರಾವಣನು ಸಕಲ ವೇದಶಾಸ್ತ್ರಗಳನ್ನೂ ಸಕಿ ರಾಜನೀತಿಗಳನ್ನೂ ತಿಳಿದವನೇ ಹೊರತು ಮೂಢ ನಲ್ಲ, ವಿರೋಧಿಗಳು ತನ್ನ ಮೇಲೆ ದಂಡೆತ್ತಿ ಬಂದಿರುವ ಇಂಥ ಸಮಯದಲ್ಲಿ ಸಕಲ ಮರ್ಮಗಳನ್ನು ತಿಳಿದವನಾಗಿಯ ಅಪ್ರತಿಮ ವೀರನಾಗಿಯೂ ತನ್ನ ತಮ್ಮನಾ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.