118 ಕಥಾಸಂಗ್ರಹ-೪ ನೆಯ ಭಾಗ `ಗಿರಿಯು ನಮ್ಮದು, ನಿನ್ನ ರಾಮನು ನನಗೆ ಮಿತ್ರನು, ಇದು ನಿಶ್ಚಯವು, ಹುಸಿ ಯಲ್ಲ, ಅದು ಕಾರಣ ಚಿತ್ತೈಕಾಗ್ರತೆಯಿಂದ ನಮ್ಮನ್ನು ನೋಡು ಎಂದು ಸುರಮು ನಿಗಳ ಅಗತ್ಯವಾದ ತಪಸ್ಸಿಗೂ ದುರ್ಲಭವಾದ ತನ್ನ ಸದ್ಯೋಜಾತಾದಿ ಪಂಚಮು ಖಗಳನ್ನು ಧರಿಸಿ ಕಾಣಿಸಿಕೊಂಡನು. ಅಂಗದನು ನೋಡಿ ಮನಸ್ಸಿನಲ್ಲಿ ವಂದಿಸಿನಾನೇನು ಹೆಡ್ಡನೇ ? ನೀನು ಶಂಕರನೆಂದೂ ಈ ಪರ್ವತವು ನಿನ್ನ ದೆಂದೂ ತಿಳಿಯೆನೇ ? ನೀನು ನನ್ನೊಡೆಯನಿಗೆ ಮಿತ್ರನಾಗಿದ್ದ ಮೇಲೆ ಈ ಗಿರಿಯು ಆತನ ಕಾರ್ಯಕ್ಕೆ ಉಪ ಯೋಗವಾಗತಕ್ಕುದೇ ನ್ಯಾಯವು. ನಾನು ಇಷ್ಟು ಮಾತ್ರಕ್ಕೆ ಸ್ವಾಮಿ ಕಾರ್ಯವನ್ನು ಬಿಡತಕ್ಕವನಲ್ಲ. ಇದೆಲ್ಲಾ ಏತಕ್ಕೆ ?ನನ್ನೊಡೆಯನಿರುವ ಸ್ಥಳವು ಇಲ್ಲಿಗೆ ಬಹು ದೂರವೇ? ಈ ಗಿರಿಯನ್ನು ತರಬೇಡ ಎಂದು ಆತನಪ್ಪಣೆಯು ಬರಲಿ' ಆ ಮೇಲೆ ಈ ಗಿರಿಯನ್ನು ಇಲ್ಲೇ ಬಿಟ್ಟು ಮತ್ತೊಂದು ಕಡೆಗೆ ಹೋಗುವೆನು ಎನ್ನಲು ; ಆಗ ಮಹೇಶ್ವರನು ನಗುತ್ತ ಸವಿಾಪದಲ್ಲಿರುವ ತನ್ನ ಮಕ್ಕಳಾದ ಗುಹಗಣೇಶರನ್ನು ನೋಡಿ ಆಗಲೆ ರಾಮ ನ ಮೂರ್ತಿಯನ್ನು ಧರಿಸಿ ಅಂಗದನನ್ನು ಕುರಿತು--ಎಲೈ ಕಂದಾ, ಕೇಳು. ಈ ಶಂಕರ ನಿಗೂ ನನಗೂ ಭೇದವಿಲ್ಲ. ಲೋಕರಕ್ಷಣಾರ್ಥವಾಗಿ ಭೇದವನ್ನು ಕಲ್ಪಿಸಿಕೊಂಡಿರು ವೆವು. ವಿಚಾರದಿಂದ ಅದು ಮಿಥ್ಯವಾಗಿರುವುದು. ಆದುದರಿಂದ ಈ ಗಿರಿಯನ್ನು ಬಿಟ್ಟು ಇದರ ಸುತ್ತುಮುತ್ತಣ ಬೆಟ್ಟ ಗಳನ್ನು ಕಿತ್ತು ಕೊಂಡು ಬಾ ಎಂದು ಹೇಳಿ ಅದೃಶ್ಯನಾ ಗಲು ; ಆಗ ಅಂಗದನು ಆ ಕೈಲಾಸಪರ್ವತವನ್ನು ಹೆಚ್ಚು ಕಡಿಮೆಯಾಗದಂತೆ ಮೊದ ಲಿದ್ದ ಹಾಗೆಯೇ ಇಟ್ಟು ಅದರ ಸವಿಾಪದಲ್ಲಿದ್ದ ಗಿರಿಗಳನ್ನು ಕಿತ್ತು ತೆಗೆದು ಕೊಂಡು ಬಂದು ನಳನಿಗಿತ್ತು. ಅನಂತರದಲ್ಲಿ ನೀಲನು ಮ೦ದರಪರ್ವತಕ್ಕೆ ಹಾರಿಹೋಗಿ ಅದನ್ನು ಕೀಳುವುದ ಕ್ರಾರಂಭಿಸಲು ; ಆ ಕೂಡಲೆ ದೇವೇಂದ್ರನು ಓಡಿಬಂದು--ಎಲೈ ಕನಾಯಕನೇ, ಈ ಪರ್ವತದಲ್ಲಿ ನನ್ನೊಡನೆ ಸಕಲ ದೇವತೆಗಳೂ ವಾಸಮಾಡಿಕೊಂಡಿರುವರು. ಇದ ರಲ್ಲಿ ಮೈತಸಂಜೀವಿನ್ಯಾದಿ ದಿವೌಷಧಿಗಳಿವೆ. ಇದು ಅಕ್ಕಿ ಪತಿಯಿಂದ ಪ್ರತಿಷ್ಠಿತವಾ ದ ಸರ್ವತವು, ಇದನ್ನು ಕೀಳಬೇಡವೆಂದು ಬೇಡಿಕೊಳ್ಳಲು ; ನೀಲನು ಓರೆಗಣ್ಣಿನಿಂದ ನೋಡಿ-ನೀನಾರು, ಇಂದ್ರನೇ ? ಹು ! ಹು ! ಇಂದ್ರ ನಾಗು, ಚ೦ದ್ರನಾಗು ! ಹರ ನಾಗು ! ಹಿರಣ್ಯಗರ್ಭನಾಗು ! ಅದರಿಂದ ನಮಗೇನು ? ಎಂದು ಕೇಳುತ್ತಿರಲು ; ಕೂ ಡಲೆ ನಾರದ ಮಹರ್ಷಿಯು ಬಂದು--ಎಲೈ ವೀರನಾದ ನೀಲನೇ, ಶ್ರೀರಾಮನು ನಿಮ್ಮೆಲ್ಲರಿಗೂ ಒಡೆಯನಾಗಿರುವಂತೆ ನಮಗೂ ಒಡೆಯನಾಗಿರುವನು. ಅದು ಕಾರಣ ದೇವನಿವಾಸಸ್ಥಾನವಾದ ಈ ಗಿರಿಯನ್ನು ಕೀಳಬೇಡ ಎಂದು ಬಹಳ ವಿಧವಾಗಿ ಹೇಳಿ ಕೊಂಡಾಗ ಕೇಳದೆ ಹೋದುದರಿಂದ ಕಡೆಗೆ ಅವನ ತಂದೆಯಾದ ಆಗ್ನಿ ಯನ್ನು ಕರೆ ದು ಕೊಂಡು ಬಂದು ಹೇಳಿಸಿದುದರಿಂದ ನೀಲನು ಆ ಗಿರಿಯನ್ನು ಅಲ್ಲೇ ಬಿಟ್ಟು ಅದರ ಸಮಿಾಸದ ಪರ್ವತಗಳನ್ನು ಕಿತ್ತು ತೆಗೆದು ಕೊಂಡು ಬಂದು ನಳನ ಕೈಗೆ ಕೊಟ್ಟನು. ಮೊದಲು ಅಂಗದನು ತಂದ ಗಿರಿಗಳಿಂದ ಸೇತುವು ಹತ್ತು ಗಾವುದಗಳ ವರೆಗೂ ಸಾಗಿ. ದ್ವಿತು. ಈಗ ಈ ನೀಲನು ತಂದ ಪರ್ವತಗಳಿಂದ ಹತ್ತು ಯೋಜನಗಳ ವರೆಗೂ ಸಾಗಿತು.
ಪುಟ:ಕಥಾ ಸಂಗ್ರಹ - ಭಾಗ ೨.djvu/೧೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.