130 ಕಥಾಸಂಗ್ರಹ-೪ ನೆಯ ಭಾಗ ಸಂಭೂತವಾದ ಸುಂಟರಗಾಳಿಯು ಉತ್ಪಾತಮೇಘಮಾರುತದಂತೆ ಹೊರಟು ರಾವ ಣನ ಓಲಗದ ಚಾವಡಿಯಲ್ಲಿ ನುಗ್ಗಿ ಅಲ್ಲಿದ್ದವರನ್ನು ಅಪ್ಪಳಿಸಿ ಕೆಡವಿತು, ಮತ್ತೆ ರಾಕ್ಷಸಜನರು ಬಂದು ಆ ಸುರವಿರೋಧಿಯ ಮಗಿನೊಳಗೆ ಕುರಿಕೋಣಗಳ ಹಿಂಡುಗಳನ್ನು ಹೊಗಿಸಿದರು, ಆ ಮೇಲೆ ಮದಿಸಿದ ಆನೆಗಳನ್ನು ಅವನ ಮೈ ಮೇಲೆ ಬಿಟ್ಟು ತುಳಿಸಿದರು, ಆಗ ಅವನ ಸರ್ವಾಂಗಗಳಲ್ಲೂ ಸಂಚರಿಸುತ್ತಿರುವ ಆನೆಗಳು ತಲೆಗೂದಲುಗಳಲ್ಲಿರುವ ಹೇನುಗಳು ದಾರಿಯನ್ನು ಕಾಣದೆ ಅಲ್ಲೇ ಸುತ್ತು ವಂತೆ ಸುತ್ತುತ್ತ ಅವನ ರೋಮಕೂಪಗಳಲ್ಲಿ ಬಿದ್ದು ಕೆಡೆದುವ್ರ, ಮತ್ತು ಕೆಲವು ಗಜಗಳು ಅವನ ಸೀನಿನಿಂದ ಸಿಡಿದು ಬಿದ್ದ ಸಂಬಳದಲ್ಲಿ ಸಿಕ್ಕಿ ಶ್ರೇಷ್ಟ ಸಂಕ್ರಾಂತವಾದ ನೊಣಗ ಳಂತೆ ಮಿಡುಕುತ್ತಿದ್ದುವು. ಆಹಾ ! ಈ ಮೊಬ್ಬಿಗನ ಮೈಗೊಬ್ಬನ್ನು ಏನು ಹೇಳುವುದು? ಮತ್ತೆ ಕೆಲವರು ಚುಕ್ಕಿಗುವರರು ಸಬಳಗಳನ್ನು ತಂದು ಅವನ ಬಲ್ಮಡಕೆಯಂತಿರುವ ಕಿವಿಗಳಲ್ಲಿ ಹಾಕಿ ತಿವಿದು ತಿರುಗಿಸಿದರು, ಅದರಿಂದ ಮುಳ್ಳುಹಂದಿಗಳ ಮುಳ್ಳುಗಳನ್ನು ತಂದು ಕಿವಿಗಳಲ್ಲಿರುವ ಗುಗ್ಗೆಯನ್ನು ತೆಗೆದಂತಾಗಿ ಅವನು ಸುಖನಿದ್ರೆಗೆಯ್ದನು. ಆ ಮೇಲೆ ಗಿರಿಗಳನ್ನು ತಂದು ತಂದು ಅವನ ಮೈ ಮೇಲೆ ಹೇರುತ್ತಿರಲು ; ಮೈಯನ್ನು ತಟ್ಟಿ ದಂತಾಗಿ ಸುಖದಿಂದ ನಿದ್ರಿಸಿದನು. ' ಈ ರೀತಿಯಾಗಿ ಎಷ್ಟು ವಿಧದಿಂದ ಪ್ರಯಾಸಪಟ್ಟಾಗ ಅವನೇಳದಿರಲು ; ಆಗ ದನುಜರೆಲ್ಲರೂ ನಿರಾಶರಾಗಿ ರಾವಣನ ಬಳಿಗೆ ಬಂದು--ಸ್ವಾಮಿ, ಎಷ್ಟು ವಿಧವಾದ ಘೋರ ಕೃತ್ಯಗಳನ್ನು ಮಾಡಿದಾಗ ಅವನು ಏಳಲಿಲ್ಲ, ಅದರಿಂದ ಅನೇಕ ಜನ ರಾಕ್ಷಸವೀರರು ಮಡಿದರು. ಅನೇಕರು ಹೆದರಿ ಓಡಿದರು. ಇನ್ನು ಮೇಲೆ ಅವನನ್ನು ಎಬ್ಬಿಸುವ ಉಪಾಯವು ಇನ್ನಾ ವದಿರುವುದೋ ನಮಗೆ ತಿಳಿಯದು, ಅಪ್ಪಣೆಯಾಗ ಬೇಕು ಎಂದು ಅರಿಕೆಮಾಡಲು ; ರಾವಣನು--ಅವನಿಗೆ ವರವನ್ನು ಕೊಟ್ಟ ಬೊಮ್ಮ ನನ್ನು ಕರೆದುಕೊಂಡು ಬನ್ನಿರೋ ; ಅವನೇ ಈ ನಿದ್ರಾಜಾಡ್ಯವನ್ನು ಪರಿಹರಿಸಲಿ ಎಂದು ಅಪ್ಪಣೆಯನ್ಶಿಯಲು ; ಕೂಡಲೆ ರಾಕ್ಷ ಸದೂತರು ಓಡಿಹೋಗಿ ಬಿದಿಯನ್ನು ಕರೆದುತಂದು ರಕ್ಕಸರೊಡೆಯನೆದುರಿನಲ್ಲಿ ನಿಲ್ಲಿಸಿದರು. ಕಮಲಜನು ಗಡಗಡನೆ ನಡು ಗುತ್ತ ಕೈಗಳಿಂದ ಬಾಯಿಯನ್ನು ಮುಚ್ಚಿಕೊಂಡು ನನ್ನನ್ನು ಕರಿಸಿದ ಕಾರ್ಯವೇ ನೆಂದು ಕೇಳಿದುದಕ್ಕೆ ಬೇರೆ ಕೆಲಸವೇನು ? ಬೇಗ ಕುಂಭಕರ್ಣನನ್ನು ಎಬ್ಬಿಸು, ಹೋಗು ಎನ್ನಲು ; ಪೊಂಬೊಡೆಯನು ಕೈಗಳಿಂದ ಎದೆಯನ್ನು ಸವರಿಕೊಳ್ಳುತ್ರ ಶೀಘ್ರ ದಿಂದ ಕುಂಭಕರ್ಣನ ಬಳಿಗೆ ಬಂದು ಅವನ ಮುಸುಡಿನ ಮುಂಗಡೆಗೆ ಸುಳಿಯಲಮ್ಮದೆ ಮಂಡೆಯ ಹಿಂಗಡೆಯಲ್ಲಿ ಕುಳಿತು ಕೊಂಡು ತನ್ನ ಕಮಂಡುಲೋದಕವನ್ನು ಮಂತ್ರಿಸಿ ಅವನ ಮಗಿನ ಸೊಳ್ಳೆಗಳಲ್ಲಿ ಸುರಿಯಲು ; ಆ ಕುಂಭಕರ್ಣನು ಎಚ್ಚರವನ್ನು ಹೊಂದಿ ಬೆದರುತ್ತ ಎದ್ದು-ಯಾರವರು ನನ್ನ ನಿದ್ದೆಯನ್ನು ಕೆಡಿಸಿದ ಪಾಪಿಗಳು ? ಎನ್ನಲು; ಆ ಮಾತನ್ನು ಕೇಳಿ ಸವಿಾಪದಲ್ಲಿದ್ದ ಜನವೆಲ್ಲಾ ಸದ್ದು ಮಾಡದೆ ಹಾರಿ ನೆಗೆದು ತೋರಿದ ಕಡೆಗೆ ಓಡಿಹೋಯಿತು. ಆ ಮೇಲೆ ಕುಂಭಕರ್ಣನು ಸಂಪೂರ್ಣವಾಗಿ ನಿದ್ದೆಯ ಮರವೆಯನ್ನು ಬಿಟ್ಟು ಪಟ್ಟಾಗಿ ಕುಳಿತು ಈಗ ನನ್ನ ಹಸಿವಿಗಾಗಿ, ಬ್ರಹ್ಮಾಂಡ ಮಂಡಲವನ್ನೇ ನುಂಗುವೆನೋ ? ಬಾಯಾರಿಕೆಗೆ ಏಳು ಕಡಲುಗಳನ್ನು
ಪುಟ:ಕಥಾ ಸಂಗ್ರಹ - ಭಾಗ ೨.djvu/೧೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.