ಇಂದ್ರಜಿತ್ಸಂಹಾರ 149 ಸೇರಿಸಿಕೊಂಡು ಪಲ್ಟಿ ರಿದು ಹೆಣಗಳ ಮರೆಯಲ್ಲಿ ಅಡಗಿಕೊಂಡು ತಾವೂ ಹೆಣಗಳೋ ಎಂಬಂತೆ ತೋರಿಸಿಕೊಂಡು ವು. ಕೆಲವು ಒದೆದಾಡುತ್ತಿರುವಂತೆ ಮೆಲ್ಲ ಮೆಲ್ಲನೆ ಸರಿದು ಹೋಗಿ ಗಿಡಮರಗಳನ್ನೇರಿ ಬದುಕಿದೆವೆಂದು ಹೇಳಿಕೊಂಡುವು ಎಂಬ ಕಪಿಒಲದ ವಿದ್ಯಮಾನಮಾತ್ರವೇ ಆಶ್ಚರ್ಯವಲ್ಲ, ಅಮರಾವತಿಯಲ್ಲಿ ತ್ರಿದಶರೊಡೆಯನು ಬೆದರಿ ದನು. ಅಂತಕನು ನೆಗೆದು ಬಿದ್ದು ಮೈ ತಿಳಿಯದೆ ಕನವರಿಸಿದನು, ಆಗ್ನಿ ಯು ಹಾಯ್ದನು. ವರುಣನು ಸರಿದೋಡಿದನು. ಕುಬೇರನು ಅಡಗಿಕೊಂಡನು, ವಾಯುವು ಗುಹೆಯಲ್ಲಿ ಸೇರಿದನು. ಈಶಾನನು ಅದೃಶ್ಯನಾದನು, ನಿರುತಿಯು ಸಿಕ್ಕಿದ ಕಡೆಗೋಡಿ ದಿಕ್ಕು ಗೆಟ್ಟು ಬಂದು ರಾವಣಿಯನ್ನೇ ಮರೆಹೊಕ್ಕನು, ವಿಲಯ ಕಾಲದ ನೀಲಾಂಬುದಕಾಂ ತಿಯೋ ? ರಕ್ಕಸಗುವರನ ಮೈಬಣ್ಣವೋ ? ಗುಡುಗುಗಳೋ ? ಅವನ ಆರ್ಭಟ ಗಳೋ ? ಹೊಳೆಯುತ್ತಿರುವ ವಿದ್ಯುಚ್ಛಾಲವೋ ? ಥಳಥಳಿಸುತ್ತಿರುವ ಬಲ್ಲೇರಿನ ಡಾಳವೋ ? ಹೊಡೆಯುತ್ತಿರುವ ಮುಂಗಾರ್ಸಿಡಿ೦ಡವೋ ? ಬಾಣಪರಂಪರಾಘಾ ತವೋ ? ಎಂಬು ದನು ಯಾರು ವಿವೇಚಿಸಿ ತಿಳಿದು ಹೇಳಬಲ ವರು ? ಆ ಕೊಳುಗು ಭದ ಚಿತ್ರವಧೆಯ ವೈಚಿತ್ರವನ್ನು ನೋಡಿ ದಣಿಯುವುದಕ್ಕೆ ಎರಡು ಕಣ್ಣಳು ಸಾಲವು, ಯೋಚಿಸುವುದಕ್ಕೆ ಮನಸ್ಸಿನ ವಿಶಾಲತೆಯು ಸಂಕೋಚವು, ನೋಡುವು ದಕ್ಕೆ ಇಂದ್ರನು, ಹೇಳುವುದಕ್ಕೆ ಆದಿಶೇಷನು ಬಂದು ಧೈರ್ಯದಿಂದ ನಿಂತರೆಂತಾಗು ವದೋ ತಿಳಿಯದು, ಶಿವ, ಶಿವಾ ! ಮಾರಿಮುಳಿದಂತಾಯಿತು, ನೆತ್ತರಿನ ತೊರೆಯಲ್ಲಿ ತೇಲಿಕೊಂಡು ಹೋಗುತ್ತಿರುವ ಕಪಿಗಳಿಗೆ ಗಣನೆಯೇ ಇಲ್ಲ ವು. ಕೊಡಗಗಳಲ್ಲಿ ಅಳಿದುಳಿದ ಹಲವು ಕೆಲವು ಹೆಣಗಳನ್ನು ಒಗೆದು ಬಗೆದು ಹೊಕ್ಕು ಹುದುಗಿಕೊಂ ಡುವು, ಕೆಲವು ಬೆಟ್ಟಗಳ ಇರುಬಿನಲ್ಲಿ ಹುದುಗಿದುವು. ಕೆಲವು ಹರಿಯುತ್ತಿರುವ ರಕ್ತನದೀಪ್ರವಾಹದಲ್ಲಿ ನೆಗೆದು ಬಿದ್ದು ಮುಳುಗಿ ಮಾಯವಾದುವು, ಬಡಗೋತಿಗಳ ಸುದ್ದಿ ಯಂತಿರಲಿ, ಮಹಾಗಿರಿಗಳನ್ನು ತಮ್ಮ ತಲೆಗಳ ಮೇಲೆ ಕೊಡೆಯಂತೆ ಹಿಡಿದು ಕೊಂಡು ಪಟಚೆಂಡಿನಂತೆ ಸ್ಥಳದಿಂದ ಸ್ಥಳಕ್ಕೆ ನೆಗೆಯುತ್ತ ಬಾಲವನ್ನೆತ್ತಿ ಕೊಂಡು ಅಂಬರತಳದಲ್ಲಿ ಹಾರಿಯಾಡುತ್ತಿರುವ ನಳನೇ ಮೊದಲಾದ ಪ್ರಖ್ಯಾತವಾನರ ವೀರರ ಸರ್ವಾವಯವಗಳಲ್ಲೂ ಅಂಬು ಗಳು ನೆಟ್ಟು ಕೊಂಡುವು. ಮತ್ತು ಅಮಿತ ಶಕ್ತನಾದ ರಾವಣಿಯು ಯುದ್ಧಾ೦ಗಣವೆಂಬ ಕಣದಲ್ಲಿ ಕಪಿವೀರಶಿರಸ್ಸುಗಳೆಂಬ ತೆನೆಗಳನ್ನು ಕೊಯೊಟ್ಟಿದನು, ವಿಶೇಷವೇಕೆ ? ಆ ರಣಭೂಮಿಯು ಹರಿಯುತ್ತಿರುವ ರಕ್ತದಿಂ ದಲೂ ಬಿದ್ದಿರುವ ತಲೆಬುರುಡೆಗಳಿಂದಲೂ ಹೊರಳಿಯಾಡುತ್ತಿರುವ ಕಬಂಧಗಳಿ೦ ದಲೂ ಹೊರಟಿರುವ ಕರುಳುಗಳಿಂದಲೂ ಕುಣಿಕುಣಿದಾಡುತ್ತಿರುವ ಬಾಲಗಳಿಂದಲೂ ತುಂಡುತುಂಡಾದ ತೊಡೆತೋಳುಗಳಿಂದಲೂ ಸೀಳಿ ಹೋಳಾದ ಶರೀರಗಳಿಂದಲೂ ಹೊರಗೆ ಬಂದು ನೇಲುತ್ತಿರುವ ಕಣ್ಣು ಗುಡ್ಡು ಗಳಿಂದಲೂ ಕತ್ತರಿಸಲ್ಪಟ್ಟು ಬಿದ್ದಿರುವ ಪಾದಗಳಿಂದಲೂ ಬಾಯ್ಕ ಳನ್ನು ಕಿಸಿದು ಹಲ್ಲುಗಳನ್ನು ತೋರಿಸುತ್ತ ಬಿದ್ದಿರುವ ಕಪಿರಾಕ್ಷಸ ಶವಗಳಿಂದಲೂ ಕೂಡಿ ನೋಡುವವರಿಗೆ ಹೇಸಿಕೆಯನ್ನೂ ಭಯವನ್ನೂ ಹುಟ್ಟಿಸುತ್ತಿದ್ದಿತು. ಈ ರೀತಿಯಾಗಿ ಭಯದಿಂದ ಬಾಧೆಯಿಂದಲೂ ಮೃತಿಯಿಂ ದಲೂ ಕಪಿವೀರರೆಲ್ಲಾ ಭೂಮಿಯಲ್ಲಿ ಬಿದ್ದೋರಗಿದರು.
ಪುಟ:ಕಥಾ ಸಂಗ್ರಹ - ಭಾಗ ೨.djvu/೧೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.