156 ಕಥಾಸಂಗ್ರಹ-೪ ನೆಯ ಭಾಗ ನೀವು ಇರಿತದಿಂದ ಆಂಜನೇಯನ ಬಳಿಗೆ ಹೋಗಿರಿ ಎಂದು ಕಳುಹಿಸಿ ಅಂಗದನಿಗೆ ಲಕ್ಷ ಣನನ್ನೂ ನೀಲನಿಗೆ ವಿಭೀಷಣನನ್ನೂ ಬೆಂಬಲವಾಗಿ ಕಳುಹಿಸಿದನು. ಅನಂತರ ದಲ್ಲಿ ಜಾಂಬವಂತನು ತ್ವರಿತಗತಿಯಿಂದ ಬಂದು ಮೂರ್ಛಿತನಾಗಿ ಬಿದ್ದಿರುವ ಆಂಜನೇ ಯನನ್ನೂ ಅವನ ಸವಿಾಪದಲ್ಲಿ ಕಡಿಯಲ್ಪಟ್ಟು ಬಿದ್ದಿರುವ ಸೀತೆಯ ದೇಹವನ್ನೂ ನೋಡಿ ಇದು ಭಯಭಾ೦ತರಾದ ನೀಚರಾಕ್ಷಸರ ಕೆಲಸವೆಂದು ಯೋಚಿಸಿ ದುಃಖ ವೆಂಬ ಬಲ್ಲ ಡಲಲ್ಲಿ ಬಿದ್ದು ಎಚ್ಚೆತ್ತು ಆಂಜನೇಯನಿಗೆ ಶೈತ್ಯೋಪಚಾರವನ್ನು ಮಾಡಿ ಎಬ್ಬಿಸಲು ; ಅವನು ಮೊದಲಿಂದಲೂ ನಡೆದ ಕಾರ್ಯಸ್ಥಿತಿಯನ್ನೆಲ್ಲಾ ಹೇಳಿದನು. ಆ ಮೇಲೆ ಆ ಮಾಯಾಭೂಮಿಜೆಯ ತಲೆಯಟ್ಟೆಗಳನ್ನು ತೆಗೆದು ಕೊಂಡು ಬಂದು ರಾಮನ ಮುಂದಿಳುಹಿದನು. ಆಗ ರಾಮನಿಗೆ ಹೊಟ್ಟೆಯ ತುಂಬ ಹೊಸ ಸುಣ್ಣ ವನ್ನು ತುಂಬಿ ನೀರು ಹೊಯ್ದಂತಾಗಿ ಭೂಮಿಯಲ್ಲಿ ಬಿದ್ದನು. ಸುಗ್ರೀವನು ಧಾರಾ ಸಂಪಾತವಾಗಿ ಹರಿಯುತ್ತಿರುವ ಕಣ್ಣಿರುಗಳಿಂದ ಕೂಡಿ ಒಡನಾಗಿ ನಿಂತನು. ಕಪಿವಾಹಿನಿಯೆಲ್ಲಾ ದುಃಖಸಮುದ್ರದಲ್ಲಿ ಮುಳುಗಿತು. ಆಗ ಆಂಜನೇಯನು-- ಇದಕ್ಕಾಗಿ ದುಃಖಿಸುವುದೇಕೆ ? ನೀವೆಲ್ಲರೂ ಏನೂ ತಿಳಿಯದವರಂತೆ ಮರುಗುತ್ತಿರು ವುದೇಕೆ ? ಈ ಕ್ಷಣದಲ್ಲಿ ಓಷಧಿಯನ್ನು ತಂದು ಸೀತೆಯನ್ನು ಎಬ್ಬಿಸುವೆನು ಎಂದು ಸಮಾಧಾನಮಾಡುತ್ತಿದ್ದನು. ರಾಮನು ಕಪಿವೀರರು ಮಾಡಿದ ಶೈತ್ಯೋಪಚಾರದಿಂದ ಎಚ್ಚರವನ್ನು ಹೊಂದಿ ತಲೆಯನ್ನು ಬೊಗ್ಗಿಸಿಕೊಂಡು--ಅಯ್ಯಾ, ವಾನರ ವೀರರೇ, ಈಗ ನಮ್ಮ ಯುದ್ಧಕ್ಕೆ ಅಂತ್ಯವು ಸಂಭವಿಸಿತೇ ! ಈ ವರೆಗೂ ಅನುಭವಿಸಿದ ಕಷ್ಟ ನಷ್ಟ ಗಳೆಲ್ಲಾ ಮರಳಲ್ಲಿ ಹೊಯ್ದ ಎಣ್ಣೆಯಂತೆ ನಿಷ್ಪಲವಾದುವೇ ! ಎಂದು ಸುಮ್ಮನಿದ್ದು ಆ ಮೇಲೆ ಆ ಮಯಾ ಸೀತಾ ದೇಹವನ್ನು ನೋಡಿ.ಅಕಟಕಟಾ ! ನೃಪಸಂತತಿ ಯೊಳಗೆಲ್ಲಾ ಮಹಾತ್ಮನಾದ ಜನಕರಾಜನ ಕುಮಾರಿಯೇ ! ಸುಕುಮಾರಾ೦ಗಿಯೇ ! ದುರ್ವಿಧಿಯು ನಿನಗೆ ಇಂಥ ಹೇಸಿಕೆಯ ಸಾವನ್ನು ತಂದೊದಗಿಸಿತೇ ! ಎಂದು ಕಣ್ಣೀ ರುಗಳನ್ನು ಹರಿಸುತ್ತ ಆ ತುಂಡುಗಳ ಮೇಲೆ ಬಿದ್ದು ಹೊರಳಾಡುತ್ತ---ಅಯ್ಯೋ, ಮನ್ನ ನೋರಮೆಯೇ ! ನಿನ್ನ ಹಿತಮಿತ ಮೃದುವಚನಗಳನ್ನು ಮರೆಯುವದೆಂದಿಗೆ ! ಪ್ರಿಯೆಯೇ, ವನಕ್ಕೆ ಬರಬೇಡ ಎಂದು ಅಯೋಧ್ಯೆಯಲ್ಲಿ ಎಷ್ಟು ವಿಧವಾಗಿ ಹೇಳಿದರೂ ಕೇಳದೆ ನನ್ನ ಮೇಲಣ ಮೋಹದಿಂದ ವನಕ್ಕೆ ಬಂದವಳಾದೆ ! ಅಹೋರಾತ್ರಿಗಳ ಲ್ಲಿಯ ನನ್ನಲ್ಲಿಯೇ ಪ್ರಾಣಗಳನ್ನಿಟ್ಟು ಕೊಂಡು ಜೀವಿಸುತ್ತಿದ್ದ ನಿನಗೆ ನನ್ನ ಗಲುವಿಕೆ ಯಿಂದಲೇ ಮರ್ಛಾಮೃತಿಗಳು ಸಂಭವಿಸುವುವೆಂದು ಹೇಳುವಲ್ಲಿ ಮೇಲೆ ಪಾಪಾತ್ಮ ರಾದ ರಾಕ್ಷಸರ ಬಾಧೆಯುಂಟಾದರೆ ನೀನು ಜೀವಧಾರಣೆಯನ್ನು ಮಾಡುವುದುಂಟೇ? ನಾನು ಅಯೋಧ್ಯೆಗೆ ಏತಕ್ಕಾಗಿ ಹೋಗಲಿ ? ದನುಜರಿಂದ ನಿನ್ನನ್ನು ಕೊಲ್ಲಿಸಿದೆನೆಂದು ಹೇಳುವುದಕ್ಕಾಗಿ ಹೋಗಬೇಕೇ ? ನಾನು ಅಯೋಧ್ಯಾನಗರಕ್ಕೆ ಹೋದ ಮೇಲೆ ನಿನ್ನ ತಂದೆಯಾದ ಜನಕರಾಜನು ಬಂದು ನನ್ನ ಪ್ರಿಯು ಎಲ್ಲಿರುವಳೆಂದು ಕೇಳಿದರೆ ಅದಕ್ಕೆ ನಾನು ಏನು ಹೇಳುವೆನು ? ನಾನು ಬಂದನೆಂಬ ವರ್ತಮಾನವನ್ನು ಕೇಳಿ ಸಂತೋಷದಿಂದ ಬರುವ ನನ್ನ ತಾಯಂದಿರಿಗೆ ಏನು ಉತ್ತರವನ್ನು ಹೇಳಲಿ ? ಭರತ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.