58 ಕಥಾಸಂಗ್ರಹ-೪ ನೆಯ ಭಾಗ \ಂದು ಮಾತಾಡೈ ಮಗನೇ ! ಶೂರನಾದ ನಿನ್ನನ್ನು ಕಳೆದುಕೊಂಡು ದೀನನಾದ ನೃ ಪರಾಕ್ರಮವು ಉಷ್ಣತೆಯಿಲ್ಲದ ಅಗ್ನಿ ಯಂತೆ ಸುಗಮವಾಯಿತು, ಸುಕುಮಾ ನೇ, ಬೇಗ ಬಂದು ಮುಂದೆ ಮಾಡಬೇಕಾದುದನ್ನು ನನಗೆ ನೇಮಿಸು, ನಾನು ನಿಯಲೋ ? ಬದುಕಿರಲೋ ? ಶೀಘ್ರವಾಗಿ ಉತ್ತರವನ್ನು ಹೇಳ್ಳೆ ! ನನ್ನ ಮುದ್ದು ಗನೇ, 'ಅಯ್ಯೋ, ಕುಮಾರನೇ, ಹಸುಳೆಯೇ, ಇಂದ್ರಜಿತೇ, ಈಗ ನಿನ್ನ ಶೌರ್ಯ ರ್ಯ ಪರಾಕ್ರಮಗಳನ್ನು ಹೊಗಳುತ್ತಿರುವ ನನ್ನ ನಾಲಿಗೆಗೆ ಮುಳ್ಳು ಮುರಿದಿತು. ಇನೇ ವಂಚಕನು ! ನಿರ್ಭಾಗ್ಯನು ! ಮಡನು ! ಮತ್ತು ಪರಮಪಾಪಿಯು ! ರನಾದ ನಿನ್ನಲ್ಲಿ ಯಾವ ಕೊರತೆಯುಂಟು ? ಆಹವದಲ್ಲಿ ನಿಂತು ಭು ಜಂಗಮಾಸ್ತ್ರ ೦ದ ಅರಿಬಲಕ್ಕೆ ಅಪಾರ ಹಾನಿಯನ್ನು ಂಟುಮಾಡಿದೆ. ಅದಲ್ಲದೆ ಬ್ರಹ್ಮಾಸ್ತ್ರದಿಂದ ಇಣರಂಗದಲ್ಲಿ ವೈರಿವ್ಯೂಹವನ್ನು ಕೆಡಹಿ ಅಪ್ರತಿಮ ವೀರನೆಂಬ ವಿಖ್ಯಾತಿಯನ್ನು ೧ಂದಿದಿ ! ಲೋಕೋತ್ತ ಮಗಳಾದ ನಿನ್ನ ಸಾಹಸ ಪರಾಕ್ರಮಾದಿಗಳನ್ನು ಹೊಗಳು ದಕ್ಕೆ ನನಗೆ ಶಕ್ತಿಯಿಲ್ಲ, ದುಷ್ಟನಾದ ನಾನು ಮದನಾತುರನಾಗಿ ಮಕ್ಕಳು ರಿಗಳನ್ನೆಲ್ಲಾ ಮೃತ್ಯುವಿನ ಬಾಯಿಯಲ್ಲಿಕ್ಕಿ ಅನಾಥನಾದೆನು, ನನ್ನ ಪಟ್ಟವರ್ಧನನಂ ದ್ದ ನಿನ್ನನ್ನು ಕಳೆದು ಕೊಂಡ ಮೇಲೆ ನನಗೆ ಸಂತೋಷ ವೆತ್ತಣದು ? ಯುದ್ದ ರಂಗ ಲ್ಲಿ ನನಗೆ ಜಯವಂದರೇನು ? ಅಥವಾ ಜಯದಿಂದ ನನಗಾಗುವ ಫಲವೆಷ್ಟರದು ? ಭುವನ ವಿಖ್ಯಾತವಾದ ಲಂಕಾ ರಾಜಧಾನಿಯ ಅರಮನೆಯಲ್ಲಿ ನಿರ್ಗತಿಕನಾದ ನೊಬ್ಬನೇ ಮೋಟುಮರದಂತೆ ನಿಂತೆನು, ನನ್ನ ಹೃದಯವು ಚಿಂತೆಗೆ ತವರ್ಮನೆ » ದುಃಖದ ತೊಂಬೆಯ ದುರೂಹೆಯ ಚಾವಡಿಯ ಅರಿಷಡ್ವರ್ಗಗಳ ವಿಹಾ Pದ್ಯಾನವೂ ತಾಪತ್ರಯಗಳ ಮಲಗುವ ಮನೆಯ ಪರಿತಾಪದ ಜನ್ಮಭೂಮಿ ಆಗಿ ಹೋಯಿತು. ಇನ್ನು ನನ್ನ ಸ್ಥಿತಿಯು ನನ್ನ ಮಹಾ ದುಃಖಾನುತಾಪಗಳ ಭಿವೃದ್ಧಿ ಗೆ ಹೇತುವಾದುದರಿಂದ ಅದನ್ನು ಪರಿಹರಿಸಿಕೊಳ್ಳುವುದೇ ಲೇಸು ಎಂದು ರುಗಿ ಕಳವಳಿಸಿ ಮುಂಗಾಣದೆ ತಿರಿಗಿ ಹರವಸಂಗೊಂಡನು. ಇತ್ತ ಅಂತಃಪುರದಲ್ಲಿದ್ದ ದಶಕಂಠನ ಪಟ್ಟದರಸಿಯಾದ ಮಂಡೋದರಿಯು ಯ ಪುತ್ರನಾದ ಇಂದ್ರಜಿತ್ತಿನ ಮರಣವಾರ್ತೆಯನ್ನು ಕೇಳಿ ತತ್ ಕ್ಷಣದಲ್ಲೇ ೦ಚಪ್ರಾಣಗಳೂ ಏಕಕಾಲದಲ್ಲಿ ಹಾರಿಹೋದುವೋ ಎಂಬಂತೆ ಬಿದ್ದು ಮೂರ್ಛಿತ ದಳು, ಆ ಕೂಡಲೆ ರಾವಣನ ಭಾಗ್ಯಕೋಶವು ಅಕಾಲದಲ್ಲಿ ಸೂರೆ ಹೋಯಿತೋ ಂಬಂತೆ ಅಂತಃಪುರದಲ್ಲೆಲ್ಲಾ ಮಹಾ ಭಯ ಪರಿತಾಪಗಳನ್ನುಂಟುಮಾಡುವ ದುಃಖ ನಿಯೆದ್ದಿತು, ಅನಂತರದಲ್ಲಿ ಸಖಜನರಿಂದ ಮಾಡಲ್ಪಟ್ಟ ಶೈತ್ಯೋಪಚಾರವು ೨ಂಡೋದರಿಗೆ ತಿಳಿವನ್ನುಂಟುಮಾಡಿತು. ಆ ಮೇಲೆ ಸೊಸೆಯರೊಡನೆ ಕೂಡಿ ಹಾ ದುಃಖದಿಂದ ಮೈತಿಳಿಯದೆ ಬಿದ್ದು ಒದೆದಾಡಿ ಆಸವಳಿದು ತಲೆಗೂದಲುಗಳ ದರಿಕೆಯಿಂದಲೂ ಬಸಿರುಗಳ ಬಡಿಯುವಿಕೆಯಿಂದಲೂ ಓಡಿಯೋಡಿ ಬಂದು ಚಾವ ಯ ಬರಿನೆಲದಲ್ಲಿ ಬಿದ್ದು ಧೂಳಿಯಲ್ಲಿ ಹೊರಳಾಡುತ್ತ-ನನ್ನ ರತ್ನದ ಕಲಶವನ್ನು ತೆದು ಕೊಂಡರೋ ! ನನ್ನ ಕಂಠಮಾಲಿಕೆಯಲ್ಲಿದ್ದ ನಾಯಕರತ್ನ ವನ್ನು ಅಪಹರಿಸಿ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.