ಕಥಾಸಂಗ್ರಹ-೪ ನೆಯ ಭಾಗ ಮಾತಾಮಹರಿಂದ ಸಂಪಾದಿಸಲ್ಪಟ್ಟುದು. ಆದುದರಿಂದ ಅದು ನನಗೆ ಸಲ್ಲ ತಕ್ಕುದಾ ಗಿದೆ. ನೀನು ಅದನ್ನು ಬಿಟ್ಟು ಹೋಗಬೇಕು ಎಂದು ನಾನು ಹೇಳಿದೆನೆಂಬುದಾಗಿ ಮೊದಲು ಸಾಮದಿಂದ ತಿಳಿಸು ಎಂದು ಹೇಳಿ ಕಳುಹಿಸಿದನು, ಆ ಮೇಲೆ ಪ್ರಹಸ್ತ್ರನು ಅಲ್ಲಿಂದ ಹೋಗಿ ಲಂಕಾದ್ವೀಪದಲ್ಲಿದ್ದ ಕುಬೇರನೊಡನೆ ಈ ವರ್ತಮಾನವನ್ನು ತಿಳಿ ಸಲು ; ಆತನು ಒಂದರೆಗಳಿಗೆಯ ವರೆಗೂ ಆಲೋಚಿಸಿ, ಪ್ರಹಸ್ತನನ್ನು ಲಂಕೆಯಲ್ಲಿ ಯೇ ಬಿಟ್ಟು ತನ್ನ ತಂದೆಯಾದ ವಿಶ್ರವಸ್ಸಿನ ಬಳಿಗೆ ಶೀಘ್ರವಾಗಿ ಬಂದು ದಶಮುಖನು ತನಗೆ ಹೇಳಿಕಳುಹಿಸಿದ ವಾರ್ತೆಯನ್ನು ಬಿನ್ನವಿಸಲು ; ಆ ಮುನಿಯು-ಎಲೈ ಮಗನೇ, ಕೇಳು ; ಆ ದಶಕಂಠನು ಬಲು ಕೆಟ್ಟವನು. ಆದುದರಿಂದ ನೀನು ಆ ಲಂಕಾನಗರವನ್ನು ಬಿಟ್ಟು ಕೈಲಾಸಪರ್ವತಕ್ಕೆ ಹೋಗಿ ಅಲ್ಲಿ ಒಂದು ಪಟ್ಟಣವನ್ನು ಮಾಡಿಕೊಂಡು ಉತ್ತರದಿಗಧಿಪತಿಯಾಗಿರು, ಹೋಗು, ನಿನಗೆ ಶಿವನೊಡನೆ ಸ್ನೇಹವುಂಟಾಗುವುದು ಎಂದು ಹೇಳಿದನು, ಆ ಮೇಲೆ ಕುಬೇರನು ತಂದೆಗೆ ನಮಸ್ಕರಿಸಿ ಲಂಕಾನಗರಕ್ಕೆ ಬಂದು ಪ್ರಹಸ್ತ್ರನನ್ನು ಕುರಿತು-ಎಲೈ ಮಂತ್ರಿಯೇ, ದಶಕಂಠನು ಹೇಳಿಕಳುಹಿಸಿದ ಮಾತು ಯುಕ್ತವಾದುದೇ ಸರಿ. ಇನ್ನು ಮೇಲೆ ನಾನು ಇಲ್ಲಿಂದ ಹೊರಟುಹೋಗುವೆನು. ಅವನು ಬಂದು ಇಲ್ಲಿ ಸುಖದಿಂದಿರಲಿ. ಈ ಸಂಗತಿಯನ್ನು ಅವನಿಗೆ ತಿಳಿಸು ಎಂದು ಹೇಳಿ ಆ ಪ್ರಹಸ್ತನನ್ನು ಅಲ್ಲಿಂದ ಕಳುಹಿಸಿ ಆ ಮೇಲೆ ಕುಬೇರನು ತನ್ನ ಪರಿವಾರದೊ ಡನೆ ವಿಮಾನಾರೂಢನಾಗಿ ಲಂಕೆಯನ್ನು ಬಿಟ್ಟು ಹೊರಟು ಕೈಲಾಸಾಚಲಕ್ಕೆ ಬಂದು ಅಲ್ಲಿ ವಿಶ್ವಕರ್ಮನಿಂದ ಮನೋಹರವಾದ ಒಂದು ಪಟ್ಟಣವನ್ನು ಕಟ್ಟಿಸಿ ಅದಕ್ಕೆ ಅಲಕಾನಗರವೆಂದು ಹೆಸರಿಟ್ಟು ಶಿವನ ಸ್ನೇಹವನ್ನು ಸಂಪಾದಿಸಿಕೊಂಡು ಅಲ್ಲೇ ಸುಖ ದಿಂದಿರುತ್ತಿದ್ದನು. ಇತ್ತಲಾ ಪ್ರಹಸನು ದಶಮುಖನ ಬಳಿಗೆ ಬಂದು-ನೀನು ಹೇಳಿಕಳುಹಿಸಿದ ಮಾತ್ರದಿಂದಲೇ ಕುಬೇರನು ಹೆದರಿ ಲ೦ಕಾನಗರವನ್ನು ಬಿಟ್ಟು ಓಡಿಹೋದನು ಎಂದು ಹೇಳಲು ; ಆಗ ದಶಗ್ರೀವನು ಸಂತೋಷದಿಂದ ಕೂಡಿದವನಾಗಿ ತನ್ನ ರಾಕ್ಷಸಪರಿ ವಾರದೊಡನೆ ಹೊರಟು ಬಂದು ಮೃಗರಾಜನು ಹಿಮನಗದ ಗುಹೆಯನ್ನು ಪ್ರವೇಶಿಸು ವಂತೆ ಲಂಕಾನಗರವನ್ನು ಪ್ರವೇಶಿಸಿದನು, ಅಲ್ಲಿ ಪ್ರಹಸ್ತ ಮಾರೀಚಾದಿ ಮಂತ್ರಿಗಳು ಸುಮಾಲಿ ಮಾಲ್ಯವಂತಾದಿ ರಾಕ್ಷಸನಾಯಕರನ್ನು ಕೂಡಿಸಿಕೊಂಡು ರಾಕ್ಷಸರಾ ಜ್ಯಾಧಿಪತ್ಯಾರ್ಥವಾಗಿ ದಶಾನನನಿಗೆ ವಿಜೃಂಭಣೆಯಿಂದ ಪಟ್ಟಾಭಿಷೇಕವನ್ನು ಮಾಡಿ ದರು. ಆ ಮೇಲೆ ರಾಕ್ಷ ಸೇಶ್ವರನಾದ ದಶಮುಖನು ತನ್ನ ಸಹೋದರಿಯಾದ ಶೂರ್ಪ ನಖಿಯನ್ನು ಕಾಲಕೇಯರೆಂಬ ಅಸುರರಲ್ಲಿ ಬಹು ಬಲಿಷ್ಠ ನಾದ ವಿದ್ಯುಚ್ಛೆ ಹೃನೆಂಬವ ನಿಗೆ ಕೊಟ್ಟು ಅತಿವಿಭವದಿಂದ ಮದುವೆಮಾಡಿ ಸುಖವಾಗಿ ಲಂಕಾ ಪಟ್ಟಣವನ್ನು ಆಳುತ್ತಿದ್ದನು. ಹೀಗಿರುವಲ್ಲಿ ಒಂದಾನೊಂದು ದಿವಸ ದಶಕಂಠನು ಬೇಟೆಯಾಡಬೇಕೆಂದು ಅಪೇ ಕ್ಷಿಸಿ ಸಾಯುಧರಾದ ಬೇಟೆಗಾರರೊಡನೆ ಕೂಡಿ ಹೊರಟು ಮೃಗಾನ್ವೇಷಣಾರ್ಥ ವಾಗಿ ಅರಣ್ಯಗಳಲ್ಲಿಯ ಪರ್ವತಗಳಲ್ಲಿಯ ಸಂಚರಿಸುತ್ತ ಪೊದೆಗಳೊಳಡಗಿ ಶಬ್ದವ 9
ಪುಟ:ಕಥಾ ಸಂಗ್ರಹ - ಭಾಗ ೨.djvu/೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.