170 ಕಥಾಸಂಗ್ರಹ-೪ ನೆಯ ಭಾಗ ಅನಂತರದಲ್ಲಿ ರಾವಣನು ಮೂರ್ಛ ತಿಳಿದೆದ್ದು ಶೀಘ್ರವಾಗಿ ಚಾವಡಿಗೆ ಬಂದು ಶೈತ್ಯೋಪಚಾರಗಳನ್ನು ಮಾಡಿ ಸೊಸೆಯರೊಡನೆ ಮಂಡೋದರಿಯನ್ನೆಬ್ಬಿಸಿ ಸಮಯೋಚಿತ ವಚನಗಳಿಂದ ಸಮಾಧಾನಪಡಿಸಿ ಅತಿ ಶೀಘ್ರತೆಯಿಂದ ರಣದೀಕ್ಷೆ ಯನ್ನು ಅಂಗೀಕರಿಸಿ ಕೂರ ಪ್ರತಿಜ್ಞಾ ವಚನಗಳನ್ನಾಡುತ್ತ ಯುದ್ಧ ಭೂಮಿಗೆ ಹೊರ ಡುವುದಕ್ಕೆ ಸನ್ನದ್ಧನಾಗಲು ; ಆ ಕ್ಷಣದಲ್ಲಿಯೇ ಭೇರೀಭಾಂಕರಣಾದಿ ನಾನಾವಿಧ ವಾದ್ಯಗಳ ಮಹಾ ಧ್ವನಿಯು ಮಹಾ ವಿಲಯ ಘನಗರ್ಜಿತದಂತೆ ದಿಗಂತಗಳಲ್ಲಿ ಪ್ರತಿ ಧ್ವನಿಯನ್ನುಂಟುಮಾಡಿತು. ಆಗ ಸುರಲೋಕವು ತಲ್ಲಣಿಸಿತು, ಬ್ರಹ್ಮಾಂಡ ಮಂಡ ಲವು ಕಿವುಡಾಯಿತು. ನಿಮೇಷಮಾತ್ರದಲ್ಲಿ ಕುಶಲನಾದ ಸಾರಥಿಯು ಅಭೇದ್ಯವಾದ ರಾವಣನ ದಿವ್ಯ ರಥಕ್ಕೆ ಉತ್ತಮಾಶ್ವಗಳನ್ನು ಕಟ್ಟಿ ಧ್ವಜಸ್ತಂಭವನ್ನು ಎತ್ತಿ ನಿಲ್ಲಿಸಿ ಯುದ್ಧೋಚಿತವಾದ ಸಮಸ್ತ ಸಾಮಗ್ರಿಗಳನ್ನೂ ತುಂಬಿ ಅದನ್ನು ತೆಗೆದು ಕೊಂಡು ಬಂದು ಅರಮನೆಯ ದ್ವಾರದಲ್ಲಿ ನಿಲ್ಲಿಸಲುಧೀರನಾದ ರಾವಣನು ದ್ವಿತೀಯ ಮೇರು ಭೂಧರದಂತಿರುವ ಆ ತೇರನ್ನು ನೋಡಿ ಸಮಸ್ತ ಮಂಗಳವಾದ್ಯಗಳೊಡನೆ ಬಂದೇರಿ ದನು. ಕಡಲೆ ಹ»ಶ್ವರಥಪದಾತಿಗಳೆಂಬ ಚತುರ್ವಿಧ ಬಲವು ಅರಿಗಳೆದೆಯಲ್ಲಿ ಕಂಪನವನ್ನು ಹುಟ್ಟಿಸುತ್ತ ಮುಂದೆ ಹೊರಟಿತು. ಆಗ ಆ ಸೇನಾಸಮುದ್ರದ ಮುಂದೆ ಸೆಯಲ್ಲಿ ಮೊರೆಯುತ್ತಿರುವ ಹೆಗ್ಗಾಳೆಗಳು-ಎಲೈ ಬಣಗುಹಗೆಗಳೇ, ಕಲ್ಪಾಂತ ಭೈರವನಲ್ಲಿ ಕಾಳೆಗವು ಬೇಡ ! ರಿಪುಕುಲಾಂಬುದ ಜಂಝಾಮಾರುತನೊಡನೆ ತೋಟಿ ಯೇಕೆ ? ಎಂದು ಹೇಳುತ್ತಿವೆಯೋ ಎಂಬಂತೆ ಒಪ್ಪುತ್ತಿದ್ದುವು. ಆಗ ವಿರೋಧಿಗಳ ಬಲಜಲಧಿಗೆ ಬಡಬಾನಲಪ್ರಾಯನಾದ ರಾವಣನು ತನ್ನೆಡಪಕ್ಕದ ಹತ್ತು ಕೈಗಳಿಂದ ಹತ್ತು ಬಿಲ್ಲುಗಳನ್ನು ಹಿಡಿದು ಬಲಗಡೆಯ ಹತ್ತು ಕೈಗಳಿಂದ ಕೂರಬಾಣಗಳನ್ನು ತೆಗೆದು ಸಂಧಾನಿಸಿ ಪ್ರಯೋಗಿಸುತ್ತ ಬರಲು; ಒಂದೊಂದು ಬಾಣದ ಹತಿಯಿಂದ ಹತ್ತು ನೂರು ಸಾವಿರ ಹತ್ತು ಸಾವಿರ ಸಂಖ್ಯೆಯುಳ್ಳ ಕಪಿಗಳ ತಲೆಗಳು ಕತ್ತರಿಸ ಲ್ಪಟ್ಟು ಭೂಮಿಯಲ್ಲಿ ಬೀಳುತ್ತಿದ್ದುವು. ಆಗ ಬಹು ಕೋಪವಿಜೃಂಭಿತರಾದ ಕೋಡಗ ಪಡೆವಳ್ಳರು ರಾವಣನೊಡನೆ ಯುದ್ಧ ಮಾಡುವುದಕ್ಕೆ ತೊಡಗಿ ಕಾದಿ ಗವಯನು ನೋಂದನು. ಗಜನು ಅರಚಿಕೊಂಡನು, ವಿನತನ ಪ್ರಾಣಗಳು ಕಂಠದೇಶಕೆ ಬಂದುವು. ಜಾಂಬವಂತನು ನರಳುತ್ತ ಹಿಂದಿರುಗಿದನು. ಶರಭನು ಬಿದ್ದು ಒದೆದು ಕೊಂಡನು. ಬಾಣಪ್ರವೇಶದಿಂದ ಗಂಧಮಾದನನ ಎದೆಯಿಂದ ರಕ್ತವು ಜಾರಿತು. ಹೆಸರ್ಗೊ೦ಡ ಉಳಿದ ಕಪಿವೀರರನ್ನು ರಾವಣನ ಮು೦ಗಡೆಯಲ್ಲಿ ಕಾಣೆನು, ಎರಡ ನೆಯ ಕಾಲರುದ್ರನಂತಿರುವ ರಾವಣನು ಯುದ್ದ ರಂಗದಲ್ಲಿ ಮುನಿದು ನಿಂತರೆ ಅವನೆ ದುರಿಗೆ ಸುಮ್ಮನೆ ನಿಂತು ನೋಡುವವರೇ ಮಹಾ' ವೀರರು, ಮತ್ತು ಅವರೇ ಮಾಯ ಮುಂದಲೆಯನ್ನು ಹಿಡಿದು ಕೊಯ್ದು ತಂದವರು. ಮರು ಲೋಕಗಳ ಗಂಡನಾದ ದಶಕಂಠನ ಬಾಣಗಳ ಬಲ್ಲಿ ಜೈನ ಬೇಗೆಯೆದುರಿಗೆ ನಿಂತು ಸಹಿಸುವವರಾರು ? ರಾವ ಣನ ಬಾಣ ಪರಂಪರಾ ಹತಿಯಿಂದ ಸತ್ತೊರಗಿದ ಕಪಿಸಂದೋಹಕ್ಕೆ ಯಮಲೋಕ ದಲ್ಲಿ ನಿಲ್ದಾಣವು ಕಿಕ್ಕಿಂಧವಾಯಿತು. ಉಳಿದ ಕಪಿಗಳು ಸುಗ್ರೀವನ ಆಜ್ಞೆಯನ್ನು ಗಿ
ಪುಟ:ಕಥಾ ಸಂಗ್ರಹ - ಭಾಗ ೨.djvu/೧೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.