192 ಕಥಾಸಂಗ್ರಹ_೪ ನೆಯ ಭಾಗ 10, RAMA'S CORONATION. ೧೦, ರಾಮನ ಪಟ್ಟಾಭಿಷೇಕವು. ಅನಂತರದಲ್ಲಿ ಅಂಕಾರಾಜನಾದ ವಿಭೀಷಣನು ಸೀತಾಲಕ್ಷ್ಮಣ ಸಮೇತನಾಗಿ ಸಂತೋಷದಿಂದ ಕುಳಿತಿರುವ ಶ್ರೀರಾಮನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡಿ ಕೈಮುಗಿದು ನಿಂತು ಕೊಂಡು-ಜೀಯಾ, ಸರ್ವಪ್ರಾಣಿದಯಾ ಕರನೇ ! ಆಶ್ರಿತನಾದ ನನ್ನಲ್ಲಿ ಕೃಪೆಮಾಡಿ ಲಂಕಾನಗರಕ್ಕೆ ಬಿಜಯಮಾಡಿ ಅಲ್ಪಶಕ್ತನಾದ ನಾನು ಮಾಡುವ ಸೇವೆಯನ್ನು ಕೈಕೊಂಡು ಲಂಕಾನಗರದ ಜನಗಳಿಗೆಲ್ಲಾ ದರ್ಶನಾಶೀರ್ವಾದಗಳನ್ನು ಕೊಟ್ಟು ಅವರನ್ನೆಲ್ಲಾ ಸಂತೋಷ ಸಮಾಧಾನಯುಕ್ತರನ್ನಾಗಿ ಮಾಡಿ ಆ ಮೇಲೆ ನಿಜ ರಾಜಧಾನಿಯಾದ ಅಯೋಧ್ಯಾ ಪಟ್ಟಣಕ್ಕೆ ದಯೆಮಾಡಬಹುದೆಂದು ಭಯಭಕ್ತಿ ಪುರಸ್ಸ ರವಾಗಿ ಬೇಡಿಕೊ ಳ್ಳಲು ; ಆಗ ಶ್ರೀರಾಮನು-ಎಲೈ ಕೃತಜ್ಞನಾದ ರಾಕ್ಷಸ ರಾಜೇಂದ್ರನೇ ! ನನ್ನ ಚಿಕ್ಕತಾಯಿಯಾದ ಕೈಕೇಯಾದೇವಿಯು ವನವಾಸಕ್ಕಾಗಿ ನೇಮಿಸಿದ ಹದಿನಾಲ್ಕು ಸಂವತ್ಸರಗಳು ಮುಗಿಯುವುದಕ್ಕಿಂತ ಮೊದಲು ಪೊಳಲು ಗಳನ್ನು ಪ್ರವೇಶಿಸುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಿರುವೆನು, ನನ್ನ ಹಗೆಯ ಸಂಹಾರಾರ್ಥವಾಗಿ ಪ್ರಿಯನಾದ ನೀನು ನನಗೋಸ್ಕರ ಮಾಡಿದ ಸಹಾಯವು ಅಪಾರ ವಾದುದು, ಅದಕ್ಕಿಂತಲೂ ಅತಿಶಯವಾದ ಉಪಚಾರವು ಮತ್ತಾವುದಿರುವುದು ? ಅಯೋಧ್ಯಾನಗರದಲ್ಲಿ ನನ್ನ ತಾಯಂದಿರು ನನ್ನನ್ನೇ ನೆನಸಿಕೊಂಡು ಚಿಂತಿಸುತ್ತಿರು ವರು ನನ್ನ ತಮ್ಮಂದಿರಾದ ಭರತಶತ್ರುಘ್ನರಿಗೆ ನನ್ನ ಗಲಿಕೆಯಿಂದುಂಟಾಗಿರುವ ದುಃಖವು ಅಪರಿಮಿತವಾಗಿರುವುದು, ಅದು ಕಾರಣ ನಾನು ಈ ದಿವಸವೇ ಅಯೋಧ್ಯಾ ನಗರವನ್ನು ಕುರಿತು ಪ್ರಯಾಣಮಾಡಬೇಕಾಗಿರುವುದು, ಇದಕ್ಕೋಸ್ಕರ ನೀನು ಅನುಮತಿಸಿ ಸಹಾಯವನ್ನು ಮಾಡಬೇಕು ಅಂದನು. ಆ ಬಳಿಕ ವಿಭೀಷಣನು ರಾಮನ ಮಾತುಗಳಿಗೆ ಒಡಂಬಟ್ಟು ಕೂಡಲೆ ಪುಷ್ಪಕ ವಿಮಾನವನ್ನು ತರಿಸಿ ಮುಂದೆ ನಿಲ್ಲಿಸಿ-ಜೀಯಾ ಸರ್ವಜ್ಞನೇ, ಅಯೋಧ್ಯಾನಗರದಲ್ಲಿ ನಿನ್ನ ಆಗಮನವನ್ನೇ ಕುತೂಹಲದಿಂದ ನಿರೀಕ್ಷಿಸುತ್ತಿರುವ ಮಾತೃ ಭ್ರಾತೃ ಪುರಜನಾ ದಿಗಳ ಆನಂದೋದಯಕ್ಕಾಗಿ ಚಿತ್ತಾನುಸಾರವಾಗಿ ಬಿಚಯಮಾಡಬಹುದೆಂದು ಕೈಮುಗಿದುಕೊಂಡು ಬಿನ್ನವಿಸಲು ; ಆಗ ಸಂತುಷ್ಟನಾದ ಶ್ರೀರಾಮನು ದೇವತೆಗಳ ವಿಮಾನಗಳಿಗಿಂತ ನೂರ್ಮಡಿ ಮಿಗಿಲೆನಿಸಿ ಶಂಕರನ ಯಮಂದಿರವಾದ ಕೈಲಾಸದಂ ತೆಯ ವಿಷ್ಣುವಿಗೆ ನಿತ್ಯಾ ವಾಸಸ್ಥಾನವಾದ ಕ್ಷೀರಸಮುದ್ರದಂತೆಯ ಬ್ರಹ್ಮನಿಗೆ ಭವನವಾದ ಸತ್ಯಲೋಕದಂತೆಯ ಬಹಳವಾದ ಮನೆಗಳಿಂದಲೂ ಅಸಂಖ್ಯಾತರ ಳಾದ ಉಪ್ಪರಿಕೆಗಳಿಂದಲೂ ಮನೋಹರಗಳಾದ ಚಂದ್ರಶಾಲೆಗಳಿಂದಲೂ ಕೇಳಿದ ಫಲಗಳಿಂದ ತುಂಬಿರುವ ತರುಷಂಡಗಳಿಂದಲೂ ವಿವಿಧವಾದ ಪುಷ್ಪಲತಾ ಸಂಕುಲದಿಂ ದಲೂ ತುಂಬಿರುವ ಉದ್ಯಾನವನಗಳಿಂದಲೂ ಮಾಧುರ್ಯನೈರ್ಮಲ್ಯ ಶೈತ್ಯಗುಣ ಯುಕ್ತ ಜಲಭರಿತಗಳಾದ ಸರೋವರಗಳಿಂದಲೂ ಅಪೇಕ್ಷಿತ ಭಕ್ಷ್ಯಭೋಜ್ಯಗಳನ್ನು
ಪುಟ:ಕಥಾ ಸಂಗ್ರಹ - ಭಾಗ ೨.djvu/೨೦೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.