ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾವಣನ ದಿಗ್ವಿಜಯವು - 11 ಮಾತುಗಳನ್ನು ಕೇಳು. ನೀನು ಬ್ರಹ್ಮ ಕುಲದಲ್ಲಿ ಹುಟ್ಟಿ ಮುನಿಗಳನ್ನೂ `ದೇವತಗ ಇನ್ನೂ ಹೀಗೆ ಬಾಧಿಸುತ್ತ ಬರುವುದರಿಂದ ನಿನಗೆ ಮಹತ್ತರವಾದ ಹಾನಿಯುಂಟಾಗು ವುದೇ ಹೊರತು ಸೌಖ್ಯವುಂಟಾಗಲಾರದು. ಆದುದರಿಂದ ಇನ್ನು ಮೇಲೆಯಾದರೂ ಇಂಥ ದುಷ್ಕೃತ್ಯಗಳನ್ನು ಮಾಡದೆ ಸನ್ಮಾರ್ಗದಲ್ಲಿ ನಡೆಯುತ್ತ ಎಲ್ಲರಿಂದಲೂ ಒಳ್ಳೆ ಯವನೆನಿಸಿಕೊಂಡು ಸುಖವಾಗಿ ಬದುಕೆಂದು ಹೇಳಿಕಳುಹಿಸಿದನು ಎನಲು ; ಈ ಮಾ ತುಗಳನ್ನು ಕೇಳಿದ ಕೂಡಲೆ ದಶಾಸ್ಯನು ಕೋಪಾಟೋಪದಿಂದ ಕೂಡಿ ಕೆಂಗಸರು ತಿರಲು ; ಹುಬ್ಬುಗಳನ್ನು ಹಾರಿಸುತ್ತ ತುಟಿಗಳನ್ನು ಕುಣಿಸುತ ಆ ದೂತನನ್ನು ನೋಡಿ ಏನೆಲಾ, ಕುಬೇರನು ತಾನು ಹರಸಖನಾಗಿದ್ದೇನೆಂಬ ದುರ್ಗವ್ರದಿಂದ ನನಗೆ ವಿವೇಕವನ್ನು ಹೇಳೆಂದು ನಿನ್ನನ್ನು ಕಳುಹಿಸಿದನೇ ? ದೇವತೆಗಳಿಂದಲೂ ಮುನಿ ಗಳಿಂದಲೂ ನನಗೆ ಬರುವ ಕೇಡೂ ಉಂಟೇ ? ಬಲುಮಾತುಗಳಿಂದೇನು ? ಅಣ್ಣನಾದ ರಾಗಲಿ, ಮೊದಲು ಆತನನ್ನು ಕೊಂದು ಆ ಮೇಲೆ ಲೋಕನಾಯಕರನ್ನು ಮೃತ್ಯುಜ ತರಕ್ಕೆ ಸೇರಿಸಿ ಲೋಕಗಳನ್ನೆಲ್ಲಾ ವಿನಾಶಮಾಡುವೆನು. ಸುರನರೋರಗಾದಿ ನಾಯಕ ರನ್ನೂ ಆದಿತ್ಯ ಚಂದ್ರಾದಿ ಜ್ಯೋತಿರ್ಮಂಡಲಾಧೀಶರನ್ನೂ ಬಲುಗಡಿತದಿಂದುರುಳಿಸುವೆ ನೆಂದು ವಿಜೃಂಭಿಸಿ ಗಿರಿಸದೃಶವಾದ ತೇರನ್ನೇರಿ ಉತ್ತರದಿಗಭಿಮುಖನಾಗಿ ನಡೆದನು. ಅವನೊಡನೆಯೇ ಆನೆ ಕುದುರೆ ತೇರು ಕಾಲಾಳುಗಳ ತಂಡವು ನೆಲದಗಲಕ್ಕೂ ಹೊರಟುದಲ್ಲದೆ ಶುಕಸಾರಣಾದಿ ಮಂತ್ರಿಗಳೂ ಸೇನಾಪತಿಗಳೂ ಬೆಂಬಲವಾಗಿ ಮುಂ ಕೊಂಡರು. ಈ ಸೇನೆಯನ್ನು ಭೂಮಿಯೇ ಹೆತ್ತುದೋ ? ಅಥವಾ ಎಂಟು ದಿಕ್ಕು ಗಳೇನಾದರೂ ಇದುವೋ ? ಎಂಬಂತೆ ಮಿತಿಮಾರಿದ ದಂಡೈತರುತ್ತಿರಲು ; ಅದರ ರದಘಾತದಿಂದೆದ್ದ ಧೂಳಿಯು ಸೂರ್ಯಮಂಡಲವನ್ನು ಆವರಿಸಿಕೊಂಡು ದಿನವನ್ನು ಮರ್ದಿನವನ್ನಾಗಿ ಮಾಡಿತು. ಈ ರೀತಿಯಾಗಿ ಸಕಲ ಸನ್ನಾಹದಿಂದ ಕೂಡಿದ ದಶ ಮುಖನು ಗಿರಿ ವನ ಪಟ್ಟಣ ನದ ನದ್ಯಾದಿ ಪ್ರದೇಶಗಳನ್ನು ಕಳೆದು ಕೈಲಾಸಾಚ ಲದ ತಪ್ಪಲಲ್ಲಿರುವ ಅಲಕಾವತೀನಗರದ ಸವಿಾಪಕ್ಕೆ ಬಂದು ಹೆಬ್ಬಾಗಿಲಲ್ಲಿ ನಿಂತು ದ್ವಾರಪಾಲಕರಲ್ಲಿ ಒಬ್ಬ ಯಕ್ಷನನ್ನು ಕರೆದು-ಎಲೈ ದ್ವಾರಪಾಲಕನೇ, ನೀನು ನಿಮ್ಮೊ ತೆಯನ ಬಳಿಗೆ ಹೋಗಿ_ಲೋಕೈಕವೀರನಾದ ದಶಕಂಠನು ಯುದ್ದ ಕ್ಕೆ ಬಂದಿದ್ದಾನೆ. ನಿನ್ನನ್ನು ಶೀಘ್ರವಾಗಿ ಬರಹೇಳಿದನೆಂದು ತಿಳಿಸೆನಲು ; ಅವನು ಕೂಡಲೆ ಕುಬೇರನ ಎಲಗದ ಚಾವಡಿಗೆ ಬಂದು ಭೀತಿಯಿಂದ ಕೈಮುಗಿದು-ಒಡೆಯನೇ, ಏಳು. ದಶಕಂಠನೊಡನೆ ಯುದ್ಧ ಮಾಡು ನಡೆ, ಅವನು ನಮ್ಮಲ್ಲಿ ತೋಳೋಟೆಯನ್ನು ಕಳೆಯುವ ತಂತೆ, ನಾನು ಅವನ ಗೆರ್ವಾತಿಶಯೋಕ್ತಿಗಳನ್ನು ವಿವರಿಸಲಾರೆನು, ಬೇಗ ಯುದ್ಧ ಕೈ ಸೈನ್ಯವನ್ನು ಕಳುಹಿಸು ಎಂದು ಹೇಳಲು ; ಕುಬೇರನು ಆ ಮಾತನ್ನು ಕೇಳಿ. ಕೇಳು, ಹೇಳು, ದಶಾನನನ ಆಳುತನದ ಮಾತುಗಳನ್ನು ಇನ್ನೊಂದು ಸಾರಿ ಹೇಳು. ಶಮುಖನಿಗೆ ನಮ್ಮೊಡನ ಕಾಳಗವೇ ? ಶಿವ, ಶಿವಾ ! ಇದು ವಿಪರೀತಕಾಲಗತಿಯು ಎಂದು ಅರೆಗಳಿಗೆಯ ವರೆಗೂ ಚಿಂತಿಸಿ ಕೃತ್ಯವನ್ನು ನೋಡಿ.ಎಲೈ, ಮಹಾಗರ್ವದೂ 3ತನಾದ ಖಳಪತಿಯೊಡನೆ ಕಾಳಗಕ್ಕೆ ಶೂರರಾದ ನಮ್ಮ ಭಟರು ಸನ್ನದ್ಧರಾಗಿ ಒಬ