201 ರಾಮನ ಪಟ್ಟಾಭಿಷೇಕವು ದಿಂದ ವ್ಯಾಪ್ತವಾಯಿತೋ ಎಂಬಂತೆ ಎಲ್ಲಿ ನೋಡಿದರೂ ಶಾಂತತೆಯಿಂದಲೂ ಧಾವಲ್ಯ ದಿಂದಲೂ ಯುಕ್ತವಾದ ಚಂದ್ರಿಕೆಯು ಚೆನ್ನಾಗಿದ್ದಿತು. ಆಗ ಮಹಾತ್ಮನಾದ ಶ್ರೀರಾ ಮಚಂದ್ರನು ಇಷ್ಟಬಂಧುಜನಗಳೊಡನೆ ದಿವ್ಯಭೋಜನಾದಿಗಳನ್ನು ಮಾಡಿ ಗಂಧ ಪಷ್ಟ ತಾಂಬೂಲಾದಿಗಳನ್ನು ಸ್ವೀಕರಿಸಿ ಸಂತೋಷದಿಂದಿರುತ್ತಿದ್ದು ಸರ್ವರನ್ನೂ ಅವರವರ ಶಯ್ಯಾಗೃಹಗಳಿಗೆ ಕಳುಹಿಸಿ ತಾನು ಅತ್ಯುತ್ತಮವಾದ ಸೆಜ್ಜೆ ಮನೆಗೆ ಬಂದು ಅಲ್ಲಿ ದಿವ್ಯ ಶಯ್ಯಾದಿ ಶಯನಸಾಮಗ್ರಿಗಳಿಂದ ಕೂಡಿರುವ ಮಂಚದ ಮೇಲೆ ಜಗದಾನಂದಿನಿ ಯಾದ ಜನಕನಂದಿನಿಯೊಡನೆ ಕೂಡಿ ಸಂತೋಷದಿಂದ ಪವಡಿಸಿದನು. - ಅನಂತರದಲ್ಲಿ ಜಗದಭಿರಾಮನಾದ ಶ್ರೀರಾಮನಿಗೆ ಈ ದಿವಸ ಜಗದಾನಂದ ಸಂದೋಹಸಂದಾಯಕವಾದ ಪಟ್ಟಾಭಿಷೇಕಮಹೋತ್ಸವವು ಬೆಳೆಯುತ್ತಿದೆ. ಈ ಪುಣ್ಯಕರವಾದ ಸಂದರ್ಶನವನ್ನು ಲೋಕತ್ರಯದವರೂ ನೋಡಿ ಕೃತಾರ್ಥರಾಗುವುದ ಕ್ಕಾಗಿ ನಿಮ್ಮನಿಮ್ಮ ಪರಿವಾರಗಳೊಡನೆ ಕೂಡಿ ಬನ್ನಿರಿ ಎಂದು ಸಾರುತ್ತಿರುವುವೋ। ಎಂಬಂತೆ ಮುಂಗೋಳಿಗಳು ಕೊಕೊಕೋ ಎಂದು ಉಚ್ಚೆರ್ದ್ವನಿಯಿಂದ ಕೂಗಿ ದುವು. ಭೂಲೋಕದಲ್ಲಿ ನಡೆಯುವ ಈ ಸಂಗತಿಯನ್ನು ಚೆನ್ನಾಗಿ ತಿಳಿದು ಕೊಂಡು ಶೀಘ್ರವಾಗಿ ಹೋಗಿ ಇಂದ್ರಾದಿದೇವತೆಗಳಿಗೆ ತಿಳಿಸಬೇಕೆಂದು ಸ್ವರ್ಗಲೋಕಸ್ಸ ವಾದ ನಂದನವನದಿಂದ ಹೊರಟು ದೇವಗಂಗೆಯನ್ನು ದಾಟಿ ಶಿವನಿವಾಸಸ್ಥಾನವಾದ ಕೈಲಾ ಸಾಚಲಮಾರ್ಗವಾಗಿ ಬರುತ್ತಿರುವಲ್ಲಿ ಶಂಕರನ ಪ್ರಿಯಭೂಷಣಗಳಾದ ಸರ್ಪಗಳು ತನ್ನನ್ನು ಸಂಪೂರ್ಣವಾಗಿ ನುಂಗಿಬಿಡುವುದಕ್ಕೆ ಬರುತ್ತಿರಲು ; ಸೂಕ್ಷ್ಮದೇಹದಿಂದ ತಪ್ಪಿಸಿಕೊಂಡು ಅಯೋಧ್ಯಾನಗರವನ್ನು ಪ್ರವೇಶಿಸಿ ಸರ್ವಸ್ಥಳದಲ್ಲೂ ವಿಚಾರಿಸುತ್ತಿ ರುವುದೋ ಎಂಬಂತೆ ಮುಂಜಾವದ ತಂಗಾಳಿಯು ಮೆಲ್ಲನೆ ಬೀಸಿತು. ಸೂರ್ಯನು ಈ ಸಂಗತಿಯನ್ನು ಕೇಳಿ ನನ್ನ ವಂಶೋದ್ಧಾರಕನಾದ ಶ್ರೀರಾಮಚಂದ್ರನ ಪಟ್ಟಾ ಭಿಷೇಕ ಮಹೋತ್ಸವವನ್ನು ಅತ್ಯುನ್ನತಸ್ಥಾನದಲ್ಲಿದ್ದು ಕೊಂಡು ಕಣ್ಣುಂಬಾ ನೋಡಿ ದಣಿಯಬೇಕೆಂಬ ಮಹಾಶೆಯಿಂದ ಬಂದನೋ ಎಂಬಂತೆ ಉದಯಶಿಖರಿಯ ಶಿಖರ ವನ್ನು ಅಡರಿ ರಾರಾಜಿ' ವನು. ಪಟ್ಟಾಭಿಷಿಕ್ತನಾಗುವ ನಿಜನಾಯಕನಾದ ಶ್ರೀರಾ ಮನನ್ನು ನೋಡಿ ಸೀತೆಯ ನೇತ್ರ ಕಮಲಗಳು ಈ ರೀತಿಯಾಗಿ ಅರಳುವುವು ಎಂದು ತೋರಿಸುತ್ತಿರುವುವೋ ಎಂಬಂತೆ ಕಮಲಗಳು ಅರಳಿ ಪ್ರಕಾಶಿಸುತ್ತಿದ್ದುವು, ಪೂರ್ವ ಪಶ್ಚಿಮ ದಿಗಂಗನೆಯರು ವಿನೋದಾರ್ಥವಾಗಿ ಆಡುವುದಕ್ಕೋಸ್ಕರ ಪ್ರೀತಿಯಿ೦ದ ಹಿಡಿದಿರುವ ಮಾಣಿಕ್ಯದ ಮುತ್ತಿನ ಚ೦ಡುಗಳೋ ಎಂಬಂತೆ ಉದಯಿಸುತ್ತ ಪೂರ್ವ ದಿಕ್ಕಿನಲ್ಲಿ ಕೆಂಬಣ್ಣದಿಂದ ಪ್ರಕಾಶಿಸುವ ಸೂರ್ಯನೂ ಅಸ್ತಮಿಸುತ್ತ ಪಶ್ಚಿಮದಿಕ್ಕಿ ನಲ್ಲಿ ಬೆಳುಬಣ್ಣದಿಂದ ಒಪ್ಪುತ್ತಿರುವ ಚಂದ್ರನ ಪರಿಶೋಭಿಸುತ್ತಿದ್ದರು. - ಇಂಥ ಲೋಕ ತಮಸ್ಕತಿ ವಿನಾಶಕರವಾದ ಸೂರ್ಯೋದಯ ಸಮಯದಲ್ಲಿ ವಿವಿಧವಾದ ಮಂಗಳವಾದ್ಯ ಧ್ವನಿಗಳಿಂದಲೂ ವಂದಿಮಾಗಧರ ಜಯ ಜಯನಿನಾದಗ ಳಿಂದಲೂ ಎಚ್ಚೆತವನಾಗಿ ಶ್ರೀರಾಮಚಂದ್ರನು ಭಗವಂತನ ಧ್ಯಾನ ಪೂರ್ವಕವಾಗಿ ದಿವ್ಯ ತಲ್ಪದ ದೆಸೆಯಿಂದ ಉಪ್ಪವಡಿಸಿ ಮಂಗಳವಸ್ತು ದರ್ಶನವನ್ನು ಮಾಡಿ ಸ್ನಾನ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.