204 ಕಥಾಸಂಗ್ರಹ-೪ ನೆಯ ಭಾಗ ಸುತ್ತ ಅಯೋಧ್ಯಾನಗರ ದೇಶಗಳ ಸ್ಥಿತಿಯು ಬಹು ಪರಿತಾಪಕರವಾಗಿದ್ದಿತು. ಆಗ ರಾಜಕೋಶದಿಂದ ಕೊಡಲ್ಪಟ್ಟ ದ್ರವ್ಯರಾಶಿಯಿಂದ ಹೊಸದಾದ ಸ್ವರ್ಗಸೀಮೆಯೋ ಎಂಬಂತೆ ದೇಶವೆಲ್ಲವೂ ಮಂಗಳಕರವಾದ ಸುಸ್ಥಿತಿಯಿಂದ ಆಶ್ಚರ್ಯವನ್ನು ಬೀರುತ್ತ ಮನೋಹರತೆಯಿಂದ ಒಪ್ಪಿತು, ಅಯೋಧ್ಯಾ ದೇಶದಲ್ಲಿ ಎಲ್ಲಿ ನೋಡಿದರೂ ಊರೂರು ಗಳಲ್ಲಿ ತೋರಣ ಚಿತ್ರ ಪತಾಕಾಧ್ವಜಾದಿ ಮಂಗಳಸೂಚಕವಸ್ತುಗಳು ರಾರಾಜಿಸಿ ದುವು, ಬೀದಿಬೀದಿಗಳಲ್ಲಿ ಉತ್ಸವಗಳು ಭಜನೆಗಳು ಮನಂಗೊಳಿಸಿದುವು. ಲೋಕದಲ್ಲಿ ಪುಣ್ಯಾತ್ಮರ ಭೋಗಯೋಗ್ಯವಾದ ಅಮರಾವತಿಯೊಂದಿದ್ದರೆ ಅದೇ ಇದು ಎಂಬಂತೆ ವಾಚಾಮಗೋಚರವಾದ ಶೃಂಗಾರದಿಂದ ಅಯೋಧ್ಯಾನಗರವು ಪರಿಶೋಭಿಸಿತು. ಪ್ರತಿಯೊಂದು ಮಂದಿರವೂ ವಿಚಿತ್ರಾಲಂಕಾರದಿಂದ ಕೂಡಿ ನೋಟಿಕರ ಕಣ್ಣಗೆಗಳನ್ನು ಸೆಳೆಯುತ್ತ ಒಪ್ಪುತ್ತಿದ್ದಿತು. ರಾಜಾಲಯಗಳ ಮತ್ತು ದೇವಾಲಯಗಳ ಚಿತ್ರಶೃಂ ಗಾರ ಚಮತ್ಕೃತಿಗಳನ್ನು ಬಣ್ಣಿಸುವುದಕ್ಕೆ ಬರುವುದಿಲ್ಲವು. ವಿದೇಶಗತರಾಗಿದ್ದ ಜನರೆಲ್ಲರೂ ಸಂತೋಷಭಾವಭರಿತವಾದ ಹೃದಯವುಳ್ಳವರಾಗಿ ಅಮಲ್ಯಾಂಬರಾಭ ರಣಗಳಿಂದ ಭೂಷಿಸಿಕೊಂಡು ಬಂದು ನೆರೆದರು. ಅನಂತರದಲ್ಲಿ ಶ್ರೀರಾಮ ದರ್ಶನೋ ತುಕತೆಯಿಂದ ಸಮಸ್ತ ದೇಶದ ಪ್ರಜೆಗಳೂ ಬಂದು ನೆರೆದರು, ಮುನಿಜನಗಳೂ ಮಂತ್ರಿಗಳೂ ಸಮಸ್ತ ಪರಿವಾರದೊಡನೆ ಕೂಡಿದವರಾಗಿ ಮಂಗಳದ್ರವ್ಯಗಳನ್ನು ತೆಗೆದುಕೊಂಡು ಬಂದು ನಿಂತರು. ಕೂಡಲೆ ಶ್ರೀರಾಮದರ್ಶನಾರ್ಥವಾಗಿ ನಾಲು ಸಮುದ್ರಗಳೂ ಬಂದು ನೆರೆದುವೋ ಎಂಬಂತೆ ಚತುರಂಗಬಲಗಳು ಬಂದು ನಿಂತುವು ವಿವಿಧವಾದ್ಯಗಳು ದೊರೆಯುತ್ತ ದಿಬ್ಬಂಡಲಗಳಲ್ಲಿ ಪ್ರತಿಧ್ವನಿಯನ್ನು ಹುಟ್ಟಿಸುತ್ತಿ ದ್ದುವು. ಆಗ ಪ್ರಮುಖರಾದ ಅಧಿಕೃತಿಗಳೂ ಪುರಜನರೂ ಶಿಲ್ಪಕಾರರೂ ಒಂದು ಗೂಡಿ ಶ್ರೀರಾಮನ ಬರುವಿಕೆಯನ್ನು ಎದುರುನೋಡುತ್ತ ಪುಷ್ಟ ಫಲಗಳನ್ನು ಹಿಡಿದು ನಿಂತರು. ಆನಂತರದಲ್ಲಿ ಶ್ರೀರಾಮಚಂದ್ರನು ಹೊರಟು ಗೋಧೂಳಿ ಲಗ್ನದಲ್ಲಿ ಆಯೋ ಧ್ಯಾನಗರವನ್ನು ಪ್ರವೇಶಿಸಿ ತನ್ನ ತಂದೆಯಾದ ದಶರಥಮಹಾರಾಜನ ಅರಮನೆಯನ್ನು ಹೊಕ್ಕು ಅಲ್ಲಿಳಿದು ಕೊಂಡು ತನ್ನ ಪ್ರಿಯ ಸಹೋದರನಾದ ಭರತನನ್ನು ನೋಡಿ.. ಎಲೈ ಭರತನೇ, ನಮ್ಮ ಪ್ರಾಣಸಖನಾದ ಸುಗ್ರೀವನು ನಮಗೆ ಪರಮೋಪಕಾರವನ್ನು ಮಾಡಿದವನಾದುದರಿಂದ ಸೇನಾಸಮೇತನಾಗಿ ನೀನೇ ಹೋಗಿ ಆತನನ್ನು ವಿಭವದೊ ಡನೆ ಕರೆದು ಕೊಂಡು ಬಂದು ನನ್ನ ಮೊದಲಿನರಮನೆಯಲ್ಲಿಳಿಸಿ ಆತನ ಉಪಚಾರ ವಿಷ ಯದಲ್ಲಿ ಯಾವ ಭಾಗದಲ್ಲೂ ಕೊರತೆಯುಂಟಾಗದಂತೆ ವಿಚಾರಿಸಿಕೊಳ್ಳುವವನಾಗು ಹೋಗು ಎಂದು ಅಪ್ಪಣೆಯನ್ನು ಕೊಡಲು ; ಆಗ ಅನುಜ್ಜಾತನಾದ ಭರತನು ಸಂತೋ ಷದಿಂದ ಕೂಡಿ ಸಮಸ್ಯೆ ಪರಿವಾರಸಮೇತನಾಗಿ ಸುಗ್ರೀವನ ಬಳಿಗೆ ಬಂದು ಪ್ರೀತಿ ಯಿಂದ ಆತನ ಕೈಯನ್ನು ಹಿಡಿದು ಕೊಂಡು ಕುಶಲಪ್ರಶ್ನೆ ಯಂಗೆಯ್ಯು ಸಕಲ ಮರ್ಯಾ ದೆಯಿಂದ ಶ್ರೀರಾಮನ ಮೊದಲಿನರಮನೆಗೆ ಕರೆದು ಕೊಂಡು ಬಂದು ಅಲ್ಲಿಳಿಸಿ ಸುಗ್ರೀ ವನನ್ನು ಕುರಿತು-ಎಲೈ ಪ್ರಿಯಸಖನೇ, ಮಹಾತ್ಮನಾದ ವಾನರಚಕ್ರೇಶ್ವರನೇ, ನೀನು ನಮಗೆ ಮಾಡಿದ ಮಹೋಪಕಾರಕ್ಕೆ ಪ್ರತಿಯಾಗಿ ನಾವು ನಿನಗೆ ಏನನ್ನು ತಾನೆ ಮಾಡಬಲ್ಲೆವು ? ನಾಲ್ಕು ಜನ ಸಹೋದರರಾದ ನಮ್ಮಲ್ಲಿ ನೀನು ಐದನೆಯವನು.
ಪುಟ:ಕಥಾ ಸಂಗ್ರಹ - ಭಾಗ ೨.djvu/೨೧೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.