ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೂರ್ಮಾವತಾರದ ಕಥೆ 217 ೧ 0 ಕ್ಷಾ ಮಾದಿಗಳಿಂದ ಕ್ರೌಭೆಪಡುತ್ತಿರುವುದನ್ನೂ ಚೆನ್ನಾಗಿ ತಿಳಿದು ಕೊಂಡು ಅಂಥ ವೇಳೆ ಯಲ್ಲಿ ಒಂದು ಕ್ಷಣವಾದರೂ ಸಾವಕಾಶಮಾಡದೆ ದಂಡೆತ್ತಿ ಹೋಗಿ ಹಗೆಗಳನ್ನು ಜಯಿಸಿ ಅವರ ದೇಶಕೋಶಗಳನ್ನು ಸ್ವಾಧೀನಮಾಡಿಕೊಳ್ಳುವರು ಎಂದು ಹೇಳಲು; ಆಗ ದೈತ್ಯರಾಜರೆಲ್ಲರೂ ಆಚಾರ್ಯರು ಹೇಳಿದಂತೆಯೇ ನಡೆಯಬೇಕೆಂದು ಏಕಮನ ಸ್ಸಿನಿಂದ ದೇವೇಂದ್ರನ ಮೇಲೆ ಯುದ್ಧಕ್ಕೆ ಹೋಗಬೇಕೆಂದು ಸರ್ವಬಲದೊಡನೆ ಸನ್ನ ಧ್ವರಾಗುತ್ತಿದ್ದರು.

  • ತರುವಾಯ ದೇವತೆಗಳ ಕುಲಗುರುಗಳಾದ ಬೃಹಸ್ಪತ್ಯಾಚಾರರು ವರ್ತಮಾ ನವನ್ನು ತಿಳಿಯುವುದಕ್ಕೋಸ್ಕರವಾಗಿ ದೈತ್ಯರ ಪಟ್ಟಣಗಳಿಗೆ ಕಳುಹಿಸಿದ್ದ ಬೇಹಿನ ವರು ದೈತ್ಯರ ಪ್ರಯತ್ನವನ್ನೆಲ್ಲಾ ತಿಳಿದು ಅತಿಶೀಘ್ರವಾಗಿ ಬೃಹಸ್ಪತ್ಯಾಚಾರ್ಯರ ಬಳಿಗೆ ಬಂದು ಆ ವರ್ತಮಾನವನ್ನೆಲ್ಲಾ ಗುಟ್ಟಾಗಿ ತಿಳಿಸಿದರು. ಆಗ ಬೃಹಸ್ಪತ್ಯಾಚಾ ರ್ಯರು ಬಹಳ ವ್ಯಾಕುಲಚಿತ್ತರಾಗಿ ದೇವೇಂದ್ರಾದೃಷ್ಟದಿಕ್ಕಾಲಕರನ್ನು ಕರಿಸಿ ಏಕಾಂತದಲ್ಲಿ ಕುಳ್ಳಿರಿಸಿಕೊಂಡು ವಿರೋಧಿಗಳಾದ ರಾಕ್ಷಸರ ಆಗಮನವನ್ನು ತಿಳಿಸಿ ಮಹಾಮುನಿಯಾದ ದೂರ್ವಾಸನ ಶಾಪದಿಂದ ಈ ಸಮಯದಲ್ಲಿ ನಮಗೆ ಪರಾಜ ಯವಾಗುವುದು ಸಿದ್ದವು. ಈಗ ನಾವು ವ್ಯರ್ಥವಾಗಿ ಯುದ್ಧರಂಗದಲ್ಲಿ ದೈತ್ಯರೊ ಡನೆ ಹೋರಾಡಿ ಹತರಾಗುವುದಕ್ಕಿಂತ ನಾವೆಲ್ಲರೂ ಈ ಸ್ವರ್ಗಲೋಕವನ್ನೇ ಬಿಟ್ಟು ಪುತ್ರಮಿತ್ರಕಳತ್ರಾದಿಗಳೊಡನೆ ಕೂಡಿ ಎಲ್ಲಿಯಾದರೂ ಗುಪ್ತವಾಗಿಯ ನಿರ್ಬಾಧಕ ವಾಗಿಯೂ ಇರುವ ಒಂದು ಪುಣ್ಯಾಶ್ರಮಕ್ಕೆ ಹೋಗಿ ಅಲ್ಲಿ ಮಹಾವಿಷ್ಣುವನ್ನು ಆರಾಧಿಸುತ್ತ ಕೆಲಕಾಲದ ವರೆಗೂ ಇದ್ದು ಕೊಂಡು ಸಮಯ ಬಂದಾಗ ಹಗೆಗಳಾದ ದೈತ್ಯರನ್ನು ಯುದ್ದ ರಂಗದಲ್ಲಿ ಸೋಲಿಸಿ ನಮ್ಮ ದೇವಲೋಕವನ್ನು ಸಾಧಿಸುವುದು ನನ್ನ ಬುದ್ದಿಗೆ ಯುಕ್ತವಾಗಿ ತೋರುತ್ತಿದೆ ಎಂದು ಹೇಳಲು ; ಆ ಮಾತಿಗೆ ದೇವತೆಗ ಳೆಲ್ಲಾ ಒಡಂಬಟ್ಟುದರಿಂದ ಸುರಾಚಾರ್ಯನು--ನೀವೆಲ್ಲರೂ ಶೀಘ್ರವಾಗಿ ಹೊರಟು ಹೋಗಿ ನೈಮಿಶಾರಣ್ಯವೆಂಬ ಪುಣ್ಯ ಕ್ಷೇತ್ರದಲ್ಲಿ ವಾಸಮಾಡಿರಿ; ನಾನು ಶುಕ್ರಾಚಾ ರ್ಯರನ್ನೂ ದೈತ್ಯರಾಜರನ್ನೂ ಕಂಡು ಕೂಡಲೆ ನಿಮ್ಮ ಬಳಿಗೆ ಬರುವೆನು ಎಂದು ಹೇಳಿ ಅವರನ್ನೆಲ್ಲಾ ಅಲ್ಲಿಂದ ಕಳುಹಿಸಿಬಿಟ್ಟು ತಾನು ಜಾಗ್ರತೆಯಾಗಿ ರಸಾತಲಕ್ಕೆ ಒಂದು ದೈತ್ಯರಾಜರ ಬಳಿಗೆ ಬರಲು ; ಆಗ ಅವರೆಲ್ಲರೂ ಇವರಿಗೆ ಅಭಿವಂದಿಸಿ ಸರ್ವೋಪಚಾರಗಳನ್ನೂ ಮಾಡಿ ರಹಸ್ಯ ಸ್ಥಳದಲ್ಲಿ ಕುಳ್ಳಿರಿಸಿಕೊಂಡು ತಾವು ದಯೆ ಮಾಡಿದ ಕಾರ್ಯವೇನು ? ನಿಮ್ಮ ಮುಖವನ್ನು ನೋಡಿದರೆ ಬಲು ದುಗುಡದಿಂದಿರು ವಂತೆ ಕಾಣುತ್ತದೆ ಎಂದು ಕೇಳಲು ; ಆಗ ಸುರಾಚಾರ್ಯನು--ಎಲೈ ದೈತ್ಯೇಂದ್ರ ರುಗಳಿರಾ, ನಾನು ಈಗ ಹೇಳುವ ಮಾತುಗಳನ್ನೆಲ್ಲಾ ನೀವು ಸಾವಧಾನದಿಂದ ಕೇಳಿ ಮಹಾಬುದ್ಧಿಶಾಲಿಗಳಾದ ಶುಕ್ರಾಚಾರ್ಯರೊಡನೆ ಆಲೋಚಿಸಿ ನಾನು ಹೇಳುವುದು ಯುಕ್ತವಾಗಿದ್ದರೆ ಆ ಪ್ರಕಾರವೇ ನಡೆಯಬಹುದು. . ಆ ಮಾತುಗಳು ಯಾವುವೆಂ ದರೆ-ದೇವೇಂದ್ರನಿಗೆ ನಾನು ಬಾರಿಬಾರಿಗೂ ಎಷ್ಟು ವಿಧವಾಗಿ ನೀತಿಗಳನ್ನು ಉಪ ದೇಶಮಾಡುತ್ತ ಬಂದಾಗ್ಗೂ ಆತನು ತನ್ನ ಸಿರಿಯ ಮದದಿಂದ ಆ ಉಪದೇಶವನ್ನು