ಕೂರ್ಮಾವತಾರದ ಕಥೆ 221 ಆ ಮಾತನ್ನು ಕೇಳಿ ಶುಕ್ರಾಚಾರ್ಯರೂ ದೈತ್ಯರಾಜರೂ ಬೃಹಸ್ಪತ್ಯಾಚಾ ರ್ಯರ ಯುಕ್ತಿಯನ್ನು ಬಹಳವಾಗಿ ಕೊಂಡಾಡಿ ಮುಂದೆ ನಾವು ನಡೆಯಬೇಕಾದ ಕ್ರಮವನ್ನು ದಯಮಾಡಿ ನೇಮಿಸಬೇಕೆಂದು ಬೇಡಿಕೊಂಡರು. ಅದಕ್ಕೆ ಸಂತುಷ್ಟ ರಾದ ಬೃಹಸ್ಪತ್ವಾಚಾರ್ಯರು-ನೀವು ಇತ್ತಂಡದವರೂ ಕೂಡಿ ಏಕಮನಸ್ಸಿನಿಂದ ಪಾಲ್ಗಡಲನ್ನು ಕಡೆಯುವಲ್ಲಿ ಅಮೃತ ಒಂದು ವಿನಾ ಉಳಿದ ಭೋಗ್ಯ ವಸ್ತುಗಳು ಏನೇನು ಹುಟ್ಟಿದಾಗ್ಯೂ ಅವುಗಳಲ್ಲಿ ಒಂದನ್ನಾದರೂ ನೀವು ಮುಟ್ಟದೆ ದೇವತೆಗಳಿಗೇ ಬಿಟ್ಟು ನೀವು ಅಮೃತ ಒಂದನ್ನು ಮಾತ್ರ ತೆಗೆದು ಕೊಂಡು ಪಾನಮಾಡಿದರೆ ನೀವೇ ಅಮರ್ತ್ಯರಾಗುವಿರಿ. ಹೀಗೆ ಮಾಡುವುದರಿಂದ ನೋಡುವವರಿಗೆ ನ್ಯಾಯವಾಗಿಯ ಇರುವುದು ಎಂದು ಹೇಳಲು ; ಆ ಮಾತನ್ನು ಕೇಳಿ ದೈತ್ಯರೆಲ್ಲರೂ ಮಹಾತ್ಮರಾದ ಈ ಬೃಹಸ್ಪತ್ವಾಚಾರ್ಯರು ನಿಜವಾಗಿಯೂ ನಮ್ಮ ಶ್ರೇಯಸ್ಸನ್ನೆ ಕೋರಿಕೊಂಡಿರು ವರೇ ಹೊರತು ದೇವತೆಗಳಲ್ಲಿ ಅಣುಮಾತ್ರವಾದರೂ ಪ್ರೇಮವಿಲ್ಲ ವೆಂದು ತಮ್ಮ ಮನ ಸ್ಸಿನಲ್ಲಿ ತಿಳಿದು ನಿಶ್ಚಯಿಸಿಕೊಂಡು ಸುರಗುರುವನ್ನು ಕುರಿತು ಸ್ವಾಮಿಾ, ಇನ್ನು ಮುಂದೆ ಏನು ಮಾಡುವಿರಿ ಎಂದು ಕೇಳಲು, ಆಗ ಸುರಾಚಾರ್ಯನು--ನಾನು ಹೋಗಿ ಸಮಯೋಚಿತವಚನಗಳಿಂದ ಇಂದ್ರಾದಿಗಳನ್ನೆಲ್ಲಾ ಕರೆದು ಕೊಂಡು ಬಂದು ಮಂದರಗಿರಿಯ ತಪ್ಪಲಲ್ಲಿ ನಿಲ್ಲಿಸಿ ತಿರಿಗಿ ಇಲ್ಲಿಗೆ ಬಂದು ನಿಮ್ಮ ನ್ನೂ ಅಲ್ಲಿಗೆ ಕರೆದು ಕೊಂಡು ಹೋಗುವೆನು ಎಂದು ಹೇಳಿ ತಿರಿಗಿ ಮಹಾವಿಷು ವಿನ ಬಳಿಗೆ ಬಂದು ತಾನು ದೈತ್ಯರೊಡನೆ ಆಲೋಚಿಸಿಕೊಂಡು ಬಂದ ಸಂಗತಿಯನ್ನೆಲ್ಲಾ ಆದ್ಯಂತವಾಗಿ ತಿಳಿಸಿ ಕಡೆಗೆ ಅಮೃತವು ಅಮಗೆ ಸೇರದೆ ದೇವತೆಗಳಿಗೇ ಸೇರುವ ಹಾಗೆ ಮಾಡುವ ಭಾರವು ಸರ್ವಶಕ್ತನಾದ ನಿನ್ನನ್ನೇ ಹೊಂದಿದೆ ಎಂದು ಹೇಳಲು; ಆಗ ವಿಷ್ಣುವು ಹಾಗೇ ಮಾಡುವೆನೆಂದು ನಂಬಿಕೆಯನ್ನು ಕೊಟ್ಟು ಕಳುಹಿಸಿದನು. ಅನಂತರದಲ್ಲಿ ಬೃಹಸ್ಪತ್ವಾಚಾರ್ಯರು ಅಲ್ಲಿಂದ ಹೊರಟು ಬಂದು ದೇವೇಂ ದ್ರಾದಿಗಳನ್ನೆಲ್ಲಾ ಕರೆದು ಕೊಂಡು ಬಂದು ಮಂದರಪರ್ವತದ ಬಳಿಯಲ್ಲಿ ನಿಲ್ಲಿಸಿ ಆ ಮೇಲೆ ದೈತ್ಯರಾಜರ ಬಳಿಗೆ ಹೋಗಿ ಶುಕ್ರಾಚಾರ್ಯರು ಸಹಿತವಾಗಿ ಅವರನ್ನೆಲ್ಲಾ ಕರೆದುಕೊಂಡು ದೇವತೆಗಳ ಬಳಿಗೆ ಬಂದು ಕಾಲೋಚಿತವಾದ ಮಾತುಗಳಿಂದ ಇತ್ತಂ ಡದವರಿಗೂ ಸಮಾಧಾನವನ್ನು ೦ಟುಮಾಡಿ ಸ್ನೇಹವನ್ನು ಬೆಳಿಸಿದನು ಆ ಮೇಲೆ ಸುರಾಸುರರು ದೈತ್ಯ ದಾನವರು ಯಕ್ಷಗರುಡಗಂಧರ್ವಕಿಂಪುರುಷೋರಗರೇ ಮೊದ .ಲಾದವರೆಲ್ಲಾ ಏಕಚಿತ್ತದಿಂದ ಕೂಡಿ ಮಂದರಗಿರಿಯನ್ನು ಕೀಳುವುದಕ್ಕೆ ಆರಂಭಿಸಿದರು. ಎಷ್ಟು ಶ್ರಮಪಟ್ಟು ಕಿತ್ತಾಗ ಆ ಗಿರಿಯು ಸ್ವಲ್ಪವಾದರೂ ಅಲ್ಲಾಡದೆ ಇದ್ದುದ ರಿಂದ ದೇವಾಸುರರು ಮಹಾ ವ್ಯಸನಾಕ್ರಾಂತರಾಗಿ ವಿಷ್ಣು ವಿಗೆ ನಮಸ್ಕರಿಸಿ ಭಯಭ ಕ್ತಿಯಿಂದ ಪ್ರಾರ್ಥನೆಯನ್ನು ಮಾಡಿಕೊಳ್ಳಲು ; ಆಗ ವಿಷ್ಣುವ ಅನಂತನೆಂಬ ಮಹಾ ಶೇಷನನ್ನು ಕರೆದು--ನೀನು ಹೋಗಿ ಮಂದರಾಚಲವನ್ನು ಕಿತ್ತಿಟ್ಟು ಬಾ ಎಂದು ಹೇಳಿ ಕಳುಹಿಸಲು ; ಆತನು ಮಹಾ ಬಲಶಾಲಿಯಾದುದರಿಂದ ನಿಮೇಷಮಾತ್ರದಲ್ಲಿ ಆ ಗಿರಿಯನ್ನು ಕಿತ್ತು ಇರಿಸಿದನು. ಆ ಮೇಲೆ ಸುರಾಸುರ ಸಮೂಹವು ಸಂತೋಷದಿಂದ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.