ವರಾಹಾವತಾರದ ಕಥೆ 223 ಕನೇ, ಕಿ೦ಚಿದಾಶೆಯಿಂದ ಪ್ರಾಣಧಾರಣೆಯನ್ನು ಮಾಡಿಕೊಂಡು ಸ್ಥಾನಭ್ರಷ್ಟ ರಾಗಿ ಅನಾಥಬಂಧುವಾದ ನಿನ್ನನ್ನು ನಂಬಿಕೊಂಡಿದ್ದ ನಮಗಿನ್ನೇನು ಗತಿ ? ಈ ವೇಳೆ ಯಲ್ಲಿ ಆಪತ್ಸಮುದ್ರ ನಿಮಗ್ನರಾದ ನಮ್ಮನ್ನು ಕೃಪೆಯಿಂದ ಕಾಪಾಡದೆ ಹೋದರೆ ನಾವೆಲ್ಲರೂ ಸತ್ಯವಾಗಿ ಕೆಟ್ಟುಹೋಗುತ್ತೇವೆ. ಸ್ವಾಮಿಾ, ರಕ್ಷಿಸು ರಕ್ಷಿಸು ಎಂದು ಬಹಳವಾಗಿ ಬೇಡಿಕೊಂಡು ಸ್ತುತಿಸಿದುದರಿಂದ ಕರುಣಾಳುವಾದ ವಿಷ್ಣುವು ತ್ರಿಲೋಕ ಮೋಹನಕರವಾದ ಮೋಹಿನೀರೂಪವನ್ನು ಧರಿಸಿ ದೈತ್ಯರನ್ನು ವಂಚಿಸಿ ಅವರ ಕೈಯಿಂದ ಅಮೃತ ಕಲಶವನ್ನು ತೆಗೆದು ಕೊಂಡು ದೇವತೆಗಳಿಗೆಲ್ಲಾ ಅಮೃತಪಾನವನ್ನು ಮಾಡಿಸಿ ಧನ್ವಂತ್ರಿಯನ್ನೂ ಅಮೃತಕಲಶವನ್ನೂ ದೇವೇಂದ್ರನ ವಶಕ್ಕೆ ಕೊಟ್ಟು ಅದೃಶ್ಯವಾಗಿ ಹೋದನು. ಆಗ ದೈತ್ಯರೆಲ್ಲಾ ಕೂಡಿ ಮಹಾವ್ಯಸನದಿಂದ ಮೋಸ ಹೋದೆವೆಂದು ಯೋಚಿಸಿಕೊಂಡು ದೇವತೆಗಳ ಕಡೆಯಿಂದ ತಿರಿಗಿ ಅಮೃತಕಲಶ ವನ್ನು ಕಿತ್ತು ಕೊಳ್ಳಬೇಕೆಂದು ಯುದ್ಧ ಕೈ ಉದ್ಯುಕ್ತರಾಗಲು ; ಆಗ ದೇವೇಂದ್ರಾದಿ ದೇವತೆಗಳೆಲ್ಲಾ ಅಮೃತಪಾನಬಲದಿಂದ ಯುದ್ಧರಂಗದಲ್ಲಿ ದೈತ್ಯರನ್ನೆಲ್ಲಾ ಜಯಿಸಿದುದ. ರಿಂದ ಆ ದೈತ್ಯರೆಲ್ಲರೂ ಹೆದರಿ ಸ್ವರ್ಗವನ್ನು ಬಿಟ್ಟು ರಸಾತಲಕ್ಕೆ ಓಡಿಹೋದರು. ತರುವಾಯ ದೇವತೆಗಳೆಲ್ಲರೂ ಮಹಾವಿಷ್ಣುವನ್ನು ಕಂಡು ನಮಸ್ಕರಿಸಿ ಬಹುವಿಧ ವಾಗಿ ಸ್ತುತಿಸಿ ಸ್ವರ್ಗಲೋಕಕ್ಕೆ ಬಂದು ದೇವೇಂದ್ರನಿಗೆ ಯಥಾವತ್ತಾಗಿ ತ್ರಿಲೋಕ ರಾಜ್ಯಾಭಿಷೇಕವನ್ನು ಮಾಡಿ ಸುಖದಿಂದಿದ್ದರು. 3, THE THIRD OR BOAR INCARNATION. ೩, ವರಾಹಾವತಾರದ ಕಥೆ. ಸನಕಸನಂದರೆಂಬ ಮುನಿಗಳ ಶಾಪದಿಂದ ಚತುರ್ಮುಖಬ್ರಹ್ಮನ ಮಾನಸಪುತ್ರ ನಾದ ಕಶ್ಯಪಪ್ರಜಾಪತಿಯ ಹೆಂಡತಿಯಾದ ದಿತಿಯ ಬಸುರಿನಲ್ಲಿ ವೈಕುಂಠಲೋಕದ ದ್ವಾರಪಾಲಕರಾದ ಜಯ ವಿಜಯರು ಅವಳಿ ಮಕ್ಕಳಾಗಿ ಹುಟ್ಟಲು ; ಆ ಕಾಲದಲ್ಲಿ ಬ್ರಹ್ಮದೇವನು ಅವರ ಬಳಿಗೆ ಬಂದು ಹಿರಿಯವನಿಗೆ ಹಿರಣ್ಯಕಶಿಪುವೆಂದೂ ಕಿರಿಯವನಿಗೆ ಹಿರಣ್ಯಾಕ್ಷನೆಂದೂ ಹೆಸರನ್ನಿಟ್ಟು ಅವರಿಗೆ ಬೇಕಾದ ವಸ್ತ್ರಾಭರಣಾದಿ ಸಮಸ್ತ ವಸ್ತು ಗಳನ್ನೂ ಕೊಟ್ಟು ಹರಸಿ ಸತ್ಯಲೋಕಕ್ಕೆ ಹೊರಟು ಹೋದನು, ಆ ಮೇಲೆ ಅವರಿ ಬೃರೂ ಅದ್ಭುತಾಕಾರರಾಗಿ ಬೆಳೆದು ಮಹಾಪರಾಕ್ರಮಶಾಲಿಗಳಾಗಿ ವಿರೋಧಿಗಳ ಮೇಲೆ ಹೊರಟು ದಿಗ್ವಿಜಯಗಳನ್ನು ಮಾಡಿ ಸಕಲ ಧರಣಿಮಂಡಲವನ್ನೂ ಸ್ವಾಧೀನ ಮಾಡಿಕೊಂಡು ಶೋಣಿತಪುರವೆಂಬ ಪಟ್ಟಣದಲ್ಲಿ ಅತಿಸಂಭ್ರಮದಿಂದ ವಾಸಮಾಡಿ ಕೊಂಡು ರಾಜ್ಯಭಾರವನ್ನು ಮಾಡುತ್ತ ಸುಖದಿಂದಿರುತ್ತಿದ್ದರು, ದೇವೇಂದ್ರನು ಅವ ರಿಗೆ ಹೆದರಿಕೊಂಡು ಅವರ ರಾಜ್ಯದಲ್ಲಿ ಕಾಲವನ್ನತಿಕ್ರಮಿಸದೆ ಸರಿಯಾಗಿ ಮಳೆಗಳನ್ನು ಕರೆಯುತ್ತ ಬಂದುದರಿಂದ ಹೊಲ ಗದ್ದೆ ತೋಟ ಮೊದಲಾದ ಭೂಮಿಗಳೆಲ್ಲಾ ಸಸ್ಯಾ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.