ನರಸಿಂಹಾವತಾರದ ಕಥೆ 229 ನಾನೀ ಪ್ರಾಣಗಳನ್ನು ಧರಿಸಲಾರೆನು, ಅಸಹಾಯ ಶೂರನಾದ ನಿನ್ನ ತಮ್ಮನು ಬೇಡ ವೆಂದು ಎಷ್ಟು ವಿಧವಾಗಿ ಹೇಳಿದರೂ ಕೇಳದೆ ಭೂಮಿಯನ್ನು ತೆಗೆದು ಕೊಂಡು ಹೋಗಿ ರಸಾತಲದಲ್ಲಿಟ್ಟನು. ಆ ನಿಮಿತ್ತದಿಂದ ವರಾಹಾಕಾರಧಾರಿಯಾಗಿ ಬಂದ ಎಷ್ಟು ವು ಆತನನ್ನು ಕೊಂದನು ಎಂದು ಬಹಳವಾಗಿ ರೋದಿಸುತ್ತ ಅವನ ಕೊರಳನ್ನು ತಬ್ಬಿಕೊಂಡು--ಎಲೈ ಕಂದಾ ! ಕೆಟ್ಟೆನು, ಕೆಟ್ಟೆನೈ, ಹಾ ! ಎಂದು ಮೊರೆಯಿಡಲು ; ಆ ಮಾತುಗಳನ್ನು ಕೇಳಿ ಹಿರಣ್ಯಕಶಿಪುವು ಮಹಾರೋಷಪರವಶನಾಗಿ ಏಳಲು ; ಕೂಡಲೆ ಅವನ ಕಣ್ಣಳೆರಡೂ ಕೆಂಡಗಳನ್ನು ಕಾರಿದುವು. ಮಾಸೆಗಳು ಕುಣಿ ಕುಣಿದಾಡಿದುವು. ತರುವಾಯ ಅವನು ಕೋಪಕಂಪಿತಾಧರನಾಗಿ ಈ ಕ್ಷಣದಲ್ಲಿಯೇ ಆ ನೀಚ ಸೂಕರನನ್ನು ಹಿಡಿದೆಳದು ಕೊಂಡು ಬಂದು ಸತ್ತ ತಮ್ಮನ ಕಾಲುಗಳ ಬಳಿ ಯಲ್ಲಿ ಕೆಡಹಿ ತತ್ತರದರಿದು ದಿಗ್ಟಲಿಯನ್ನು ಕೊಡುವೆನು ಎಂದು ದಿಗ್ವಿತಿಗಳೊಡೆಯು ವಂತೆ ಆರ್ಭಟಿಸುತ್ತ ಹೊರಟು ಕ್ರಮವಾಗಿ ದಶದಿಕ್ಕುಗಳನ್ನೂ ಸಮುದ್ರ ಗಳನ್ನೂ ಅವುಗಳೊಳಗಣ ದ್ವೀಪಾಂತರಗಳನ್ನೂ ತಲಾತಲರಸಾತಲ ಪಾತಾಳಾದಿ ಲೋಕಗ ಇನ್ನೂ ಪ್ರವೇಶಿಸಿ ಎಷ್ಟು ವಿಧವಾಗಿ ಹುಡುಕಿದಾಗ ಮಹಾವಿಷ್ಣುವನ್ನು ಕಾಣದೆ ಆತನು ಧರ್ಮದ ಬಳಿಯಲ್ಲಿರುವನೆಂದು ತನ್ನ ಮನಸ್ಸಿನಲ್ಲಿ ಯೋಚಿಸಿ ವೇದಶಾಸ್ತ್ರಗ ಳನ್ನು ಓದುವವರ ಬಳಿಗಳಲ್ಲೂ ಜಪತಪೋಹೋಮನಿಯಮಗಳು ನಡೆಯುವ ಸ್ಥಳಗ ಳಲ್ಲೂ ಗಂಗಾದಿ ಮಹಾ ನದಿಗಳ ತೀರಗಳಲ್ಲೂ ಪುಣ್ಯ ಕ್ಷೇತ್ರಗಳಲ್ಲೂ ಹೋಗಿ ನೋಡಿ ನೋಡಿ ಸಾಕಾಗಿ ಎಲ್ಲೂ ವಿಷ್ಣುವನ್ನು ಕಾಣದೆ ಆ ಸು ಜನರನ್ನೂ ಮುನಿಜನಗಳನ್ನೂ ಹೊಡೆದು ಬಾಧಿಸಿ ಅವರ ಸತ್ಕರ್ಮಗಳನ್ನೆಲ್ಲಾ ವಿನಾಶಮಾಡಿ ಅಲ್ಲಿ ಒಂದು ಸ್ಥಳದಲ್ಲಿ ನಿಂತು-ಈ ವರೆಗೂ ಎಷ್ಟು ಹುಡುಕಿದಾಗ ಆ ಕಳ್ಳನಾದ ವಿಷ್ಣುವು ಸಿಕ್ಕಲಿಲ್ಲ. ಈ ಹುಡುಕುವಿಕೆಯು ಹಾಗಿರಲಿ, ಇನ್ನು ಮೇಲೆ ನನಗೆ ಯಾರಿಂದಲೂ ಮರಣವು ಸಂಭವಿಸದಂತೆ ಸರೋಜಸಂಭವನಿಂದ ವರವನ್ನು ಪಡೆದು ಆ ವರಬಲದಿಂದ ಆ ಕಪ ಟಿಯಾದ ವಿಷ್ಣುವು ಎಲ್ಲಿ ಹೊಕ್ಕಿದ್ದರೂ ಹಾವಾಡಿಗನು ಮಂತ್ರಬಲದಿಂದ ಹುತ್ತ ದಲ್ಲಿ ಹೊಕ್ಕಿದ್ದ ಹಾವನ್ನು ಹೊರಗೆ ತೆಗೆದು ಎಷದ ಹಲ್ಲನ್ನು ಮುರಿಯುವ ಹಾಗೆ ಅವನನ್ನು ಹಿಡಿದು ಬಡಿದು ಕೊಂದುಹಾಕಿ ನಿರ್ನಾಮ ಮಾಡಿಬಿಡುವೆನು ಎಂದು ತನ್ನ ಮನಸ್ಸಿಲ್ಲಿ ನಿಶ್ಚಯಿಸಿಕೊಂಡು ಹಿಂದಿರುಗಿ ತನ್ನ ತಾಯಿಯ ಬಳಿಗೆ ಬಂದುತಾಯಿಯೇ, ಆ ಮಾಫಿಯಾದ ವಿಷ್ಣು ವು ಈ ವರೆಗೂ ಎಷ್ಟು ಹುಡುಕಿದಾಗ್ಯೂ ಸಿಕ್ಕಲಿಲ್ಲ, ನನ್ನ ಆಯುಃಕಾಲವಿರುವ ವರೆಗೂ ಚೆನ್ನಾಗಿ ಅರಸಿ ಅವರು ಎಲ್ಲಿದ್ದರೂ ಬಿಡದೆ ಹಿಡಿದು ಅವನನ್ನು ಬಡಿದು ಕೊಲ್ಲದೆ ಬಿಡೆನು, ಆದರೆ ಈಗ ನನ್ನ ಪ್ರಾಣ ಗಳಿಗೆ ಭಯವಿಲ್ಲದಂತೆ ಮಹಾ ಘೋರತಪಸ್ಸನ್ನು ಮಾಡಿ ವರವನ್ನು ಪಡೆದು ಕೊಂ ಡು ಬರುವೆನು, ಆ ವರೆಗೂ ನೀನು ದುಃಖಿಸದೆ ಇರು ಎಂದು ತನ್ನ ತಾಯಿ ಮೊದ ಲಾದ ಸಂಸಾರದ ಜನಗಳನ್ನೆಲ್ಲಾ ಸಮಾಧಾನಪಡಿಸಿ ಅಲ್ಲಿಂದ ಹೊರಟು ಅತಿ ಶೀಘ್ರ ಗತಿಯಿಂದ ಮ೦ದರಪರ್ವತಕ್ಕೆ ಬಂದು ಅಲ್ಲೊಂದು ಪ್ರಶಸ್ತವಾದ ಸ್ಥಳದಲ್ಲಿ ಕಾಲಿ ನ ಹೆಬ್ಬೆಟ್ಟನ್ನು ನೆಲಕ್ಕೂರಿ ನಿಂತು ಕತ್ತನ್ನು ಎತ್ತಿ ಕಣ್ಣು ಬಿಟ್ಟು ಕೊಂಡು ಸೂರ್ಯ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.