ರಾವಣನ ದಿಗ್ವಿಜಯವು 13 ನೀನು ಮತಿಹೀನತೆಯನ್ನು ಬಿಟ್ಟು ಜಗದೇಕವೀರನೂ ಸಮಸ್ತ ದೇವತೆಗಳಿಗೂ ಒಡೆ .ಯನೂ ಆದ ನನ್ನನ್ನು ಮದುವೆಯಾಗಿ ಸುಖದಲ್ಲಿರು ಎಂದು ಎಷ್ಟು ವಿಧವಾಗಿ ಹೇಳಿ ದರೂ ಆಕೆಯು ಒಪ್ಪದಿದ್ದ ಕಾರಣ ರಾವಣನು ಆಕೆಯನ್ನು ಬಲಾತ್ಕರಿಸುವುದಕ್ಕೆ ಯತ್ನಿಸಲು ; ಆಗ ಆ ವೇದವತಿಯು ಅಗ್ನಿಗೆ ಸಮಾನವಾದ ಕೋಪದಿಂದ ಕಣ್ಣಳು ಕೆಂಪಡರಲು- ಎಲೈ ಮಢಾತ್ಮನೇ, ಇಂಥ ದುರ್ವೃತ್ತಿಯಿಂದ ಬಹು ಪಾಪಿಯಾದ ನಿನ್ನನ್ನು ಕೊಲ್ಲುವುದು ನನಗೆ ಅಗಾಧವಲ್ಲ, ಆದರೆ ನನ್ನ ತಪಃಫಲವು ನಿರರ್ಥಕವಾ ಗುವುದು. ಅಲ್ಲದೆ ಸ್ತ್ರೀಯು ಪುರುಷನನ್ನು ವಧಿಸುವುದು ಧರ್ಮಶಾಸ್ತ್ರದಲ್ಲಿ ನಿಷೇಧಿ ಸಲ್ಪಟ್ಟಿದೆ. ಅದು ಕಾರಣ ನಾನು ಈ ದೇಹವನ್ನು ಬಿಟ್ಟು ಪುನಃ ಸೀತೆಯೆಂಬಭಿಧಾನ ದಿಂದವತರಿಸಿ ರಾಮನಾಮದಿಂದವತರಿಸುವ ವಿಷ್ಣು ವನ್ನು ವರಿಸಿ ಮದುವೆಯಾಗಿ ಆತನ ಕೈಯಿಂದ ನಿನ್ನನ್ನು ಕೊಲ್ಲಿಸುವೆನೆಂದು ಬಿರುನುಡಿಯಂ ನುಡಿದು ಆ ಕ್ಷಣವೇ ಅಗ್ನಿಯಲ್ಲಿ ಹೊಕ್ಕು ಶರೀರವನ್ನು ತ್ಯಜಿಸಿದಳು. ಆನಂತರದಲ್ಲಿ ರಾವಣನು ಹತಾಶನಾಗಿ ಪುಷ್ಪಕಾರೋಹಣವನ್ನು ಮಾಡಿ ಭೂಮಂಡಲದಲ್ಲಿ ಸಂಚರಿಸುತ್ತ ಮರುತ್ತನೆಂಬ ಮಹಾರಾಜನು ಯಜ್ಞ ಮಾಡುತ್ತಿ ರಲು ; ಅಲ್ಲಿಗೆ ಬಂದನು. ಆಗ ಯಜ್ಞ ದಲ್ಲಿ ಹವಿರಾಹರಣಾರ್ಥವಾಗಿ ಬಂದಿದ್ದ ಇಂದ್ರನು ದುಷನಾದ ರಾವಣನನ್ನು ನೋಡಿ ಭಯಕಂಪಿತನಾಗಿ ಕೂಡಲೆ ನವಿಲಾ ದನು, ಯಮನು ಕಾಗೆಯಾದನು. ವರುಣನು ಹಂಸವಾದನು, ಕುಬೇರನು ಗೋಸು೦ ಬೆಯಾದನು, ಈ ರೀತಿಯಾಗಿ ದೇವತೆಗಳೆಲ್ಲ ರೂ ಬೇರೆ ಬೇರೆಯಾದ ಪ್ರಾಣಿಗಳಂತಿ ರುವ ರೂಪವನ್ನು ಹೊಂದಿ ನಿಜರೂಪಗಳನ್ನು ಮರೆಮಾಡಿಕೊಂಡರು, ಋಷಿಗಳೆ ಲ್ಲರೂ ತೋರಿದ ಕಡೆಗೆ ಓಡಿಹೋದರು. ರಾವಣನು ಮರುತ್ತರಾಜನೆಡೆಗೈತಂದ. ಎಲೈ ಅರಸೇ, ನೀನು ಶೂರನಾಗಿದ್ದರೆ ಈ ಕ್ಷಣವೇ ನನ್ನೊಡನೆ ಯುದ್ಧಕ್ಕೆ ಸನ್ನದ್ದ ನಾಗು, ಹೇಡಿಯಾದರೆ ಸೋತೆನೆಂದು ಹೇಳಿಬಿಡು, ನಿನ್ನನ್ನು ಕೊಲ್ಲದೆ ಬಿಡುತ್ತೇನೆನಲು; ಆಗ ಮರುತ್ತರಾಜನು-ಎಲಾ, ಮರ್ಖನಾದ ನೀನಾರು ? ಏಕಿಲ್ಲಿಬಂದೆ ? ಎಂದು ಕೇಳಲು--ನಾನು ಧನಪತಿಯಾದ ಕುಬೇರನ ತಮ್ಮ ನು, ದಶಾಸ್ಯನೆಂಬ ನನ್ನ ಹೆಸರು ಸರ್ವಲೋಕವಿದಿತವಾಗಿರುವುದು, ಮತ್ತು ನಾನು ಯುದ್ಧ ರಂಗದಲ್ಲಿ ಕುಬೇರನನ್ನು ಸೋಲಿಸಿ ಆತನ ವಿಮಾನವನ್ನು ಕಿತ್ತು ಕೊಂಡುದರಿಂದ ಶೂರೆನೆಂದು ಲೋಕದಲ್ಲೆಲ್ಲಾ ಪ್ರಖ್ಯಾತನಾಗಿರುವೆನು. ಹೀಗಿರುವಲ್ಲಿ ನೀನು ಮಾತ್ರ ನನ್ನನ್ನು ತಿಳಿಯದಿರುವುದು ಅತ್ಯಾಶ್ಚರ್ಯವಾಗಿದೆ, ಅಥವಾ ನೀನು ಮಢನೂ ಅಪ್ರಸಿದ್ಧನೂ ಆಗಿರಬಹುದು ಎಂದು ಹೇಳಲು ; ಮರುತ್ತರಾಜನು-ಆಹಾ ! ನೀನು ಉತ್ತಮ ಪುರುಷನು ! ಅಣ್ಣ ನೊಡನೆ ಯುದ್ಧ ಮಾಡಿ ಗೆದ್ದವನು ! ನೀನು ಸ್ವಲ್ಪವಾದರೂ ಧರ್ಮಮಾರ್ಗವನ್ನು ತಪ್ಪಿ ನಡೆವವನಲ್ಲಿ ಎಂದು ಸ್ತುತಿನಿಂದಾವಚನಗಳನ್ನಾಡಿ--ಒಳ್ಳೆಯದು, ಯುದ್ಧಕ್ಕೆ ನಿಲ್ಲೆಂದು ಹೇಳಿ, ತಾನು ಸನ್ನದ್ಧನಾಗುತ್ತಿದ್ದನು. ಆ ಸಮಯದಲ್ಲಿ ಬೃಹಸ್ಪತಿಯ ತಮ್ಮ ನಾದ ಸಾಗುತ್ತಿದ್ದನು. ಆ ಸಮಯದಲ್ಲಿ ಬೃಹಸ್ಪತಿಯ ತಮ್ಮ ನಾದ ಸಂವರ್ತನೆಂಬ ಪುರೋಹಿತನು ಬಂದು-ಎಲೈ ರಾಯನೇ, ಈಗ ನೀನು ಯಜ್ಞ ದೀಕ್ಷಿತನಾಗಿದ್ದೀಯೆ. ಈ ವೇಳೆಯಲ್ಲಿ ಇಂಥ ದುಷ್ಟನೊಡನೆ ಯುದ್ಧಕ್ಕೆ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.