266 ಕಥಾಸಂಗ್ರಹ-೫ ನೆಯ ಭಾಗ ಉಗ್ರಸೇನನೆಂಬ ರಾಜನಿಗೆ ಕ್ಷೀರಸಮುದ್ರದಲ್ಲಿ ವಿಷವು ಹುಟ್ಟಿದಂತೆ ಕಂಸನೆಂಬ ಒಬ್ಬ ದುಷ್ಟನಾದ ಮಗನು ಹುಟ್ಟಿ ಯೌವನವನ್ನು ಹೊಂದಿ ಮಹಾ ಪರಾಕ್ರಮಶಾ ಲಿಯಾಗಿ ಕೇವಲ ದುರ್ಮಾರ್ಗಿಯಾದುದರಿಂದ ತಂದೆಯಾದ ಉಗ್ರಸೇನನನ್ನು ನಿರ್ಬಂ ಧಿಸಿ ತಾನೇ ರಾಜ್ಯಭಾರವನ್ನು ಮಾಡುತ್ತ ದುಷ್ಟರಿಗೆ ಸಂತೋಷದಾಯಕನಾಗಿಯ ಸತ್ಪುರುಷರಿಗೆ ಎದೆಯ ಶೂಲಪ್ರಾಯನಾಗಿಯೇ ಇರುತ್ತ, ದೇವಕೀದೇವಿಯೆಂಬ ತನ್ನ ತಂಗಿಯು ಪ್ರಾಯದವಳಾದುದನ್ನು ನೋಡಿ ಆಕೆಯನ್ನು ವಸುದೇವನೆಂ ಬವನಿಗೆ ಕೊಟ್ಟು ಅತಿಸಂಭ್ರಮದಿಂದ ವಿವಾಹವನ್ನು ಮಾಡಿ ನಾಕಬಲಿಯ ದಿವಸ ಆ ವಧೂವರರನ್ನು ದಿವ್ಯರಥದ ಮೇಲೆ ಕುಳ್ಳಿರಿಸಿ ತಾನೇ ಸಾರಥ್ಯ ವನ್ನು ಮಾಡುತ್ತ ಅತಿಸಂಭ್ರಮದಿಂದ ರಾಜವೀಧಿಯಲ್ಲಿ ಮೆರವಣಿಗೆಯನ್ನು ಮಾಡಿಸಿಕೊಂಡು ಮಹಾಸಂತೋಷದಿಂದ ಕೂಡಿದವನಾಗಿ ಬರುತ್ತಿದ್ದನು. ಆ ಸಮಯದಲ್ಲಿ.-ಎಲೈ ಬುದ್ದಿ ಶೂನ್ಯನಾದ ಕಂಸನೇ, ಮಢತ್ವದಿಂದ ಏಕೆ ಇಷ್ಟು ಸಂತೋಷಪಡುತ್ತಿರುವಿ ? ಈ ನಿನ್ನ ತಂಗಿಯಾದ ದೇವಕಿಯ ಎಂಟನೆಯ ಬಸುರಿನಲ್ಲಿ ನಿನ್ನನ್ನು ಕೊಂದುಹಾಕುವ ಮಗನು ಹುಟ್ಟುವನು ಎಂದು ಆಕಾಶವಾ ಣಿಯು ಕೇಳಿಬಂದುದರಿಂದ ಆ ಕಂಸಾಸುರನು ಚಿಂತಾಕ್ರಾಂತನಾಗಿ ಮುಂತೋಚದೆ ಸ್ವಲ್ಪಕಾಲದ ವರೆಗೂ ದಿಗ್ರಾಂತನಾಗಿದ್ದು ಕೂರಕರ್ಮಿಯಾದುದರಿಂದ ಈ ದೇವಕಿಯು ಇದ್ದರಷ್ಟೆ ನನ್ನನ್ನು ಕೊಲ್ಲುವ ಮಕ್ಕಳು ಹುಟ್ಟು ವುದು ? ಈ ಕ್ಷಣ ದಲ್ಲೇ ಇವಳನ್ನೇ ಕಡಿದುಹಾಕುವೆನೆಂದು ಶೀಘ್ರವಾಗಿ ಒರೆಯಿಂದ ಕತ್ತಿಯನ್ನು ಹಿರಿ ಯಲು ; ಆಗ ವಸುದೇವನು ಮಹಾ ವ್ಯಾಕುಲಿತಾ೦ತರಂಗನಾಗಿ ಕಂಸಾಸುರನನ್ನು ಕುರಿತು-ಎಲೈ ಮಹಾ ಪರಾಕ್ರಮಶಾಲಿಯೇ, ನೀನು ಇಂಥ ಶ್ರೇಷ್ಠವಾದ ಯದುವಂಶದಲ್ಲಿ ಹುಟ್ಟಿ ಅಪ್ರತಿಮಶ್ರಪುರುಷನಾಗಿ ಹೇಡಿಗಳಂತೆ ಸೀಹತ್ಯೆಗೆ ಎಳೆ ಸಬಹುದೇ ? ಈ ಸಾಮಾನ್ಯ ಕಾರ್ಯವು ಲೋಕಭೀಕರವಾದ ನಿನ್ನ ವಿಕ್ರಮಕ್ಕೆ ಅಪ ಮಾನಕರವಾಗಿಲ್ಲ ವೇ ? ಅದು ಕಾರಣ ಮಹಾ ವೀರಾಗ್ರೇಸರನಾದ ನೀನು ಇಂಥ ಅಲ್ಪ ಕೃತ್ಯವನ್ನು ಬಿಡು, ಈಕೆಯ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳಷ್ಟೆ ನಿನ್ನನ್ನು ಕೊಂದು ಹಾಕತಕ್ಕವರು ? ಈಕೆಯು ಬೇರೆ ನಿನ್ನನ್ನು ಕೊಲ್ಲುವುದಿಲ್ಲ ವಷ್ಟೆ ? ಆದುದರಿಂದ ಇವಳ ಹೊಟ್ಟೆ ಯಲ್ಲಿ ಹುಟ್ಟಿದ ಮಕ್ಕಳನ್ನೆಲ್ಲಾ ಹುಟ್ಟಿದ ಕ್ಷಣದಲ್ಲೇ ನಿನ್ನ ವಶಕ್ಕೆ ಕೊಡು ವೆನು, ಅವುಗಳನ್ನು ನೀನು ತೆಗೆದು ಕೊಂಡು ನಿನ್ನ ಮನಸ್ಸಿಗೆ ಬಂದ ಹಾಗೆ ಮಾಡಿಕೊಂಡು ನೀನು ಚೆನ್ನಾಗಿ ಬದುಕುವ ದಾರಿಯನ್ನು ನೋಡಿಕೊಳ್ಳಬಹುದು ಎಂದು ವಿವಿಧ ವಾಗಿ ಸಾಮವಚನಗಳನ್ನು ಹೇಳಿದನು. ಆಗ ಕಂಸನು ಆ ಮಾತುಗಳಿಗೆ ಒಪ್ಪಿ ಅವ ರನ್ನು ಯಥಾಪ್ರಕಾರವಾಗಿ ಮೆರವಣಿಗೆಯಿಂದ ಕರೆದುಕೊಂಡು ಬಂದು ಅರಮನೆ ಯಲ್ಲಿರಿಸಿ ಅವರು ಒಂದು ಕ್ಷಣಕಾಲವಾದರೂ ಹೊರಗೆ ಹೋಗದ ಹಾಗೆ ಅತಿ ಜಾಗ ರೂಕತೆಯಿಂದಿರುವಂತೆ ನಂಬಿಕೆಯುಳ್ಳವರಾದ ಕಾವಲುಗಾರರನ್ನು ನೇಮಿಸಿ ಅವಳು ಗರ್ಭಿಣಿಯಾಗಿ ಹೆತ್ತ ಕ್ಷಣದಲ್ಲೇ ಬಂದು ತನಗೆ ತಿಳಿಸುವಂತೆ ಆಪ್ತರಾದ ಜನರನ್ನು ಕಟ್ಟುಮಾಡಿಸಿ ತಾನು ಬಂದು ಎಂದಿನಂತೆ ರಾಜ್ಯಭಾರವನ್ನು ಮಾಡುತ್ತ ನಿಂತ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.