276 ಕಥಾಸಂಗ್ರಹ-೪ ಸೆರು ಭಾಗ ಗಿಸಿ ನೆಲಕ್ಕೆ ಬಡಿದು ಅಪ್ಪಳಿಸಿ ಕೊಂದು ಬೀಸಾಡಿದನು. ಆ ಮೇಲೆ ಸಾಯಂಕಾಲ ವಾಗಲು ಎಲ್ಲ ರೂ ಹಳ್ಳಿಗೆ ಬಂದು ಆ ದಿವಸ ನಡೆದ ಸಮಾಚಾರವನ್ನೆಲ್ಲಾ ತಿಳಿಸಲು ; ಆಗ ಗೋಪಾಲಕರೆಲ್ಲ ರೂ-ಈ ಕೃಷ್ಣನು ಮಹಾತ್ಮನೆಂದು ತಿಳಿದು ಭಯಭಕ್ತಿ ಯಿಂದ ನಡೆದು ಕೊಳ್ಳುತ್ತಿದ್ದರು. ಅನಂತರದಲ್ಲಿ ಶರತ್ಕಾಲವು ಸಂಪ್ರಾಪ್ತವಾಗಲು ; ನಂದಗೋಪಾದಿ ಗೋಪಾ ಲಕರೆಲ್ಲರೂ ಕೂಡಿ-ನಾವು ಈ ಶರತ್ಕಾಲದಲ್ಲಿ ಪ್ರತಿಸಂವತ್ಸರದಲ್ಲೂ ಮಾಡು ತಿದ್ದ ಪದ್ದತಿಯ ಪ್ರಕಾರ ದೇವೇಂದ್ರನನ್ನು ಪೂಜಿಸಬೇಕೆಂದು ಯೋಚಿಸಿ ತರು ವಾಯ ಎಲ್ಲರೂ ದೇವೇಂದ್ರನ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಕೂಡಿಸುತ್ತಿ ರಲು ; ಆಗ ಕೃಷ್ಣನು ಅವರ ಬಳಿಗೆ ಹೋಗಿ--ಈ ರೀತಿಯಾಗಿ ಸಾಮಗ್ರಿಗಳನ್ನು ಏಕೆ ಕೂಡಿಸುತ್ತಿರುವಿರಿ ? ಎಂದು ಕೇಳಲು ; ಅದಕ್ಕೆ ಅವರು--ಎಲೈ ಕೃಷ್ಣನೇ, ಮಹಾತ್ಮನಾದ ದೇವೇಂದ್ರನು ಕಾಲಕಾಲಕ್ಕೆ ಮಳೆಗಳನ್ನು ಕರೆಯುವುದರಿಂದ ಕಾಡುಗಳಲ್ಲೂ ಗಿರಿಗಳಲ್ಲೂ ಬೇಕಾದ ಹಾಗೆ ಹುಲ್ಲು ನೀರುಗಳುಂಟಾಗಿ ನಮ್ಮ ದನಗಳು ಸೊಂಪಿನಿಂದ ಮೇಯ್ದು ಕುಡಿದು ವೃದ್ಧಿಯಾಗುವುದರಿಂದಲ್ಲ ವೇ ? ನಾವು ಸುಖದಿಂದ ಬದುಕುವುದು. ಆದುದರಿಂದ ನಮಗೆ ಉಪಕಾರವನ್ನು ಮಾಡುತ್ತಿರುವ ದೇವೇಂದ್ರನನ್ನು ಆರಾಧಿಸುತ್ತೇವೆ ಎಂದು ಹೇಳಿದರು. ಆ ಮಾತುಗಳನ್ನು ಕೇಳಿ ಕೃಷ್ಣನು--ದೇವೇಂದ್ರನಿಂದ ನಮಗೇನು ಪ್ರಯೋಜನ ? ನಮ್ಮ ದನಗಳಿಗೆ ಹುಲ್ಲು ನೀರುಗಳನ್ನು ಕೊಡುತ್ತಿರುವದು ಈ ಗೋವರ್ಧನ ಪರ್ವತವು, ಅದು ಕಾರಣ ನಾವು ಈ ಪರ್ವತದ ಹಬ್ಬವನ್ನು ಮಾಡಬೇಕು ಎನ್ನಲು ; ಅವರೆಲ್ಲರೂ ಕೃಷ್ಣನ ಮಾತುಗ ಳಿಗೆ ಒಪ್ಪಿಕೊಂಡು ಆ ಗೋವರ್ಧನ ಪರ್ವತಕ್ಕೆ ಹಬ್ಬ ಮಾಡಿದುದರಿಂದ ದೇವೇಂ ದ್ರನು ಬಹಳವಾಗಿ ಕೋಪಿಸಿಕೊಂಡು ಗೊಲ್ಲರ ಹಳ್ಳಿಗಳೆಲ್ಲಾ ತೇಲಿಹೋಗುವ ಹಾಗೆ ವಿಪರೀತವಾದ ಮಳೆಯನ್ನು ಕರೆಯುವುದಕ್ಕೆ ಆರಂಭಿಸಿದನು. ಆಗ ಕೃಷ್ಣನು ಗೋವ ರ್ಧನಗಿರಿಯನ್ನು ಮೇಲೆತ್ತಿ ಕೊಡೆಯಂತೆ ಹಿಡಿದು ಸ್ವಲ್ಪವೂ ಅಪಾಯವಿಲ್ಲದಂತೆ ಗೋವುಗಳನ್ನೂ ಗೊಲ್ಲರನ್ನೂ ಕಾಪಾಡಿದನು. ಅನಂತರದಲ್ಲಿ ಮಧುರಾನಗರದಲ್ಲಿ ರಾಜ್ಯಭಾರಮಾಡುತ್ತಿದ್ದ ಕಂಸಾಸುರನು ನಾರದಮಹಾಮುನಿಯ ಮುಖವಚನದಿಂದ ತನ್ನನ್ನು ಕೊಲ್ಲುವ ದೇವಕಿಯ ಎಂಟ ನೆಯ ಮಗನಾದ ಕೃಷ್ಣನು ಗೋಕುಲದಲ್ಲಿ ಬೆಳೆಯುತ್ತಿರುವುದಾಗಿಯೂ ತಾನು ಕಳು ಹಿಸಿದ್ದ ಪೂತನಿಯೇ ಮೊದಲಾದ ರಾಕ್ಷಸರನ್ನು ಆತನೇ ಕೊಂದುಹಾಕಿದನೆಂಬುದಾ ಗಿಯ ಕೇಳಿ ಬಹಳ ಚಿಂತಾಕ್ರಾಂತನಾಗಿ-ಹಗೆಯನ್ನು ಹೆಚ್ಚಾಗಿ ಬೆಳಿಸಬಾರದು, ಬಾಲ್ಯದಲ್ಲಿಯೇ ಕೊಂದು ಹಾಕಬೇಕೆಂದೆಣಿಸಿ ಅಕ್ರೂರನೆಂಬ ದೈತ್ಯನನ್ನು ಬೃಂದಾವ ನಕ್ಕೆ ಕಳುಹಿಸಿ ರಾಮಕೃಷ್ಣರನ್ನು ಮಧುರಾಪುರಕ್ಕೆ ಕರಿಸಿಕೊಂಡು ಕುವಲಯ್ತಾಪೀ ಡವೆಂಬ ಮಹಾಗಜವನ್ನೂ ಮುಪ್ಪಿ ಕಚಾಣರರೆಂಬ ಜಟ್ಟಿಗಳನ್ನೂ ಕರೆದು ಅವರನ್ನು ಕೊಂದುಹಾಕುವ ಹಾಗೆ ಹೇಳಿ ಕಳುಹಿಸಿಲು ; ಆಗ ರಾಮಕೃಷ್ಣರಿಬ್ಬರೂ ಮಲ್ಲ ಯುದ್ಧಕ್ಕೆ ತೊಡಗಿ ಆ ಆನೆಯನ್ನೂ ಇಬ್ಬರು ಜಟ್ಟಿ ಗಳನ್ನೂ ಕೊಂದುಹಾಕಿದರು.
ಪುಟ:ಕಥಾ ಸಂಗ್ರಹ - ಭಾಗ ೨.djvu/೨೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.