ರಾವಣನ ದಿಗ್ವಿಜಯವು 19 ಕೋಣನಿಗೆ ಹೊಡೆದು ಕೂಡಲೆ ಕುಪ್ಪಳಿಸಿ ಮುಂದೆ ಬಂದು ಕೋದಂಡದಿಂದಪ್ಪಳಿಸಿ ಹತ್ತು ತೋಳ ಳನ್ನೂ ಮೇಲೆತ್ತಿ ದೀವಟಿಗೆಗಳಂತಿರುವ ಕಣ್ಣುಗಳನ್ನು ತಿರುಗಿಸುತ್ತ ಗಿರಿಗುಹೆಗಳಂತಿರುವ ಹತ್ತು ಬಾಯಿಗಳನ್ನೂ ತೆರೆದುಬ್ಬಿಯಬ್ಬರಿಸಿದನು. ಕಲ್ಪಾಂತ ಘನಗರ್ಜಿತದ ಒಡನಾಡಿಯಂತಿರುವ ಅತ್ಯುಗ್ರಾರ್ಭಟಧ್ವನಿಯನ್ನು ಕೇಳಿದ ಕೋಣವು ದ್ವಿಗುಣಿತವಾದ ಭಯಭ್ರಾಂತಿಯಿಂದ ಕಂಗೆಟ್ಟು ಹಾರಿಯಾಡುತ್ತಿರಲು ; ನಿಲ್ಲಿಸಲೆತ್ನಿ ಸುತ್ತಿರುವ ಪ್ರೇತನಾಯಕನನ್ನು ಗಣಿಸದೆ ಹೊರಟು ಹರಿದಾರಿಯ ದೂರದಲ್ಲಿ ನೆಗೆದು ಅವನನ್ನು ನೆಲಕ್ಕೊಗೆದು ಓಡಿಹೋಯಿತು. ಆಗ ರಾಕ್ಷ ಸರ ಗುಂಪಿನಲ್ಲಿ ಅಪಹಾಸ್ಯ ಚರವಾದ ಅಟ್ಟಹಾಸವುಂಟಾಯಿತು. ಏನು ಹೇಳುವುದು ? ಯಮನ ವಿಪತ್ತನ್ನು ನೋಡಿ ಯಮಭಟರೆಲ್ಲರೂ ಬೆಪ್ಪಾಗಿ ನಿಂತರು. ಆ ಮೇಲೆ ಯಮನೆದ್ದು ಬಂದು ನಿಲ್ಲಲು ; ಕಾಲಮೃತ್ಯುವು ಅವನನ್ನು ನೋಡಿ-ಎಲೈ ಮಹಾನುಭಾವನೇ, ಶೀಘ್ರ ವಾಗಿ ನನಗಪ್ಪಣೆಯನ್ನು ಕೊಡು, ಇವನಿಗಿಂತಲೂ ಅತಿ ಬಲರನ್ನಾದರೂ ಸ್ವಾಧೀನ ಪಡಿಸಿಕೊಳ್ಳುವಂಥ ನನಗೆ ಈ ಖಳನಾದ ದಶಕಂಠನೆಷ್ಟುಮಾತ್ರದವನು ಎಂದು ಹೇಳಲು ; ಯಮನು-ಎಲೆ ಮೃತ್ಯುವೇ, ಒಂದು ನಿಮೇಷಮಾತ್ರ ಸಹಿಸಿ ನೋಡು ಎಂದು ಹೇಳಿ ಘೋರಾಕಾರವನ್ನು ಧರಿಸಿ ಈ ಖಳನನ್ನು ಸದೆಯುವೆನೆಂದು ಭಯಂ ಕರವಾದ ಕಾಲದಂಡವನ್ನು ತೆಗೆದುಕೊಳ್ಳಲು ; ಆಗ ಸ್ವರ್ಗವೇ ಮೊದಲಾದ ಸಮಸ್ತ ಲೋಕಗಳೂ ಭಯ ಕಂಪಿತಗಳಾದುವು. ಆಗ ಇಂದ್ರಾದಿದೇವತೆಗಳೆಲ್ಲಾ ಹಾಹಾಕಾರ ವನ್ನು ಮಾಡುತ್ತ ಬೊಮ್ಮನ ಬಳಿಗೋಡಿಬಂದು ಕೈಮುಗಿದು-ಅಕಾಲದಲ್ಲಿ. ಮಹಾ ಪ್ರಳಯವುಂಟಾಗುವುದೆಂದು ಮೊರೆಯಿಡಲು ; ಪದ್ಮಜನು ತ್ವರಿತದಿಂದ ಯಮಲೋಕಕ್ಕೆ ತಂದು ಎಲ್ಲರಿಗೂ ಅದೃಶ್ಯನಾಗಿ ಅಂತಕನಿಗೆ ಮಾತ್ರ ದೃಶ್ಯ ನಾಗಿ-ಎಲೈ ವೈವಸ್ವತನೆ, ಈಗ ಕಾಲದಂಡವನ್ನು ಕೈಕೊಳ್ಳಬೇಡ, ಯಾಕೆಂದರೆ ಈ ಕಾಲದಂಡವನ್ನು ಯಾರ ಮೇಲೆ ಪ್ರಯೋಗಿಸಿದರೂ ಅವರು ಸಾಯಲೇಬೇಕೆಂದು ನಾನು ಮೊದಲೇ ವರವನ್ನು ಕೊಟ್ಟಿದ್ದೇನೆ. ಈ ರಾವಣನಿಗೆ ಮನುಷ್ಯರೂ ತಿರ್ಯ ಗ್ರ೦ತುಗಳೂ ಹೊರತಾಗಿ ಉಳಿದ ದೇವತೆಗಳೇ ಮೊದಲಾದ ಯಾರಿಂದಲೂ ಮರಣ ವುಂಟಾಗಬಾರದೆಂದೂ ನಾನೇ ವರವನ್ನು ಕೊಟ್ಟಿದ್ದೇನೆ, ಆದುದರಿಂದ ಈ ಕಾಲ ದಂಡವು ರಾವಣನನ್ನು ಕೊಲ್ಲದಿದ್ದರೂ ಇದರಿಂದ ರಾವಣನು ಮೃತನಾದರೂ ನನ್ನ ಮಾತು ಹುಸಿಯಾಗುವುದು. ಹಾಗೆ ನನ್ನ ಮಾತು ಅನೃತವಾದರೆ ಸಕಲಲೋಕಗಳೂ ವಿನಾಶವಾಗಿ ಹೋಗುವುವು. ಅದು ಕಾರಣ ನೀನು ಈಗ ಯುದ್ಧಾ೦ಗಣದಿಂದ ಮರೆಯಾಗಿ ಹೋಗೆಂದು ಹೇಳಿ ತನ್ನ ಲೋಕವನ್ನು ಕುರಿತು ತೆರಳಲು ;* ಆ ಮೇಲೆ ಯಮನು ಬ್ರಹ್ಮದೇವನ ಮಾತಿನಂತೆ ಅದೃಶ್ಯನಾಗಿ ಹೋಗಲು ; ಆಗ ರಾವಣನು ಯಮನೂ ನನಗೆ ಹೆದರಿ ಯುದ್ಧಭೂಮಿಯಿಂದ ತಪ್ಪಿಸಿಕೊಂಡು ಓಡಿಹೋದನೆಂದು ತಿಳಿದುಕೊಂಡು ಸಂತೋಷಿಸಿ ಜಯಭೇರಿಯನ್ನು ಹೊಡಿಸುತ್ತ ಸಮಸ್ತ ಸೇನಾಪರಿ ವೃತನಾಗಿ ಅಲ್ಲಿಂದ ಹೊರಟು ರಸಾತಲಕ್ಕೆ ಬಂದು ಅಲ್ಲಿ ನಿವಾತಕವಚರೆಂಬ ದೈತ್ಯ ರೊಡನೆ ಜಗಳಕ್ಕೆ ತೊಡಗಿ ಒಂದು ಸಂವತ್ಸರಾಂತದ ವರೆಗೂ ಕಾದಾಡಿದಾಗೂ
ಪುಟ:ಕಥಾ ಸಂಗ್ರಹ - ಭಾಗ ೨.djvu/೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.