22 ಕಥಾಸಂಗ್ರಹ-೪ ನೆಯ ಭಾಗ ರ್ಯವು ? ನೀನೂ ಮೇಘನಾದನೂ ಕುಂಭಕರ್ಣನೂ ಏನು ಮಾಡುತ್ತಿದ್ದೀರಿ ? ಎಲ್ಲಿ ದ್ವಿರಿ ? ಎಂದು ಕೇಳಲು ; ವಿಭೀಷಣನು-ನಾನು ಆಘಮರ್ಷಣಮಂತ್ರವನ್ನು ಜಪಿ ಸುತ್ತ ನೀರಿನಲ್ಲಿ ಮುಳುಗಿದ್ದೆನು, ಮೇಘನಾದನು ನಿಕುಂಭಿಳೆಯಲ್ಲಿ ಯಾಗಮಾಡು ತಿದ್ದನು: ಕುಂಭಕರ್ಣನು ನಿದ್ರಿಸುತ್ತಿದ್ದನು, ಮಿಕ್ಕ ರಾಕ್ಷಸಕುಮಾರರು ಏನು ಮಾಡಬಲ್ಲರು ? ಎಂದು ಹೇಳಿದನು. ಆಗ ರಾವಣನು ಆ ಮಾತನ್ನು ಕೇಳಿದ ಮಾತ್ರದಿಂದಲೇ ಕೋಧಕಂಪಿತಶ ರೀರನಾಗಿ ಇಪ್ಪತ್ತು ಕಣ್ಣಳಿಂದಲೂ ರಕ್ತಿಮೆಯನ್ನು ಗುಳತ್ತ ಕೂಡಲೆ ಲಂಕಾನಗರದ ಸಂರಕ್ಷಣೆಗಾಗಿ ಕೆಲವು ಜನ ರಾಕ್ಷಸ ಸೇನಾಪತಿಗಳೊಡನೆ ವಿಭೀಷಣನನ್ನು ನೇಮಿಸಿ-- ಮಧುದೈತ್ಯನನ್ನು ಮೊದಲು ಯಮಪುರಕ್ಕೆ ಕಳುಹಿಸಿ ಅಲ್ಲಿಂದ ಅಮರಾವತಿಗೆ ಹೋಗಿ ಇಂದ್ರನ ಗರ್ವವನ್ನು ಮುರಿದು ದೇವತೆಗಳನ್ನು ಹಿಂಡುವೆನು, ಜಗಳದಲ್ಲಿ ನನಗೆ ಯಾರಿದಿರು ? ಎಂದು ಔಡುಗಳನ್ನು ಕಚ್ಚು ತ್ಯ ಹಲ್ಲ ಡಿದು ಮೊರೆದು ಗರ್ಜಿಸುತ್ತ ಅನೇಕ ಸೇನಾಜಾಲದೊಡನೆ ಕೂಡಿ ಹೊರಡಲು ; ಆಗ ಜೈತ್ರಯಾತ್ರಾಸೂಚಕವಾದ ಭೇರೀಧ್ವನಿಯು ನರನಾಗಾಮರಲೋಕಗಳನ್ನು ಬೆದರಿಸಿತು, ಕೂಡಲೆ ಕುಂಭಕರ್ಣ ಮೇಘನಾದಾದಿ ಸಮಸ್ತ ರಾಕ್ಷಸವೀರರೂ ಹೊರಟರು. ಆ ಮಹದಾಶ್ಚರ್ಯವನ್ನು ಬಣ್ಣಿಪರಾರು ? ಆನೆ ಕುದುರೆ ತೇರು ಕೋಣ ಗೂಳಿ ಸಿಂಹ ಶರಭ ಹುಲಿ ಹಂದಿ ಹೇಸರಗತ್ತೆ ಇವೇ ಮೊದಲಾದ ತಮ್ಮ ತಮ್ಮ ವಾಹನಗಳನ್ನೇರಿ ವಿವಿಧಾಯುಧಗ ಳನ್ನು ಧರಿಸಿ ಕಾಲಭೈರವನ ದಂಡೋ ? ಮೃತ್ಯುವಿನ ಬಳಗವೋ ? ಭೂತರಾಜನ ಪಡೆಯೋ ? ಎಂಬಂತೆ ಸಮಸ್ಯೆ ಪ್ರಾಣಿಗಳಲ್ಲೂ ಭೀತಿಯ ಬೀಜವನ್ನು ಬಿತ್ತುತ್ಯ ದಶ ಮುಖನ ಸೇನೆಯು ಹೊರಟಿತು. ಆಗ ಸೇನಾಗ್ರದಲ್ಲಿ ಮೇಘನಾದನೂ ಹಿಂಗಡೆ ಯಲ್ಲಿ ಕುಂಭಕರ್ಣನೂ ಮಧ್ಯದಲ್ಲಿ ರಾವಣನೂ ಬರುತ್ತಿದ್ದರು. ಈ ರೀತಿಯಾದ ಸಮರಸನ್ನಾ ಹದಿಂದ ಕೂಡಿದ ರಾಕ್ಷಸಬಲವು ವಿಲಯ ಕಾಲದಲ್ಲಿ ಮೇರೆದಪ್ಪಿ ಬಂದ ಮಹಾಸಾಗರವು ಬ್ರಹ್ಮಾಂಡಮಂಡಲವನ್ನು ವ್ಯಾಪಿಸುವಂತೆ ಮಧುದನು ಜನಪರ ವನ್ನು ಮುತ್ತಿತು, ಅಲ್ಲಿಗೊಡೆಯನಾದ ಮಧುರೈತ್ಯನು ಪೂರ್ವದಲ್ಲಿ ಸದ್ಭಕ್ತಿಯಿಂದ ಶಿವನನ್ನು ಮೆಚ್ಚಿಸಿ ಒಂದು ತ್ರಿಶೂಲಾಯುಧವನ್ನು ಪಡೆದಿರುವನು. ಅದನ್ನು ಕೈಯಲ್ಲಿ ಹಿಡಿದು ಕೊಂಡು ಕಾಳಗಕ್ಕೆ ಹೊರಟರೆ ಹರನೊಬ್ಬನು ಹೊರತು ಮತ್ತಾರೂ ಎದುರಿಗೆ ನಿಂತು ತರಹರಿಸಲಾರರು. ಮಧುದೈತ್ಯನು ತನಗೆ ಇಂಥ ಉತ್ಕೃಷ್ಟಾಯುಧವಿದೆ ಯೆಂಬ ಗರ್ವದಿಂದ ರಾವಣನ ಸೈನ್ಯವನ್ನು ಲಕ್ಷಕ್ಕೆ ತಾರದೆ ಧೈರ್ಯದಿಂದಿದ್ದನು. ಅಷ್ಟರಲ್ಲಿ ರಾವಣನ ಚಿಕ್ಕಮ್ಮನಾದ ಕುಂಭೀನಸಿಯು ಶೀಘ್ರವಾಗಿ ಸೇನಾಮಧ್ಯದ ಲ್ಲಿರುವ ರಾವಣನ ಬಳಿಗೆ ಬಂದು ನಿಂತು ಅವನನ್ನು ಕುರಿತು-ಎಲೈ ಕುಮಾರನಾದ ದಶಕಂಧರನೇ, ಕೇಳು. ನನ್ನಲ್ಲಿ ಕನಿಕರವನ್ನಿಡು. ಕುಲಸ್ತ್ರೀಯರಿಗೆ ವೈಧವ್ಯಕ್ಕಿಂತ ಲೂ ಅತಿಶಯವಾದ ದುಃಖವು ಮತ್ತೊಂದಿಲ್ಲ, ನನ್ನ ಮೇಲೆ ದೃಷ್ಟಿಯಿಟ್ಟು ನನ್ನ ಪತಿಯಾದ ಮಧುದನುಜನನ್ನು ಕಾಪಾಡು, ನನ್ನ ಮಾತನ್ನು ಮಾರದೆ ನಡಿಸೆಂದು ಬಹುವಿಧವಾಗಿ ಬೇಡಿಕೊಳ್ಳಲು ; ಆಗ ರಾವಣನು- ನಿನ್ನ ಗಂಡನನ್ನು ಕರೆ ! ಭಯ
ಪುಟ:ಕಥಾ ಸಂಗ್ರಹ - ಭಾಗ ೨.djvu/೩೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.