ರಾವಣನ ದಿಗ್ವಿಜಯವು ರಾವಣನು ಗದೆಯನ್ನು ತೆಗೆದುಕೊಂಡು ಬೀಸಿ ತನ್ನನ್ನು ಹೊಡೆಯುವುದಕ್ಕಾಗಿ ಬರುವುದನ್ನು ಶಚೀಪತಿಯು ತಿಳಿದು ತನ್ನ ವಜ್ರಾಯುಧವನ್ನು ಎತ್ತಿ ಅಪ್ಪಳಿಸಲು ; ರಾವಣನು ಕೆಳಗೆ ಬಿದ್ದು ಮೂರ್ಛಾಗತನಾಗಿ ಚೇತರಿಸಿಕೊಳ್ಳದೆ ಇದ್ದನು. ಆಗ ರಾವಣಿಯು ಈಶ್ವರದತ್ತವಾದ ತಾಮಸೀ ಎಂಬ ಮಾಯೆಯನ್ನು ಆಶ್ರ ಯಿಸಿ ಇಂದ್ರನ ಕಣ್ಣಿಗೆ ಕಾಣಿಸಿಕೊಳ್ಳದೆ ಅಪರಿಮಿತವಾದ ಮಹಾಸ್ತ್ರಗಳನ್ನು ಸುರಿ ಸುತ್ತಿರಲು ; ಇಂದ್ರನು ವಿರೋಧಿಯನ್ನು ಕಾಣದೆ ಮಹಾಸ್ತ್ರಗಳ ಪೆಟ್ಟನ್ನು ಸಹಿ ಲಾರದೆ ಹಿಂದು ಮುಂದು ತೋರದೆ ಕಂಗೆಟ್ಟಿರುವುದನ್ನು ನೋಡಿ ರಾವಣಿಯು ಶೀಘ್ರವಾಗಿ ಬಂದು ಸುರರಾಜನ ಮೇಲೆ ಬಿದ್ದು ತನ್ನ ಬಾಹುಗಳಿಂದ ಬಿಗಿದು ಕಟ್ಟಿ ಎತ್ತಿ ತನ್ನ ರಥದ ಮೇಲೆ ಹಾಕಿಕೊಂಡು ಜಯಭೇರಿಯನ್ನು ಹೊಡಿಸುತ್ತ ಬರುತ್ತಿ ರಲು ; ಮೂರ್ಛಿತನಾಗಿದ್ದ ರಾವಣನು ಅಷ್ಟರಲ್ಲಿ ಬ್ರಹ್ಮ ವರಪ್ರಭಾವದಿಂದ ಚೇತರಿಸಿ ಕೋಂಡು ಪುನಃ ಇಂದ್ರನೊಡನೆ ಯುದ್ಧ ಮಾಡಬೇಕೆಂದು ಹೊರಟುಬರುತ್ತ ಇಂದ್ರ ನನ್ನು ಜಯಿಸಿ ಹಿಡಿದು ಕೊಂಡು ಬರುತ್ತಿರುವ ಮಗನನ್ನು ಕಂಡು ಸಂತೋಷಸಮು ದ್ರದಲ್ಲಿ ಮುಳುಗಿ ಅವನನ್ನು ಬಾಚಿ ತಬ್ಬಿ ಮುದ್ದಿಸಿ ಆ ಮೇಲೆ ಇಂದ್ರಲೋಕವನ್ನು ಸೂರೆಮಾಡಿ ಕೊಂಡು ಸಕಲರಾಕ್ಷಸಸೇನಾಸಮೇತನಾಗಿ ಲಂಕಾಪಟ್ಟಣಕ್ಕೆ ಒಂದು ಇ೦ದ್ರನನ್ನು ಕಾರಾಗೃಹದಲ್ಲಿಡಿಸಿ ತಾನು ಸುಖದಿಂದಿರುತ್ತಿದ್ದನು. - ಅನಂತರದಲ್ಲಿ ಚತುರ್ಮುಖ ಬ್ರಹ್ಮನು ಈ ವರ್ತಮಾನವನ್ನು ಕೇಳಿ ಲಂಕಾ ಪಟ್ಟಣಕ್ಕೆ ಬಂದು-ಎಲೈ ಮಗನಾದ ದಶಕಂಧರನೇ, ನೀನು ಮರು ಲೋಕಗ ಇನ್ನೂ ಗೆದ್ದವನಾದುದರಿಂದ ಲೋಕೈಕವೀರನೆಂದು ಪ್ರಖ್ಯಾತಿಯನ್ನು ಹೊಂದಿದವ ನಾದೆ, ನಿನ್ನ ಮಗನು ಶೌರ್ಯದಲ್ಲಿ ನಿನಗಿಂತಲೂ ಹೆಚ್ಚಿದವನು. ನಾನು ಅವನ ಪರಾಕ್ರಮವನ್ನು ಮೆಚ್ಚಿ ದೆನು. ಇಂದು ಮೊದಲು ಲೋಕದಲ್ಲಿ ಮೇಘನಾದನಿಗೆ ಇಂದ್ರಜಿತ್ತೆಂದು ಹೆಸರು ಪ್ರಖ್ಯಾತಿಯಾಗಲಿ, ಈ ದೇವೇಂದ್ರನು ನನ್ನ ಅಪ್ಪಣೆಯಿಂದ ದೇವಲೋಕವನ್ನು ಸಲಹುತ್ತಿರುವನು. ಇಷ್ಟು ಜಯಿಸಿದುದೇ ಸಾಕು, ಇನ್ನು ಮೇಲೆ ಆತನನ್ನು ಬಿಟ್ಟು ಬಿಡು, ನನ್ನ ಮಾತನ್ನು ನಡಿಸು ಎನಲು ; ಆಗ ಇಂದ್ರಜಿತ್ತು ಒಹ್ಮನಿಗೆ ನಮಸ್ಕರಿಸಿ-ಎಲೈ ಪಿತಾಮಹನೇ, ನಿಮ್ಮ ಪ್ಪಣೆಯಂತೆ ದೇವೇಂದ್ರನನ್ನು ಬಿಟ್ಟು ನಿಮ್ಮ ಮಾತನ್ನು ನಡಿಸುವೆನು. ಇ೦ದ್ರನನ್ನು ಜಯಿಸಿದುದರಿಂದ ನನಗೆ ಇಂದ್ರ ಚಿತ್ತೆಂಬ ಹೆಸರುಂಟಾಯಿತು, ಸರಿ, ನೀನು ನನ್ನಲ್ಲಿ ಪ್ರೀತಿ ಮಾಡಿದರೆ ನನಗೆ ಅಮರತ್ವವನ್ನು ಕೊಡು ಎಂದು ಕೇಳಿಕೊಳ್ಳಲು ; ಆಗ ಬ್ರಹ್ಮನು ಲೋಕದಲ್ಲಿ ಚರಾಚರಗಳಿಗೆಲ್ಲಾ ಅಮರತ್ವದ ಬಳಕೆಯಿಲ್ಲ, ಸುರ ನರೋರಗ ದೈತ್ಯ ಇವರೇ ಮೊದಲಾದವರಿಗೂ ಕೂಡ ಸಾವು ತಪ್ಪದು. ಅದು ಕಾರಣ ಇದನ್ನು ಬಿಟ್ಟು ಸುಲಭ ವಾದ ವರಗಳನ್ನು ಬೇಡಿಕೊ ಕೊಡುವೆನೆಂದನು. ಆಗ ಇಂದ್ರಜಿತ್ತು-ಎಲೆ ಪಿತಾಮಹನೇ, ನಾನು ಕಾಳಗಕ್ಕೆ ಹೊರಡುವ ಸಮಯದಲ್ಲಿ ಅಗ್ನಿಯನ್ನು ಆರಾಧಿ ಸುವೆನು, ಆ ಅಗ್ನಿ ಕುಂಡದಿಂದ ಒಂದು ಅಪ್ರತಿಹತವಾದ ರಥವು ಉಂಟಾಗಲಿ. ಆ ರಥದ ಮೇಲೆ ಕುಳಿತುಕೊಂಡು ಜಗಳವಾಡುವ ಕಾಲದಲ್ಲಿ ನಾನು ಯಾರಿಂದಲೂ
ಪುಟ:ಕಥಾ ಸಂಗ್ರಹ - ಭಾಗ ೨.djvu/೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.