ಶ್ರೀರಾಮನ ಜನನ ವಿವಾಹ ವನವಾಸ ಇವುಗಳ ಕಕ್ರ 41 ನೀನು ದಶರಥಭೂಪಾಲನ ಬಳಿಗೆ ಹೋಗಿ ಪವಿತ್ರವಾದ ಗಂಗಾದಿಸಕಲನದೀಜಲಗ ೪೦ದಲೂ ಚತುಸ್ಸಮುದ್ರೋದಕಗಳಿಂದಲೂ ತುಂಬಲ್ಪಟ್ಟಿರುವ ಸುವರ್ಣಕಲಶಗಳೂ ಅತ್ತಿಯ ಮರದಿಂದ ಮಾಡಲ್ಪಟ್ಟಿರುವ ಭದ್ರ ಪೀಠವೂ ಸಕಲ ವಿಧಧಾನ್ಯಗಳೂ ನವರ ತೃಗಳೂ ನಾನಾ ವಿಧವಾದ ಔಷಧೀರಸಗಳೂ ಕ್ಷೀರ ದಧಿ ಮೃತ ಮಧು ಲಾಜಾ ದರ್ಭಾದಿಗಳೂ ಸೌಂದರ್ಯವತಿಯರಾದ ಎಂಟು ಮಂದಿ ಕನ್ನಿಕೆಯರೂ ಮದದಾ ನೆಯ ನಾಲ್ಕು ಕುದುರೆಗಳಿಂದ ಕೂಡಿ ಸಿದ್ಧವಾಗಿರುವ ದಿವ್ಯ ರಥವೂ ಹೊಸದಾಗಿ ಸಾಣೆಮಾಡಿದ ಖಡ್ಡವೂ ಧನುರ್ಬಾಣಗಳೂ ಪೂರ್ಣಿಮಾಚಂದ್ರನನ್ನು ಹೋಲುವ ಬೆಳುಗೊಡೆಯ ಸುವರ್ಣದ ಗಿಂಡಿಗಳೂ ಚಿನ್ನದ ಸರಪಣಿಯಿಂದ ಕಟ್ಟಲ್ಪಟ್ಟುದೂ ತೋರವಾದ ಹಿಳಿಲಿನಿಂದ ಒಪ್ಪುತ್ತಿರುವುದೂ ಆದ ಬಿಳಿಯ ಗೂಳಿಯ ನಾಲ್ಕು ಕೋರೆದಾಡೆಗಳುಳ್ಳ ಸಿಂಹವೂ ಮಂಗಳಕರವಾದ ಸಿಂಹಾಸನವೂ ಸಂಪೂರ್ಣವಾದ ಶಾರ್ದೂಲಚರ್ಮವೂ ಮುತ್ತುಗದ ಸಮಿತ್ತುಗಳೂ ಬನ್ನಿ ಯ ಮರವನ್ನು ಕಡಿದು ಉಂಟುಮಾಡಿದ ಬೆಂಕಿಯ ಭೇರೀಮೃದಂಗಾದಿ ವಿವಿಧ ವಾದ್ಯಗಳೂ ಕಮನೀಯ ವಸ್ತ್ರಾಭರಣಾಲಂಕೃತರಾದ ವೇಶ್ಯಾಸ್ತ್ರೀಯರೂ ಪೂಜ್ಯರಾದ ಗುರುಗಳೂ ಕ್ಷೇಮ ದಾಯಕವಾದ ಆಕಳುಗಳೂ ಶ್ರೇಷ್ಠ ವಾದ ಮೃಗಪಕ್ಷಿಗಳೂ ಇವೇ ಮೊದಲಾದುವು ಗಳನ್ನೆಲ್ಲಾ ಸಿದ್ದ ಮಾಡಿಕೊಂಡು ನಾವು ಬಂದಿರುವುದಾಗಿಯ ದೋಷರಹಿತವಾದ ತಿಥಿ ವಾರ ನಕ್ಷತ್ರ ಯೋಗ ಕರಣಗಳಿಂದ ಕೂಡಿದ ಶುಭಲಗ್ನದಲ್ಲಿ ಲೋಕಾಭಿ ರಾಮನಾದ ಶ್ರೀರಾಮನಿಗೆ ಪಟ್ಟಾಭಿಷೇಕವನ್ನು ಮಾಡುವುದಕ್ಕಾಗಿ ತ್ವರೆಪಡಿಸೆಂದು ಕೇಳಿದರೆಂಬುದಾಗಿಯೂ ತಿಳಿಸೆಂದನು. ಸುಮಂತ್ರನು ಆ ಮಾತುಗಳನ್ನು ಕೇಳಿ, ಅಂತಃಪುರವನ್ನು ಪ್ರವೇಶಿಸಿ ರಾಜನ ಶಯ್ಯಾಗೃಹದ ಬಾಗಿಲಲ್ಲಿ ಕೈಮುಗಿದು ನಿಂತು-ಎಲೈ ಮಹಾರಾಜನೇ, ಸಕಲ ಲೋಕಗಳನ್ನೂ ಆಹ್ಲಾದಪಡಿಸುತ್ತ ಸೂರ್ಯನು ಹೇಗೆ ಉದಯಿಸುತ್ತಿರುವನೋ ಹಾಗೆಯೇ ನೀನು ಶಯ್ಯಾ ತಲದಿಂದೆದ್ದು ನಮ್ಮೆಲ್ಲರನ್ನೂ ಸಂತೋಷಪಡಿಸು, ಮಾತಲಿ ಯೆಂಬ ಸಾರಥಿಯು ದೇವೇಂದ್ರನನ್ನು ಎಬ್ಬಿಸುವಂತೆಯ ಉದಯಾದಿತ್ಯನು ಸಮಸ್ತ ಪಾಣಿಗಳನೂ ಎಬಿಸುವಂತೆಯೂ ಅಪರರಾತ್ರಿಯಲ್ಲಿ ಶಿಷರ ವೇದಾಧ್ಯಯನಘೋ ಷವು ಗುರುಗಳನ್ನು ಎಬ್ಬಿಸುವಂತೆಯ ಈ ವೇಳೆಯಲ್ಲಿ ನಾನು ನಿನ್ನನ್ನು ಎಬ್ಬಿಸುತ್ತಿ ರುವೆನು. ಎಲೈ ಮಹಾರಾಜನೇ, ನಮ್ಮೆಲ್ಲರ ಭಾಗ್ಯದೇವತೆಯು ಉದಯಿಸುವಂತೆ ಹಾಸಿಗೆಯ ದೆಸೆಯಿಂದ ಶೀಘ್ರವಾಗಿ ಏಳುವವನಾಗು, ಚಂದ್ರಸೂರ್ಯರೂ ವರುಣ ವೈಶ್ರವಣರೂ ಇಂದ್ರಾಗ್ನಿಗಳ ನಿನಗೆ ಮಂಗಳವನ್ನುಂಟುಮಾಡಲಿ, ರಾತ್ರಿಯು ಕಳೆದುಹೋಯಿತು. ಮಂಗಳಕರವಾದ ಪ್ರಾತಃಕಾಲವುಂಟಾಯಿತು. ರಾಮನ ಪಟ್ಟಾಭಿಷೇಕಕ್ಕೆ ಬೇಕಾದ ಸಕಲಸಾಮಗ್ರಿಗಳನ್ನೂ ಸಿದ್ಧ ಮಾಡಿಕೊಂಡು ಪುರೋಹಿತ ರಾದ ವಶಿಷ್ಠ ರು ಬಂದು ಕಾದಿದ್ದಾರೆ, ನೀನು ಶೀಘ್ರವಾಗಿ ಬಂದು ರಾಮನ ಪಟ್ಟಾಭಿಷೇಕಕಾರ್ಯವನ್ನು ನೆರವೇರಿಸುವವನಾಗು, ಸೇನಾಪತಿಗಳಿಂದೊಡಗೂಡಿದ ಸೇನೆಯಂತೆಯ ಚಂದ್ರನಿಂದೊಡಗೂಡಿದ ರಾತ್ರಿಯಂತೆಯ ಪ್ರಭುಸಹಿತವಾದ
ಪುಟ:ಕಥಾ ಸಂಗ್ರಹ - ಭಾಗ ೨.djvu/೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.