ಕಥಾಸಂಗ್ರಹ-೪ ವಿಯ ಭಾಗ ನಲ್ಲಿಯಾದರೂ ಮುಳುಗುವೆನು. ಅಲ್ಲದೆ ನಾನು ಆ ವಿಷಯದಲ್ಲಿ ಬದಲುಮಾತಾಡು ವವನಲ್ಲ, ಬೇಗ ನನ್ನ ತಂದೆಯ ಮನೋಭಿಪ್ರಾಯವನ್ನು ತಿಳಿಸು, ಸತ್ಯವಾಗಿ ನೆರವೇರಿಸುವೆನೆನಲು; ಆಗ ದಯಾಶೂನ್ಯಳಾದ ಕೈಕೇಯಿಯು ರಾಮನನ್ನು ಕುರಿತು ಮೊದಲು ಪ್ರಾಪ್ತವಾಗಿದ್ದ ದೇವಾಸುರಯುದ್ಧದಲ್ಲಿ ನಿಮ್ಮ ತಂದೆಗೆ ಸಂಭವಿಸಿದ್ದ ಕಷ್ಟವನ್ನು ನಾನು ಪರಿಹರಿಸಿದುದರಿಂದ ಆಗ ನನಗೆ ಎರಡು ವರಗಳನ್ನು ಕೊಟ್ಟಿ ದ್ದನು. ಈಗ ನಾನು ಆ ವರಗಳಿಗೆ ಫಲರೂಪವಾಗಿ ಭರತನಿಗೆ ಪಟ್ಟಾಭಿಷೇಕವನ್ನೂ ನೀನು ಜಡೆಯನ್ನೂ ನಾರ್ಮಡಿಯನ್ನೂ ಧರಿಸಿದವನಾಗಿ ಹದಿನಾಲ್ಕು ಸಂವತ್ಸರಗಳ ವರೆಗೂ ದಂಡಕಾರಣ್ಯದಲ್ಲಿ ವಾಸಮಾಡುವುದನ್ನೂ ಕೇಳಿಕೊಂಡೆನು. ಅದು ಕಾರಣ ಆತನು ನಿನಗೋಸ್ಕರ ಭಯಪಟು ಹೀಗೆ ಪರಿತಪಿಸುತ್ತಿರುವನು. ನೀನು ತಂದೆಯನ್ನು ಸತ್ಯಪ್ರತಿಜ್ಞನನ್ನಾಗಿ ಮಾಡುವಂಥ ಸತ್ಪುತ್ರನಾಗಿದ್ದರೆ ಶಪಥಪೂರ್ವಕವಾದ ಆತನ ವಾಗ್ದಾನವನ್ನು ನಡಿಸಿಕೊಡೆಂದು ಹೇಳಿದಳು. ಆಗ ರಾಮನು ಅಂಥ ಕ್ರೂರವಾದ ಮಾತುಗಳನ್ನು ಕೇಳಿದವನಾದಾಗ ಮನಸ್ಸಿನಲ್ಲಿ ಸ್ವಲ್ಪವಾದರೂ ಚಿಂತಿಸಿ ಭಯ ಪಡದೆ ಕೈಕೇಯಿಯನ್ನು ಕುರಿತು--ತಂದೆಯ ಪ್ರತಿಜ್ಞೆಯನ್ನು ನೆರವೇರಿಸುವುದಕ್ಕಾಗಿ ನಾನು ಜಟಾಜಿನಗಳನ್ನು ಧರಿಸಿ ಈಗಲೇ ಅರಣ್ಯಕ್ಕೆ ಹೋಗುವೆನು ಗುರುವಾಗಿಯ ಹಿತನಾಗಿಯ ತಂದೆಯಾಗಿಯ ಅರಸಾಗಿಯೂ ಇರುವವನ ಮಾತುಗಳನ್ನು ಲೋಕದಲ್ಲಿ ಯಾವ ಮಗನಾದರೂ ಕೇಳದೆ ಇರುವನೇ ? ನಾನು ನನ್ನ ತಮ್ಮ ನಾದ ಭರತನಿಗೋಸ್ಕರ ನನ್ನ ರಾಜ್ಯವನ್ನಾದರೂ ಧನವನ್ನಾದರೂ ಕಡೆಗೆ ಪ್ರಾಣಗಳನ್ನಾ ದರೂ ಸಂತೋಷದಿಂದ ಕೊಡುವುದಕ್ಕೆ ಸಿದ್ಧನಾಗಿರುವಲ್ಲಿ ಮಹಾತ್ಮರಾದ ತಾಯಿ ತಂದೆಗಳ ಪ್ರೇರಣೆಯುಂಟಾದರೆ ಕೊಡುವುದೊಂದತಿಶಯವೇನು ? ದೂತರು ಈಗಲೇ ಶೀಘ್ರವಾಗಿ ಕೇಕಯನಗರಕ್ಕೆ ಹೋಗಿ ಭರತನನ್ನು ಕರತರಲಿ, ಸಂತೋಷದಿಂದ ಕೂಡಿ ನನ್ನ ಕೈಯಿಂದಲೇ ಅವನಿಗೆ ಪಟ್ಟಾಭಿಷೇಕವನ್ನು ಮಾಡಿ ಆ ಮೇಲೆ ನಾನು ಉಲ್ಲಾಸದಿಂದ ದಂಡಕಾರಣ್ಯವನ್ನು ಕುರಿತು ಹೋಗುವೆನು ಎನಲು ; ಆಗ ಕೈಕೇ ಯಿಯು ಸಂತುಷ್ಟಾಂತರಂಗಳಾಗಿ--ನಾವು ಭರತನನ್ನು ಕರತರಿಸಿಕೊಂಡು ಆತನಿಗೆ ಪಟ್ಟಾಭಿಷೇಕವನ್ನು ಮಾಡುವೆವು, ಅದರ ಚಿಂತೆಯು ನಿನಗೆ ಬೇಡ. ಈಗ ನೀನು ವಿಳಂಬಮಾಡದೆ ಹೊರಟು ವನಕ್ಕೆ ಹೋದ ಹೊರತು ದೊರೆಯು ಸ್ವಸ್ಥಚಿತ್ತನಾಗುವು ದಿಲ್ಲ ಎನ್ನಲು ; ಆಗ ಈ ಮಾತುಗಳನ್ನು ಕೇಳಿದ ದಶರಥನು ಸಿಡಿಲಪ್ಪಳಿಸಿದ ಕದಳೀ ತರುವಿನಂತೆ ಭೂಮಿಗುರುಳಿ ಮೂರ್ಛಹೊಂದಿದನು. ಆಗ ರಾಮನು ತತ್ಕಾಲೋಚಿತ ವಾದ ಉಪಚಾರಗಳಿಂದ ಉಪಚರಿಸಿ ತಂದೆಯನ್ನು ಅಬ್ದ ಸಂಜ್ಞನನ್ನಾಗಿ ಮಾಡಿ ಆ ಮೇಲೆ ಕೈಕೇಯಿಯ ಮಾತುಗಳಿಂದ ಪ್ರೇರಿಸಲ್ಪಟ್ಟು, ಚಾವಟಿಯಿಂದ ಹೊಡೆಯ ಲ್ಪಟ್ಟ ಕುದುರೆಯಂತೆ ತ್ವರಿತಗತಿಯಿಂದ ಕೂಡಿದವನಾಗಿ ಕೈಕೇಯಿಯನ್ನು ಕುರಿತು --ಎಲೈ ತಾಯೇ, ನಾನು ಕೇವಲ ಧನಲೋಭವುಳ್ಳವನೆಂದು ಯೋಚಿಸಬೇಡ. ನನ್ನನ್ನು ಋಷಿಗಳಿಗೆ ಸಮಾನನಾದ ಧರ್ಮಿಷ್ಠನೆಂದು ತಿಳಿಯುವವಳಾಗು ಎಂದು ತಾಯಿತಂದೆಗಳನ್ನು ಬಲಗೊಂಡು ಭಕ್ತಿಯಿಂದ ವಂದಿಸಿ ಹೊರಗೆ ಬಂದು ಓಲಗದ
ಪುಟ:ಕಥಾ ಸಂಗ್ರಹ - ಭಾಗ ೨.djvu/೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.