62 ಕಥಾಸಂಗ್ರಹ-೪ ನೆಯ ಭಾಗ ತಿರುವರು, ಕಾಡುಗಳಲ್ಲಿ ಆನೆಗಳು ಹಿಮದಿಂದ ಬಲು ತಣ್ಣಾದ ನೀರುಗಳನ್ನು ಕುಡಿ ಯಲ೦ಜೆ ತಮ್ಮ ತಮ್ಮ ಸೊಂಡಿಲುಗಳನ್ನು ಬಾಯಿಯಲ್ಲಿಟ್ಟು ಕೊಂಡು ಬಾಯಾರಿಕೆ ಯಿಂದ ಕಂಗೆಡುತ್ತಿರುವುವು, ಚಿಗುರು ಹೂವುಗಳಿಲ್ಲದಿರುವುದರಿಂದ ವನಪಂಗಿಗಳೆಲ್ಲಾ ಮಲಗಿ ಕಣ್ಮುಚ್ಚಿ ನಿದ್ದೆ ಹೋಗುತ್ತಿವೆಯೋ ಎಂಬ ಹಾಗೆ ಕಾಣುತ್ತಿರುವುವು ಎಂದು ಹೇಳಿದನು. ಆಗ ಶ್ರೀರಾಮನು ತಮ್ಮನ ಮಾತುಗಳನ್ನು ಕೇಳಿ ನಿಶ್ಚಯವೆಂದು ಸಂತೋಪಿಸಿ ತಾನು ಅಂಥ ಹಿಮ ಕಾಲದಲ್ಲೂ ಗೋದಾವರಿಯಲ್ಲಿ ಮಿಂದು ಮಡಿ ಯುಟ್ಟು ನಿತ್ಯ ಕರ್ಮಗಳನ್ನು ನೆರವೇರಿಸುತ್ತ ಮುನಿಗಳಂತೆ ಕೃಷ್ಣಾಜಿನಗಳನ್ನು ಹಾಸಿ ಹೊದೆದು ಕೊಂಡು ಕಂದ ಮಲಾದಿಗಳನ್ನು ತಿಂದು ಜೀವಿಸಿಕೊಂಡು ಕಷ್ಟ ಪಡು ತಿದ್ದನು. ಹೀಗಿರುವಲ್ಲಿ ಮೊದಲು ಲಂಕಾಪಟ್ಟಣದಿಂದ ಬಂದು ಆ ಪಂಚವಟಿಯ ಸವಿಾಪ ದಲ್ಲಿರುವ ಜನಸ್ತಾನದಲ್ಲಿ ತನ್ನ ಅಣ್ಣನಾದ ಐರನೊಡನೆ ವಾಸಮಾಡಿಕೊಂಡಿದ್ದ ರಾವಣನ. ತಂಗಿಯಾದ ಶೂರ್ಪನಖಿಯು ಆಹಾರಾರ್ಥವಾಗಿ ಕಾಡಿನಲ್ಲಿ ಸಂಚರಿಸುತ್ತ ಒಂದಾನೊಂ ದು ದಿನ ಪಂಚವಟಿಗೆ ಬಂದು ಸುಂದರಾಂಗನಾದ ರಾಮನನ್ನು ನೋಡಿ ಮೋಹಿತಳಾಗಿ ಕಾಮರೂಪಿಣಿಯಾದುದರಿಂದ ಕೂಡಲೆ ಚೆಲುವೆಯಾದ ಹೆಣ್ಣಿನ ಆಕಾರದಂತಿರುವ ಆಕಾರವನ್ನು ಧರಿಸಿ ಕಡೆಗಣ್ಣ ನೋಟದಿಂದ ದಿಕ್ಕುಗಳನ್ನು ಬೆಳಗಿಸುತ್ತ ಮದಗಜ ದಂತೆ ಮಂದಗತಿಯಿಂದ ನಡೆಯುತ್ತ ರಾಮನಿರುವ ಪರ್ಣಶಾಲೆಯ ಬಾಗಿಲೆಡೆಗೆ ಬಂದು ನಿಂತು ಮುಗುಳ್ಳ ಗೆಯಿಂದ ಕೂಡಿದವಳಾಗಿ- ಎಲೈ ಸುಂದರಪುರುಷನೇ, ನೀನು ಯಾರು ? ನಿನ್ನ ಬಳಿಯಲ್ಲಿರುವ ಈ ಹೆಂಗಸು ಯಾರು ? ನಿಮ್ಮ ಹೆಸರುಗಳು ಯಾವುವು ? ಎಂದು ಕೇಳಲು ; ರಾಮನು--ನಾನು ಲೋಕಪ್ರಸಿದ್ದ ವಾದ ಸೂರ್ಯ ವಂಶದಲ್ಲಿ ಹುಟ್ಟಿದವನೂ ಸತ್ಯ ಪ್ರತಿಜ್ಞನೂ ಆದ ದಶರಥಭೂಪಾಲನ ಕುಮಾರನು. ನನ್ನನ್ನು ರಾಮನೆಂದು ಕರೆಯುವರು. ತಂದೆಯ ಆಜ್ಞಾನುಸಾರವಾಗಿ ಈ ದಂಡಕ ವನದಲ್ಲಿ ವಾಸಮಾಡುತ್ತಿರುವೆನು. ಈಕೆಯು ಮಹಾತ್ಮನಾದ ಜನಕರಾಜನ ಪಿಯು, ಈಕೆಗೆ ಸೀತೆಯೆಂದು ನಾಮವು, ಈಕೆಯೇ ನನ್ನ ಪತ್ನಿ ಯು ಎಂದು ಹೇಳಲು ; ಅದಕ್ಕೆ ಶೂರ್ಪನಖಿಯು-ಎಲೈ ರಾಮನೇ, ಕೇಳು; ನಾನು ನಿನ್ನ ಅಂದ ವಾದ ರೂಪನ್ನು ನೋಡಿ ನಿನ್ನನ್ನು ಮೋಹಿಸಿದವಳಾಗಿದ್ದೇನೆ. ಸಾಮಾನ್ಯಳಾದ ಈ ಮನುಷ್ಯ ಸ್ತ್ರೀಯನ್ನು ಪರಿತ್ಯಜಿಸಿ ನನ್ನನ್ನು ಮದುವೆಯಾಗು, ನಿನ್ನ ಸಕಲಾಭೀಷ್ಟ ವೂ ಸಿದ್ದಿ ಸುವುದು, ನಾನು ಕಾಮರೂಪಿಣಿಯು, ಮತ್ತು ಲೋಕದಲ್ಲಿ ಮಹಾವೀರನೆನಿ ಸಿದ ರಾವಣನ ತಂಗಿಯಾದ ಶೂರ್ಪನಖಿಯೆಂಬವಳು ನಾನೇ ಎಂದು ಹೇಳಿದಳು. ರಾಮನು ಆ ಮಾತುಗಳನ್ನು ಕೇಳಿ ಸೀತೆಯ ಮೊಗವನ್ನು ನೋಡಿ ನಸುನಕ್ಕು ಶೂರ್ಪನಖಿಯನ್ನು ಕುರಿತು-ಎಲೈ ಶೋಭನಾಂಗಿಯೇ, ಯಾವಾಗಲೂ ನಾನು ಏಕ ಪತ್ನಿವ್ರತಸ್ಥನು. ಅದು ಕಾರಣ ನನಗೆ ಈಕೆಯೊಬ್ಬಳೇ ಪತ್ನಿಯಾಗಿರುವಳು. ನಾನು ಇವಳ ಮೇಲೆ ಇನ್ನೊಬ್ಬಳನ್ನು ಮದುವೆಯಾಗಕೂಡದು, ಇದೋ, ಆ ಕಡೆಯಲ್ಲಿ ನನಗಿಂತಲೂ ಚೆಲುವನೂ ನನ್ನ ತಮ್ಮನೂ ಆದ ಲಕ್ಷ್ಮಣನು ಹೆಂಡತಿಯಿಲ್ಲದೆ ಒಬ್ಬನೇ
ಪುಟ:ಕಥಾ ಸಂಗ್ರಹ - ಭಾಗ ೨.djvu/೭೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.