ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 ಕಥಾಸಂಗ್ರಹ-೪ ನೆಯ ಭಾಗ ವಲ್ಲವು. ಅದು ಕಾರಣ ನೀನು ಈ ರೀತಿಯಾಗಿ ಯುದ್ಧಕ್ಕೆ ಹೋಗುವುದರಿಂದ ಏನೂ ಪ್ರಯೋಜನವಿಲ್ಲ ವು. ಆದುದರಿಂದ ರಾಮಲಕ್ಷ್ಮಣರಿಬ್ಬರೂ ತಮ್ಮಿಂದ ತಾವೇ ಸಾಯುವಂತೆ ಒಂದು ಯುಕ್ತಿಯನ್ನು ಹೇಳುವೆನು ಕೇಳು. ಆ ರಾಮನಿಗೆ ಸರ್ವ ಲೋಕ ಸುಂದರಿಯಾಗಿ ಸೀತೆಯೆಂಬಭಿಧಾನದಿಂದ ಒಬ್ಬಳು ಹೆಂಡತಿಯಿರುವಳು. ನಿನ್ನ ಅಂತಃಪುರದಲ್ಲಿರುವ ದೇವದಾನವ ಯಕ್ಷ ರಾಕ್ಷಸಾದಿ ಕನ್ಯಕೆಯರಲ್ಲಿ ಒಬ್ಬಳಾದರೂ ಆಕೆಗೆ ಸಮಾನಳಾದ ಲಾವಣ್ಯವತಿಯಿಲ್ಲ ವು. ನೀನು ನಮ್ಮ ಸೋದರಮಾವನಾದ ಮಾರೀಚನನ್ನು ಸಹಾಯಕ್ಕೆ ಕರೆದುಕೊಂಡು ಈಗಲೇ ಪಂಚವಟಿಗೆ ಹೋಗಿ ರಾಮ ಲಕ್ಷ್ಮಣರನ್ನು ಸೀತೆಯ ಬಳಿಯಿಂದ ಅಗಲಿಸಿ ಆ ವೇಳೆಯಲ್ಲಿ ನೀನು ಬಲಾತ್ಕಾರದಿಂದ ಸೀತೆಯನ್ನು ಎತ್ತಿಕೊಂಡು ಲಂಕೆಗೆ ಬಂದು ಆಕೆಯನ್ನು ನಿನ್ನ ಪತ್ನಿ ಯನ್ನಾಗಿ ಮಾಡಿ ಕೊಂಡರೆ ಮರು ಲೋಕದಲ್ಲಿಯೂ ನಿನ್ನ ಭಾಗ್ಯಕ್ಕೆ ಎಣೆಯಾದ ಭಾಗ್ಯವೇ ಇಲ್ಲ ವು. ಆ ಮೇಲೆ ರಾಮನು ಪ್ರಿಯಳಾದ ಹೆಂಡತಿಯ ವಿಯೋಗವನ್ನು ತಾಳಲಾರದೆ ಸಾಯು ವನು, ಅಣ್ಣ ಅತ್ತಿಗೆ ಇವರ ವಿಯೋಗದುಃಖತಾಪಗಳಿಂದ ಲಕ್ಷ್ಮಣನೂ ವಿನಾಶವಾಗಿ ಹೋಗುವನು ಎಂದು ಹೇಳಿದನು. ರಾವಣನು ಈ ಮಾತುಗಳನ್ನು ಕೇಳಿ ಇದು ಒಳ್ಳೆಯ ಸೂಚನೆಯೇ ಸರಿ. ಹೀಗೆಯೇ ಮಾಡಬೇಕೆಂದು ತನ್ನ ಮನಸ್ಸಿನಲ್ಲಿ ನಿಶ್ಚಯಿಸಿ ಕೂಡಲೆ ರಥಾರೂಢನಾಗಿ ಹೊರಟು ನಡುಗಡಲಲ್ಲಿರುವ ಮಾರೀಚನ ಆಶ್ರಮಕ್ಕೆ ಬಂದು ಅವನೊಡನೆ-ದಶರಥನ ಮಗನಾದ ರಾಮನು ಶೂರ್ಪನಖಿಯ ಕಿವಿ ಮೂಗುಗಳನ್ನು ಕೊಯ್ಯು ಸಮರದಲ್ಲಿ ಖರದೂಷಣಾದಿಗಳನ್ನು ಕೊಂದುಹಾಕಿದ ಸುದ್ದಿಯನ್ನೂ ತಾನು ರಾಮನ ಹೆಂಡತಿ ಯನ್ನು ಅಪಹರಿಸಿಕೊಂಡು ಬರಬೇಕೆಂಬ ಉದ್ದೇಶದಿಂದ ಬಂದಿರುವುದನ್ನೂ ಹೇಳಿ ಒಡಂಬಡಿಸಿ ಪಂಚವಟಿಯಲ್ಲಿ ಮಾಡಬೇಕಾದ ಉಪಾಯಗಳನ್ನು ಅವನಿಗೆ ಹೇಳಿ ಕೊಟ್ಟು ಆತನೊಡನೆ ಹೊರಟು ಪಂಚವಟಿಗೆ ಬಂದು ತಾನೊಂದೆಡೆಯಲ್ಲಿ ಗೋಪ್ಯವಾ ಗಿದ್ದು ಕೊಂಡು ಮಾರೀಚನನ್ನು ಮುಂಚಿತವಾಗಿ ರಾಮಾಶ್ರಮಕ್ಕೆ ಕಳುಹಿಸಿದನು. ಆಗ ಮಾಯಾವಿಯಾದ ಮಾರೀಚನು ಪಂಚರತ್ನ ಪ್ರಕಾಶಮಯವಾದ ಜಿಂಕೆಯ ಆಕಾರವನ್ನು ಧರಿಸಿ ರಾಮಾಶ್ರಮದ ಬಳಿಗೈತಂದು ಸೀತಾರಾಮರ ಮುಂದೆ ಸುಳಿ ದಾಡುತ್ತಿರಲು ; ಸೀತೆಯು ಆ ಮಾಯಾಮೃಗದ ರಮ್ಯಾ ಕಾರವನ್ನು ನೋಡಿ ಮೋಹಿ ತಳಾಗಿ ರಾಮನನ್ನು ಕುರಿತು-ಎಲೈ ಪ್ರಾಣೇಶನೇ, ನಾನು ಇಂಥ ಚೆಲುವಾದ ಹುಲ್ಲೆಯನ್ನು ಮೊದಲೆಂದೂ ನೋಡಿದುದಿಲ್ಲ, ಯಾವ ಪ್ರಯತ್ನದಿಂದಾದರೂ ಇದನ್ನು ಹಿಡಿದು ತಂದರೆ ನಾವು ಈ ವನವಾಸದಲ್ಲಿರುವ ವರೆಗೂ ಇದರ ಸಂಗಡ ಆಡುತ್ತ ಸುಖವಾಗಿ ಕಾಲವನ್ನು ಕಳೆಯಬಹುದು, ಆ ಮೇಲೆ ಅಯೋಧ್ಯೆಗೆ ತೆಗೆದುಕೊಂಡು ಹೋಗಿ ನಮ್ಮ ಅಂತಃಪುರದಲ್ಲಿ ಇಟ್ಟು ಕೊಳ್ಳಬಹುದು ಎಂದು ದೈನ್ಯದಿಂದ ಬಹು ವಿಧವಾಗಿ ಹೇಳಿಕೊಂಡಳು. ಆಗ ರಾಮನು ಸೀತಾರಕ್ಷಣಾರ್ಥವಾಗಿ ಲಕ್ಷ್ಮಣನನ್ನು ಅಲ್ಲೇ ಬಿಟ್ಟು ಧನುರ್ಬಾಣಗಳನ್ನು ತೆಗೆದು ಕೊಂಡು ಆ ಮೃಗದ ಹಿಂದೆಯೇ ಹೋದನು, ಆ ಮಾಯಾಮೃಗವು ದೂರದಲ್ಲಿ ಮಿಂಚಿನಂತೆ ಕಂಡು ಮರೆಯಾಗುತ್ತ