ಈ ಪುಟವನ್ನು ಪರಿಶೀಲಿಸಲಾಗಿಲ್ಲ.

79 ಸುಗ್ರೀವಸಖ್ಯದ ಕಥೆ ವಿನತನೆಂಬ ಕಪಿಸೇನಾಪತಿಯನ್ನೂ ದಕ್ಷಿಣದಿಕ್ಕಿಗೆ ನೀಲ ಹನುಮಂತ ಬ್ರಹ್ಮನ ಮಗ ನಾದ ಜಾಂಬವಂತ ಸುಹೋತ್ರ ಗಜ ಗವಾಕ್ಷ ಗವಯ ಋಷಭ ಮೈಂಧ ದ್ವಿವಿಧ ವಿಜಯ ಗಂಧಮಾದನ ಉಲ್ಫಾ ಮುಖ ಅಂಗದ ಇವರೇ ಮೊದಲಾದ ವಾನರ ಶ್ರೇಷ್ಠ ರನ್ನೂ ಉತ್ತರದಿಕ್ಕಿಗೆ ತಾರೆಯ ತಂದೆಯಾದ ಸುಷೇಣನನ್ನೂ ಪಡುವಣ ದಿಕ್ಕಿಗೆ ಶತಬಲಿಯೆಂಬ ಕಪಿನಾಯಕರನ್ನೂ ನೇಮಿಸಿ--ನೀವೆಲ್ಲರೂ ನಿಮ್ಮ ನಿಮ್ಮ ಸೇನೆಗಳೊ ಡನೆ ಹೊರಟುಹೋಗಿ ಒಂದು ತಿಂಗಳೊಳಗೆ ನಿಮ್ಮ ನಿಮ್ಮ ದಿಕ್ಕುಗಳ ಕಡೆಯ ವರೆಗೂ ಆಕಳ ಹೆಜ್ಜೆಯಷ್ಟು ಸ್ಥಳವನ್ನಾದರೂ ಬಿಡದೆ ಹುಡುಕಿ ಸೀತೆಯನ್ನೂ ರಾವಣನನ್ನೂ ಗೊತ್ತುಮಾಡಿಕೊಂಡು ಬರಬೇಕು, ಹಾಗೆ ಬಾರದೆ ತಿಂಗಳು ಮುಗಿದ ಮೇಲೆ ಬಂದ ವರಿಗೆ ಮರಣಶಿಕ್ಷೆಯನ್ನು ವಿಧಿಸುವೆನೆಂದು ಅಪ್ಪಣೆಯನ್ನು ಕೊಟ್ಟು ಕಳುಹಿಸಲು; ಅದೇ ಮೇರೆಗೆ ಅವರೆಲ್ಲರೂ ತಮ್ಮ ತಮ್ಮ ಬಲಗಳೊಡನೆ ಕೂಡಿ ಹೊರಟುಹೋದರು.

  • ತರುವಾಯ ಪೂರ್ವಪಶ್ಚಿಮೋತ್ತರ ದಿಕ್ಕುಗಳಿಗೆ ನೇಮಿಸಲ್ಪಟ್ಟಿದ್ದ ಎನತ ಶತ ಬಲಿ ಸುಷೇಣರೆಂಬ ಕವಿನಾಯಕರು ತಮ್ಮೊಡೆಯನಾದ ಸುಗ್ರೀವನು ಕ್ರೂರವಾದ ಆಜ್ಞೆಯುಳ್ಳವನೆಂಬ ಭಯವುಳ್ಳವರಾದುದುಂದ ಬಹು ತ್ವರಿತದಿಂದ ಸೀತಾರಾವಣ ರನ್ನು ಹುಡುಕಿ ಎಲ್ಲೂ ಕಾಣದೆ ತಿಂಗಳು ಮುಗಿಯುವುದರೊಳಗಾಗಿ ಸುಗ್ರೀವನ ಬಳಿಗೆ ಬಂದು--ನಾವು ಹೋಗಿದ್ದ ಮೂರು ದಿಕ್ಕುಗಳಲ್ಲೂ ಸೀತಾರಾವಣರಿಲ್ಲವೆಂದು ಹೇಳಿದರು. ಇತ್ತ ದಕ್ಷಿಣದಿಕ್ಕಿಗೆ ನೇಮಿಸಲ್ಪಟ್ಟಿದ್ದ ನೀಲ ಅಂಗದ ಹನುಮಂತ ಜಾಂಬವಂತರೇ ಮೊದಲಾದವರು ಋಷ್ಯಮ ಕಾದ್ರಿಯಿಂದ ಹೊರಟು ನಿಂಧ್ಯ ಪರ್ವ ತವನ್ನು ಸೇರಿ ಅದರ ತಪ್ಪಲುಗಳಲ್ಲೂ ಗುಹೆಗಳಲ್ಲೂ ಬಹಳವಾಗಿ ಹುಡುಕಿ ಹಸಿವು ಬಾಯಾರಿಕೆಗಳಿಂದ ಕ೦ದಿ ಕುಂದಿ ಕಡೆಗೆ ಸ್ವಯಂಪ್ರಭೆಯೆಂಬುವಳಿರುವ ಗುಹೆಯನ್ನು ಪ್ರವೇಶಿಸಿ ಅವಳನ್ನು ಕಂಡು ತಾವು ಬಂದಿರುವುದಕ್ಕೆ ಕಾರಣವನ್ನು ಸಾಂಗವಾಗಿ ತಿಳಿಸಲು ; ಆಕೆಯು ಅವರಿಗೆ ತಿನ್ನುವುದಕ್ಕೆ ಕಂದಮೂಲಗಳನ್ನೂ ಕುಡಿಯುವುದಕ್ಕೆ ನಿರ್ಮಲೋದಕವನ್ನೂ ಜೇನುತುಪ್ಪವನ್ನೂ ಕೊಟ್ಟು ಅವರ ಹಸಿವು ಬಾಯಾರಿಕೆಗೆ ಳನ್ನು ಶಾಂತಪಡಿಸಿದಳು. ಆ ಮೇಲೆ ಅವರೆಲ್ಲರೂ ಆಕೆಯನ್ನು ಕುರಿತು ಎಲ್ಲೆ ತಾಯೇ, ನಿನ್ನ ದಯೆಯಿಂದ ನಮ್ಮ ಕು ತೃಷೆಗಳು ಆಡಗಿದುವು. ನಾವು ಬರುವಾಗ ಈ ಗುಹೆಯೊಳಗೆ ಸುಲಭವಾಗಿ ಬಂದೆವು. ಈಗ ನಾವು ಹೇಗೆ ಯಾವ ದಾರಿಯಿ೦ದ ಹೋಗಬೇಕೋ ತಿಳಿಯುವುದಿಲ್ಲ, ನನ್ನೊಡೆಯನಾದ ಸುಗ್ರೀವನುಒಂದು ತಿಂಗಳೊಳಗೆ ಹಿಂದಿರುಗಿ ಬಾರದಿದ್ದರೆ ನಿಮ್ಮನ್ನೆಲ್ಲಾ ಕೊಲ್ಲಿ ಸುವೆನೆಂದು ನಮಗೆ ಅಪ್ಪಣೆ ಕೊಟ್ಟಿದ್ದಾನೆ. ಆದುದರಿಂದ ಎಲೈ ತಾಯೇ, ನೀನು ನಮ್ಮಲ್ಲಿ ದಯೆಯನ್ನಿಟ್ಟು ಈ

ಗುಹೆಯಿಂದ ಹೊರಗೆ ಹೋಗುವ ಹಾಗೆ ಸಹಾಯಮಾಡಿದರೆ ನೀನೇ ನಮ್ಮ ಪ್ರಾಣಗ ಳನ್ನು ಕಾಯ್ದವಳಾಗುತ್ತೀಯೆ ಎಂದು ದೈನ್ಯದಿಂದ ಬೇಡಿಕೊಳ್ಳಲು ; ಆಗ ಆಕೆಯು ಅವರನ್ನು ಕುರಿತು-ಎಲೈ ಕಪಿನಾಯಕರುಗಳಿರಾ, ಮಹಾಪುರುಷರಾದ ದೇವತೆಗ ಭೂ ಕೂಡ ಈ ಗುಹೆಯನ್ನು ಪ್ರವೇಶಿಸಿ ಹಿಂದಿರುಗಿ ಹೋಗಲಾರರು. ಅದು ಕಾರಣ ಈಗ ನೀವೆಲ್ಲರೂ ಒಬ್ಬರ ಕೈಯನ್ನೊಬ್ಬರು ಹಿಡಿದು ಕೊಂಡು ಕಣ್ಣುಗಳನ್ನು ಮುಚ್ಚಿ