ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಕಥಾಸಂಗ್ರಹ-೪ ನೆಯ ಭಾಗ ಕ್ರಿಸಲಾರಗೆ ಒಂದು ಕ್ಷಣಮಾತ್ರ ಮನಸ್ಸಿನಲ್ಲಿ ರಾಮನ ಪಾದಗಳನ್ನು ನೆನೆಯುತ್ತ ಕಣ್ಮುಚ್ಚಿ ಕೊಂಡಿದ್ದು ಅನಂತರದಲ್ಲಿ ಆ ನಗರದ ದ್ವಾರಸಮಿಾಪಕ್ಕೆ ಬಂದನು. ಆ ದ್ವಾರಪ್ರದೇಶವು ಹೇಗಿತ್ತೆಂದರೆ--ಸಾಲುಮುತ್ತಿನ ಗೊಂಚಲುಗಳಿಂದ ಕಟ್ಟ ಲ್ಪಟ್ಟಿರುವ ತೋರಣಗಳಿಂದಲೂ ರತ್ನ ಖಚಿತಗಳಾದ ವಜ್ರದ ಕವಾಟಗಳಿಂದಲೂ ವಜ ಸ್ತಂಭಗಳಿಂದಲೂ ನವರತೃ ಶಿಲಾನಿರ್ಮಿತವಾದ ಗೋಡೆಗಳಿಂದಲೂ ಕರ್ಪೂರದ ದೀವಿಗೆ ಗಳಿಂದಲೂ ಬಲವಾಗಿ ನೆಡಲ್ಪಟ್ಟಿರುವ ಧ್ವಜಪತಾಕೆಗಳಿಂದಲೂ ಶೋಭಿಸುತ್ತಿದ್ದಿತು. ಮತ್ತು ಆ ದ್ವಾರದಲ್ಲಿ ಹುಲಿಮೊಗದ ರಕ್ಕಸರೂ ಜ್ಯೋತಿರ್ಮುಖದ ನಿಶಾಚರರೂ ಬ್ರಹ್ಮ ರಾಕ್ಷಸರೂ ಪಿಶಾಚಿಗಳೂ ಆರ್ಭಟಿಸುತ್ತ ಅತಿ ಭಯಂಕರವಾದ ಆಯುಧಗಳನ್ನು ಧರಿಸಿ ಎಡೆಬಿಡದೆ ಕಾದುಕೊಂಡಿದ್ದರು. ಆಂಜನೇಯನು ಅಂಥ ದ್ವಾರಪ್ರದೇಶವನ್ನು ನೋಡಿ ಆಶ್ಚರ್ಯಪಟ್ಟವನಾಗಿ ತಾನು ಕಾಮರೂಪಿಯಾದುದರಿಂದ ಶರೀರಸೂಕ್ಷ್ಮತೆ ಯನ್ನು ಹೊಂದಿ ಕಳ್ಳಗಂಡಿಯಿಂದ ತೂರಿ ಒಳಹೊಕ್ಕು ನೋಡಲು ; ಅಲ್ಲಿ ಒಂದು ನೊಣವನ್ನಾದರೂ ಒಳಗೆ ಹೋಗಬಿಡದೆ ಎಚ್ಚರಿಕೆಯಿಂದ ಕಾಯ್ದು ಕೊಂಡಿರುವ ಲಂಕಿಣಿಯೆಂಬ ಮಹಾ ರಾಕ್ಷಸಿಯನ್ನು ಯುದ್ಧದಲ್ಲಿ ಕೊಂದು ಯಮಾಲಯ ಕ್ಕೆ ಕಳುಹಿಸಿ ಮುಂದಕ್ಕೆ ಹೋಗಿ ರಾತ್ರಿಯಾದ ಮೇಲೆ ಆನೆ ಕುದುರೆಗಳ ಲಾಯಗೆ ಇಲ್ಲೂ ದೇವಾಲಯ ಮಂಟಸಗಳೇ ಮೊದಲಾದ ಸ್ಥಳಗಳಲ್ಲೂ ಅಂಗಡಿಬೀದಿಗಳಲ್ಲೂ ಹೂವಾಡಿಗರ ಕೇರಿಗಳಲ್ಲೂ ಅನೇಕ ರಾಕ್ಷಸರ ಮನೆಗಳಲ್ಲೂ ರಾವಣನ ಮುಖ್ಯ ಮಂತ್ರಿಯಾದ ಪ್ರಹಸ್ತನೆಂಬವನ ಮನೆಯ ಕಿಏ ಮಗುಗಳಿಲ್ಲದೆ ವಿಕಾರರೂ ಪಿಣಿಯಾಗಿರುವ ಶೂರ್ಪನಖಿಯೆಂಬ ರಾವಣನ ತಂಗಿಯ ಮನೆಯಲ್ಲೂ ಸೀತೆಯನ್ನು ಹುಡುಕಿ ಕಾಣದೆ ಅಲ್ಲಿಂದ ಮುಂದಕ್ಕೆ ಹೊರಟು ನೋಡಲು ; ವಿವಿಧವಾದ ಚಿತ್ರ ಮಂಟಸಗಳಿ೦ದಲೂ ವಿಚಿತ್ರತರವಾದ ನೀರಾಚಿಯ ಮೇಲುಕಟ್ಟುಗಳಿಂದಲೂ ಗಗನ ವನ್ನು ಮುಟ್ಟುತ್ತಿರುವ ಪತಾಕೆಗಳಿಂದಲೂ ಶೋಭಸತ್ತ ಇಂದ್ರಪುಷ್ಪಕದಂತಿರುವ ಕುಂಭಕರ್ಣನ ಮನೆಯನ್ನು ಹೊಕ್ಕು ಅಲ್ಲಿ ಬಿದ್ದು ನಿದ್ರಿಸುತ್ತಿರುವ ಘೋರಾಕಾರಿ ಣಿಯರಾದ ರಾಕ್ಷಸಸ್ತ್ರೀಯರನ್ನು ನೋಡಿಕೊಂಡು ಪಾನಭೂಮಿಗಳಲ್ಲೂ ಪಾಠಶಾ ಲೆಗಳಲ್ಲೂ ಇನ್ನೂ ಇತರ ಸ್ಥಳಗಳಲ್ಲೂ ಹುಡುಕುತ್ತ ಬಂದು ಅಂತಃಪುರವನ್ನು ಪ್ರವೇಶಿಸಿ ಅಲ್ಲಿ ಪ್ರಚಂಡಮಾರುತದಿಂದ ತಂದು ಹಾಕಲ್ಪಟ್ಟ ನೀಲಗಿರೀಂದ್ರನೋ ಎಂಬ ಹಾಗೆ ಬಿದ್ದಿರುವ ಕುಂಭಕರ್ಣನೆಂಬ ರಾಕ್ಷಸಾಧಮನನ್ನು ನೋಡಿ--ಇವನು ಜಗತ್ತಿನ ಕೊಲೆಗೆಲಸವನ್ನು ಮಾಡಿ ಮುಗಿಸಿ ಬಳಲಿ ಬಿಗಿದ ಬಲುನಿದ್ದೆಯಿಂದ ಬಿದ್ದಿ ರುವ ಭೈರವನೋ ? ಯಮನೋ ? ಅಥವಾ ಸಮುದ್ರೋದಕವನ್ನೆಲ್ಲಾ ಕುಡಿದು ತೃಪ್ತನಾಗಿ ಬಿದ್ದಿರುವ ಬಡಬಾನಲನೋ ? ಎಂದು ಬೆರಗಾಗಿ-ಈ ರಾಕ್ಷ ಸಮಾರಿ ಯೇನಾದರೂ ಲೋಕವನ್ನೆಲ್ಲಾ ನುಂಗಬೇಕೆಂದು ಎದ್ದು ನಿಂತರೆ ಹರಿಹರಬ್ರಹ್ಂದ್ರಾದಿ ದೇವತೆಗಳಲ್ಲೂ ನರಭು ಜಂಗಮರಲ್ಲೂ ಬೇಕು ಬೇಡೆಂಬವರನ್ನು ಕಾಣೆನು ಎಂದು ಮನಸ್ಸಿನಲ್ಲಿ ಭಯಪಟ್ಟು ಕೊಂಡು ಬರಬರುತ್ತ ಭೂಲೋಕ ವನ್ನೆಲ್ಲಾ ತೇಲಿಸಿ ಮುಳುಗಿ ಸುವ ಪ್ರಳಯ ಕಾಲಸಮುದ್ರದ ರಭಸದಂತೆಯ ಪಿನಾಕಿಯ ಡಮರುಗಧ್ವನಿಯಂತೆ