ಕನಕ ಸಾಹಿತ್ಯ ದರ್ಶನ-೧ ಜನ ಹೇಳಿಕೆಗೆ ಬೆಲೆಕೊಡುವುದಾದರೆ ಕನಕ ಬಾಡನಾಡಿನ ದಣ್ಣಾಯಕ. ತಂದೆ ಬೀರಪ್ಪ, ತಾಯಿ ಬಚ್ಚಮ್ಮ, ತನ್ನ ಹುಟ್ಟು ಹೆಸರು ಕನಕದಾಸನೆಂದಲ್ಲ, ತಿಮ್ಮಪ್ಪನೆಂದು ತಿಮ್ಮಪ್ಪ ಕನಕದಾಸನಾದದ್ದಕ್ಕೆ ಭೂಗರ್ಭದಲ್ಲಿದ್ದ ನಿಧಿ ದೊರೆತುದು ಕಾರಣವೆಂದು ಐತಿಹ್ಯ ಹೇಳಿದರೂ ತಿರುಪತಿ ತಿಮ್ಮಪ್ಪನಿಗೆ ಕನಕಗಿರಿವಾಸನೆಂಬ ಪರ್ಯಾಯ ನಾಮವೂ ಇದೆ ಎಂಬುದನ್ನು ಮರೆಯುವಂತಿಲ್ಲ. ಏನೇ ಇರಲಿ ಭೂತಿಯೊಂದು ವಿಭೂತಿತ್ವವನ್ನು ಪಡೆದದ್ದು ಇಲ್ಲಿನ ವೈಶಿಷ್ಟ್ಯ. ಭೂತಿ ಎಂದರೆ ಸಹಜಸ್ಥಿತಿಯಲ್ಲಿ ಇರುವುದು. ವಿಭೂತಿ ಎಂದರೆ ವಿಶೇಷ ರೀತಿಯಲ್ಲಿ ಆದದ್ದು. ಕಲ್ಲು ಭೂತಿ, ಅದರಿಂದಾದ ಕಲಾಕೃತಿ ವಿಭೂತಿ ; ಮಣ್ಣು ಭೂತಿ, ಅದರಿಂದ ಮಾಡಿದ ಗಣೇಶ ಪ್ರತಿಮೆ ವಿಭೂತಿ. ಅಂತೆಯೇ ಗದಾಧರ ಭೂತಿಯಾದರೆ, ಶ್ರೀರಾಮಕೃಷ್ಣ ಪರಮಹಂಸ ವಿಭೂತಿ : ನರೇಂದ್ರ ಭೂತಿಯಾದರೆ, ಸ್ವಾಮಿ ವಿವೇಕಾನಂದ ವಿಭೂತಿ ; ತಿಮ್ಮಪ್ಪ ಭೂತಿಯಾದರೆ, ಕನಕದಾಸ ಶ್ರೀಮದ್ವಿಭೂತಿ! ಈ ವಿಭೂತಿ ಪುರುಷನು ಸಂತನಾಗುವ ಮುನ್ನ ಡಣ್ಣಾಯಕನಾಗಿದ್ದ. ಆತನದೇ ಒಂದುಕ್ತಿ ಹೇಳುತ್ತದೆ ! ದೊರೆತನವ ಬಿಡಿಸಿ, ಸುಸ್ಥಿರ ಮಾರ್ಗ ತೋರಿಸಿದೆ ನರಮಾತ್ರದವನನದೆ ಹರಿಯೆ ಎಂದು. ಈ 'ದೊರೆತನ ಬೇರಾವುದೂ ಅಲ್ಲ, ವಿಜಯನಗರ ಸಾಮ್ರಾಜ್ಯದ ಸಾಮಂತಾಧಿಕಾರ, ಬಾಡ ವಿಜಯನಗರ ಚಕ್ರಾಧಿಪತ್ಯದ ಉತ್ತರದ ಗಡಿನಾಡು; ಮೇಲಿಂದ ಮೇಲೆ ದಾಳಿ ಬರುತ್ತಿದ್ದ ಷಾಹೀ ರಾಜ್ಯವೊಂದರ ಮೇರೆ. ಸಾಮ್ರಾಜ್ಯದ ಕೀರ್ತಿಗೆ ಕಳಂಕ ತರದಂತಹ ಸಾಹಸಾಭರಣನಿದ್ದಿರಬೇಕು ಆತ. ಆದ್ದರಿಂದಲೇ ಹೇಳಿಕೊಂಡಿದ್ದಾನೆ : ಕನಕ ದಳದಲಿ ಬಂದು ಕಲೆತನೆಂದರೆ ಪೌಜು ಕನಸು ಮನಕಾಗುವುದು ಹರಿಯೆ ಧುರದಲ್ಲಿ ನಾಲ್ಕು ಸಾವಿರನಿಲ್ಲಲದನು ದೆಸೆಗೆ ಪರಿಹರಿಸುತಿಹೆ ಎಲೊ ಹರಿಯೆ ಪರಬಲವ ನೋಡಿದರೆ ಉರಿದು ಬೀಳುವ ಮನ ಸೆರೆಹಾಕಿ ನಿಲಿಸಿದೆಯೊ ಹರಿಯೆ ಮೊನೆಗಾರ ಧಣಿಯೆಂಬ ಧೈರ್ಯವ ಬಿಡಿಸಿ ಸೇವ ಕನ ಮಾಡಿದೆ ಹರಿಯೆ !? ಎಂದು. ಈ ಮೊನೆಗಾರಧಣಿ ಸವಾರಿ ಹೋರಟರೆ ಛತ್ರ ಭೇರಿ ನಗಾರಿಗಳು
ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೨೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.