ಕನಕ ಸಾಹಿತ್ಯ ದರ್ಶನ-೧ III ತಿಕ್ಕಾಟದಲ್ಲಿ ವ್ಯಾಸರಾಯರು ತುಂಬ ಎಚ್ಚರಿಕೆಯಿಂದ ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದುದುಂಟು. ಒಂದು ನಿದರ್ಶನ : ಕನಕದಾಸನ ಮೇಲೆ ದಯಮಾಡಲು ವ್ಯಾಸ | ಮುನಿ ಮಠದವರೆಲ್ಲ ದೂರಿಕೊಂಬುವರೊ ||ಪ|| ತೀರ್ಥವನು ಕೊಡುವಾಗ ಕನಕನ ಕರೆಯೆನಲು ಧೂರ್ತರಾಗಿದ್ದ ವಿದ್ವಾಂಸರೆಲ್ಲ || ಸಾರ್ಥಕವಾಯ್ತು ಇವರ ಸಂನ್ಯಾಸಿತನವೆಲ್ಲ ಪೂರ್ತಾಗಲೆಂತೆನಲು ಯತಿಯು ನಗುತಿದ್ದನು ಮರುದಿನ ಅವರವರ ಪರೀಕ್ಷಿಸಬೇಕೆಂದು ಕರೆದು ವಿದ್ವಾಂಸರಾ ಕನಕ ಸಹಿತ ಕರದಲ್ಲಿ ಕದಳಿಯ ಫಲಗಳನೆ ಕೊಟ್ಟು ಯಾ ರಿರದ ಸ್ಥಳದಲ್ಲಿ ಮೆದ್ದು ಬನ್ನಿರೆನಲು ||೨|| ಊರ ಹೊರಗೆ ಹೋಗಿ ಬೇರೆ ಬೇರೆ ಕುಳಿತು ತೋರದಲೆ ಎಲ್ಲರೂ ಮೆದ್ದು ಬರಲು ತೋರಲಿಲ್ಲವು ನನಗೆ ಏಕಾಂತಸ್ಥಳವೆನುತ ಸಾರಿ ಕದಳೀ ಫಲವ ತಂದು ಮುಂದಿಟ್ಟ ||೩|| ಡಿಂಭದೊಳು ಶಬ್ದ ವಾಗಾದಿ ಪ್ರೋತ್ರಗಳಲ್ಲಿ ಇಂಬಾಗಿ ತಶರೆಲ್ಲ ತುಂಬಿಹರೆ ತಿಂಬುವುದು ಹೇಗೆನುತ ವ್ಯಾಸರಾಯರ ಕೇಳೆ ಸಂಭ್ರಮದಲವರೆಲ್ಲ ಕುಳಿತು ಕೇಳಿದರು ಆಗ ವ್ಯಾಸರಾಯರು- ನೋಡಿದರೆ ಈ ಕನಕನಾಡುವ ಮಾತುಗಳ ಮೂಢಜನರರಿಯಬಲ್ಲರೆ ಮಹಿಮೆಯ ನಾಡಾಡಿಯಂತೆಯೇ ಮಾಡಿಬಿಟ್ಟರು ಇವಗೆ ನಾಡೆಲ್ಲ ಹುಡುಕಿದರು ಈಡಾರ ಕಾಣೆ 11೫|| ಎಂದು ಮುಕ್ತಕಂಠದಿಂದ ಹೊಗಳುತ್ತಾರೆ. ಪ್ರತಿಭೆಯನ್ನು ಗುರುತಿಸುವ ಗೌರವಿಸುವ ದೊಡ್ಡಗುಣ ಅವರದು. ಪುರಂದರದಾಸರ ಈ ಹಾಡಿನ ಆಂತರ್ಯದಲ್ಲಿ ಅಡಗಿರುವ ಅಂಶ ೪||
ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.