ಪುಟ:ಕನಕದಾಸ ಸಾಹಿತ್ಯ ದರ್ಶನ - ಸಂಪುಟ ೧ - ಕನಕವಾಲೋಕನ.pdf/೬

ಈ ಪುಟವನ್ನು ಪರಿಶೀಲಿಸಲಾಗಿದೆ
vii

ಮುನ್ನುಡಿ

ಪುರಂದರದಾಸರ ಪಂಚ ಶತಮಾನೋತ್ಸವ ಜರುಗಿದ ಐದಾರು ವರ್ಷಗಳ
ಅಂತರದಲ್ಲಿಯೇ ಯುಗಪುರುಷ ಕನಕದಾಸರ ಐನೂರನೆಯ ವರ್ಷದ
ಉತ್ಸವವನ್ನಾಚರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡ ಸರ್ಕಾರದ ಧೋರಣೆ
ಸ್ವಾಗತಾರ್ಹವಾದದ್ದು. ಕನಕದಾಸರನ್ನೂ, ಅವರ ಸಾಹಿತ್ಯವನ್ನೂ ಕುರಿತ ಪ್ರಶಸ್ತಿ
ಗ್ರಂಥವನ್ನು ಪ್ರಕಟಿಸುವ ಯೋಜನೆ ಆ ಕಾರ್ಯಕ್ರಮದ ಒಂದು ಭಾಗವಾಗಿದೆ.
ಮೂರುವರ್ಷಗಳ ಅವಧಿಯೊಳಗೆ ಸಾಹಿತ್ಯಕೃತಿಗಳನ್ನು ಹಾಗೂ ಪ್ರಶಸ್ತಿಗ್ರಂಥವನ್ನು
ಸಂಪಾದಿಸಿ ಹೊರತರುವ ಹೊಣೆಯನ್ನು ಸರ್ಕಾರ ೨೮-೪-೧೯೮೯ನೆಯ
ದಿನಾಂಕದ ತನ್ನ ನಿರೂಪದ ಮೂಲಕ ಕೆಳಗಿನ ಸಂಪಾದಕ ಮಂಡಲಿಗೆ ವಹಿಸಿತು.
೧.ಡಾ. ದೇ. ಜವರೇಗೌಡ, ಅಧ್ಯಕ್ಷರು
೨.ಡಾ. ಹೆಚ್. ಜೆ. ಲಕ್ಕಪ್ಪಗೌಡ, ಸದಸ್ಯರು
೩. ಶ್ರೀ ಬರಗೂರು ರಾಮಚಂದ್ರಪ್ಪ, ಸದಸ್ಯರು
೪.ಡಾ. ಸಾ. ಶಿ. ಮರುಳಯ್ಯ, ಸದಸ್ಯರು
೫.ನಿರ್ದೆಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೆಶನಾಲಯ
ಸದಸ್ಯ-ಕಾರ್ಯದರ್ಶಿ.
೬-೬-೧೯೮೯ರಂದು ಮಂಡಲಿಯ ಪ್ರಥಮ ಸಭೆಯು, ಸಂಪಾದನಾ
ವಿಧಾನವನ್ನು ನಿರ್ಧರಿಸಿತು. ಆ ಪ್ರಕಾರ ನಿಶ್ಚಿತ ವೇಳೆಯೊಳಗೆ 'ಕನಕ ಸಾಹಿತ್ಯ
ದರ್ಶನ' ಗ್ರಂಥ ಹೊರಬರುತ್ತಿರುವುದು ಸಂತೋಷದ ಸಂಗತಿ.
ಯಾರೇ ಸಂಪಾದಕರಿರಲಿ, ಅವನು ಎದುರಿಸಬೇಕಾದ ಕೆಲವು ಸಮಸ್ಯೆಗಳನ್ನು
ಮುಂದಿನವರ ಅವಗಾಹನೆಗಾಗಿ ಇಲ್ಲಿ ನಿರೂಪಿಸಿದರೆ ಅಪ್ರಸ್ತುತವಾಗಲಾರದೆಂದು
ಭಾವಿಸಿದ್ದೇನೆ. ವಿಷಯ ಹಾಗೂ ಲೇಖಕರ ಆಯ್ಕೆ ಮತ್ತು ಹೊಂದಾಣಿಕೆ ಮೊದಲ
ಸಮಸ್ಯೆ. ಈ ಅಂಶದಲ್ಲಿ ಮಂಡಲಿಯ ಒಮ್ಮತ ಅಗತ್ಯವಾದ್ದರಿಂದ, ಪ್ರಸಕ್ತ ವಿಷಯದಲ್ಲಿ
ಆಸಕ್ತಿ ಇಲ್ಲದ ಕೆಲವು ಹೆಸರುಗಳು ಪಟ್ಟಿಯಲ್ಲಿ ನುಸುಳಿಕೊಳ್ಳುವುದು ಸಹಜ.
ಪ್ರತ್ಯುತ್ತರಕ್ಕೆಂದು ಸ್ಟಾಂಪು ಹಚ್ಚಿದ ಲಕೋಟೆ ಕಳಿಸಿದರೂ, ಅದರ ವಾಪಸಾತಿಗಾಗಿ
ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ ; ಕೆಲವರಂತು ಉತ್ತರಿಸುವುದೇ ಇಲ್ಲ. ಲೇಖನ
ಬರೆಯಲೊಪ್ಪಿಕೊಂಡವರು 'ಅನಾನುಕೂಲ'ಗಳ ದೆಸೆಯಿಂದಾಗಿ ಹೆಚ್ಚು ಹೆಚ್ಚು
ಸಮಂತು ಕೇಳುತ್ತಾರೆ. ಮರಾಲ್ಕು ತಿಂಗಳಾದ ನಂತರ ತಮಗೆ
ಪುರಸೊತ್ತಾಗಲಿಲ್ಲವೆಂದು ಕೆಲವರು ಬರೆದು ಕೈತೊಳೆದುಕೊಳ್ಳುತ್ತಾರೆ. ಅವರನ್ನು
ಕೈಬಿಟ್ಟು, ಬೇರೆಯವರಿಗೆ ಪತ್ರ ಬರೆದಾಗಲೂ ಇದೇ ಕ್ರಮ ಪುನರಾವೃತ್ತವಾಗುತ್ತದೆ.