________________
` ವ ತ ರ ಣಿ ಕೆ ಇದುವರೆಗೆ ಕರ್ಣಾಟಕ ಭಾಷೆಯಲ್ಲಿ ಒಂಟಿತಗಳಾಗಿರುವ ನಾಟಕಗಳೆಲ್ಲವೂ 'ಸಂಸ್ಕೃತ ಮತ್ತು ಇಂಗ್ಲಿಪ' ನಾಟಕಗಳ ಭಾಷಾಂತರಗಳಾಗಿರುವುವಲ್ಲದೆ ಮತ್ತೆ > ಬೇರೆಯಲ್ಲ. ಈಗ ನಾನು ಕರ್ಣಾಟಕ ಭಾಷೆಯಲ್ಲಿ ನಾಟಕ ರಚನೆಯೇ ಇಲ್ಲವೆಂಬ ಈ ಕೊರತೆಯನ್ನು ಹೋಗಲಾಡಿಸಬೇಕೆಂದು ಉದ್ಯುಕ್ತನಾಗಿ ( ಕನಕಲಿತಾಪರಿ ಣಯ ” ವೆಂಬ ನಾಟಕವನ್ನು ರಚಿಸಿದೆನು. ಇದು ನನ್ನಿ೦ದಲೇ ಕಲ್ಪಿತವಾದ ಕಥೆ ಯಾಗಿರುವುದರಿಂದ ಕಲ್ಪಿತ ಕಥೆಯು ಪ್ರಕರಣವೆನ್ನಿ ಸಿಕೊಳ್ಳುವುದೆಂದು ಅನೇಕರು ನನ್ನ ನ್ನು ಆಕ್ಷೇಪಿಸಬಹುದು. ಆದರೆ ಕವಿಸಾರ್ವಭೌಮನಾದ ಕಾಳಿದಾಸನು ( ಮಾಳವಿಕಾಗ್ನಿಮಿತ್ರ ನಾಟಕ ) - ರಚನೆಯಲ್ಲಿ ಅನುಸರಿಸಿರುವ ಮಾರ್ಗವನ್ನ ನಾನೂ ಇದರಲ್ಲಿ ಅನುಸರಿಸಿರುವೆನು. ಮೊದಲು ನನ್ನಿಂದ ರಚಿತವಾದ “ ಪ್ರಿಯ ದರ್ಶಿಕಾ ನಾಟಿ ಕೆ ” ಯನ್ನೂ, ವ ( ಕೃಷ್ಣ ವಿಜಯ ವ್ಯಾಯೋಗ ?” ವನ್ನೂ ಮುದ್ರಿಸಿ ಪ್ರಚಾರಪಡಿಸಿಕೊಟ್ಟ೦ತೆಯೇ ಇದನ್ನು ಮುದ್ರಿಸಿ ನನಗೆ ಪ್ರೋತ್ಸಾಹವ ನ್ನುಂಟುಮಾಡಿಕೊಟ್ಟ ಕರ್ಣಾಟಕ ಗ್ರಂಥಮಾಲಾ ಸಂಪಾದಕರ ಉಪಕಾರವು ನನಗೆ ಚಿರಸ್ಮರಣೀಯವಾಗಿರುವುದು. ಈ ಗ್ರಂಥದಲ್ಲಿ ನನ್ನ ಪ್ರವಾದಜನ್ಯಗಳಾದ ಯಾವ ದೋಷಗಳು ಕಂಡು, ಬಂದಾಗ್ಯೂ ವಿದ್ವಾಂಸರು ನನ್ನ ಕೃಪೆಯಿಟ್ಟು ತಿಳಿಸಿದರೆ ಕೃತಜ್ಞತೆಯಿಂದ ಅವುಗ ಇನ್ನು ಮುಂದಣ ಮುದ್ರಣದಲ್ಲಿ ಸರಿಪಡಿಸುವೆನು. ( 1 3 ನಂಜನಗೂಡು ಶ್ರೀಕಂಠಶಾಸ್ತ್ರಿ); ಕೃಷ್ಣರಾಜ ಮೊಹಲ್ಲಾ ಮೈಸೂರ್