ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೫ ಹೆರರು ಕೊಡುವಟ್ಟುಳಿಗೆ ಹಿಮ್ಮೆಟ್ಟಿದೆಯೆ ನಿಂತು ಸಿರಿಗನ್ನಡ ಧ್ವಜವನೆ ಮೆರೆಯಿಸುತಿರುವ ಗಂಡುಮೆಟ್ಟಿನ ನೆಲದ ತಡಿಗಳಿಂದ, ಕನ್ನಡದ ಗಡಿಗಳಿ೦ದಬಂದಿಹಿರಿ, ಬಂದಿಹಿರಿ ಕನ್ನಡದ ಮಣಿಗಳಿರ, ಬಂದಿಹಿರಿ, ಕನ್ನಡದ ದೇವಿಯಾರಾಧನೆಗೆ, ಇಂದು ಸ್ವಾಗತವು ನಿಮಗೆ ! ತಂದಿಹಿರಿ ನೀವಿಂದು ಹೊಸದೊಂದು ಭಾಗ್ಯವನು | ಈ ನಮ್ಮ ಮೈಸೂರಿಗೆ ! ಬೆಟ್ಟ ತುದಿಯಲ್ಲಿ ನಿಂತು ಬೆಳಗಿ ದೆಸೆದೆಸೆಗೆ, ಭಕ್ತರಳಲೆಲ್ಲವನು ತುಳಿದು ನೆಲದಡಿಗೆ, ಒಲುಮೆಯಲಿ ನಲುಮೆಯಲಿ ಚಾಮುಂಡಿದೇವಿ, ಕನ್ನಡಿಗರಧಿದೇವಿ ಶುಭಗಳನು ತೀವಿ ಕಾಯುತಿರುವೀ ನಮ್ಮ ಮೈಸೂರಿಗೆ, ಇಂದು ಸ್ವಾಗತವು ನಿಮಗೆ ! ಇಲ್ಲಿ ಕೆರೆ, ಅಲ್ಲಿ ಗಿರಿ; ಎಲ್ಲೆಲ್ಲಿ ನೋಡಿದರೆ ಅಲ್ಲಲ್ಲಿ ತಂಪೆರಚುವುಪವನಗಳು. ಬನ್ನಿ , ವಿಶ್ರಮಿಸಿಕೊಳಿ, ಬಳಲಿಕೆಯ ಹರಿಸಿಕೊಳಿ ಎಂದು ಅದೂ ಕರೆಯುತಿಹವು ! ತನ್ನ೦ತರಂಗವನು ತೆರೆದು ತೋರಿಸಿ ಬೆಳಗಿ ತನ್ನ ನಲವನು ನಿಮಗೆ ಪುರವರುಹುವಂತಿರುವ ಉರಿವ ದೀಪದ ಹಿರಿಯ ಬೀದಿ ಸಾಲು ಸ್ವಾಗತವ ಬಯಸುತಿಹುದು !-ನಿಮಗಿದೋ ಮೈಸೂರು ಬಯಸುತಿಹುದು ! ಕನ್ನಡದ ಸೇವೆಯಲಿ ನುರುಗಿ ಹಣ್ಣಾದವರೆ, ಹಿರಿಯ ಕನ್ನಡ ಧೀರರೇ, * ಕನ್ನಡದ ಮೇಲ್ಮೀಯಾ ಕನಸ ನನಸಾಗಿಸುವ ತರುಣ ಕನ್ನಡ ವೀರರೇ,