ಈ ಪುಟವನ್ನು ಪ್ರಕಟಿಸಲಾಗಿದೆ
೮೯
ಮಂದಮಾರುತವಾಗಿ ತೇಲಿ ಬಾರೈ
ಹರಿವ ಹೊಳೆಯಾಗಿ ನೀ ಸಾಗಿ ಬಾರೈ
ಭೋರ್ಗರೆವ ಮಳೆಯಾಗಿ ಮೊರೆದು ಬಾರೈ
ನಿನಗೆ ಸುಸ್ವಾಗತವು ಗುರುವೆ ಬಾರೈ.
ಜೆ. ಕೆ. ಪ್ರಾಣೇಶಾಚಾರ
- ೫. ಕನ್ನಡ ನುಡಿ
- ೫. ಕನ್ನಡ ನುಡಿ
ಎನಿತು ಇನಿದು ಈ ಕನ್ನಡ ನುಡಿಯು
ಮನವನು ತಣಿಸುವ ಮೋಹನ ಸುಧೆಯು !
ಗಾನವ ಬೆರೆಯಿಸಿ
ವೀಣೆಯ ದನಿಯೊಳು
ವಾಣಿಯ ನೇವುರ
ನುಡಿಸುತೆ ಕುಣಿಯಲು
ಮಾಣದೆ ಮರೆಯುವ ಮಂಜುಲ ರವವೋ ?
ಎನಿತು ಇನಿದು ಈ ಕನ್ನಡ ನುಡಿಯು !
ರಂಗನ ಮುರಲಿಯ
ಹಿಂಗದ ಸರದಲಿ
ಹೆಂಗಳೆಯರು ಬೆಳ
ದಿಂಗಳಿನಿರುಳಲಿ
ಸಂಗೀತವನೊರೆದಂಗವಿದೇನೋ ?
ಎನಿತು ಇನಿದು ಈ ಕನ್ನಡ ನುಡಿಯು !
ಗಿಳಿಗಳು ಉಲಿಯುವ
ಮೆಲುಮಾತುಗಳೋ ?
ಕಳಕಂಠಗಳಾ
ಚೆಲುವಿನ ಕುಕಿಲೋ ?
ಅಳಿಗಳ ಬಳಗದ ಬೆಳಗಿನ ಉಲಿಯೋ ?
ಎನಿತು ಇನಿದು ಈ ಕನ್ನಡ ನುಡಿಯು.
- ಆನಂದಕಂದ
- ಆನಂದಕಂದ
ಕೃಷ್ಣಶರ್ಮ ಬೆಟಗೇರಿ
- ೬. ಕನ್ನಡ
- ೬. ಕನ್ನಡ
ತನ್ನದು ಎಂಬುದು ಏನಿಲ್ಲೆ
ಕನ್ನಡ ನುಡಿಯಲ್ಲಿ ಹುರುಳಿಲ್ಲೆ? । ಪ ।