ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೧೬ ಗುಡಿಗಟ್ಟ, ಕೊಂಕಾಗಿ, ಗೊಂಚಲಲಿ ಗುಂಪಾಗಿ, ತೆಕ್ಕನೆಯೆ ಹುಟ್ಟಿ ಬರೆ, ಪನದಿ ಮಿಂಚಿದರೆ, ಬೆರಗಾಗಿ, ಮರುಳಾಗಿ ಬಾ ನೋಡು ನಿಂತಿಲ್ಲಿ ಮೂಕನಾಗಿ ! ತಾರೆಗಳ ತವರೂರು ಸಿಂಗರದ ಮೈಸೂರು ! ಕನ್ನಡದ ಕುಶಲತೆಗೆ ಕನ್ನಡದ ರಸಿಕತೆಗೆ ಕನ್ನಡದ ನಿಪುಣತೆಗೆ, ಕನ್ನಡಿಯು ಮೈಸೂರು ! ಕನ್ನಡಿಗರೆದೆಯರಿಯೆ, ಕನ್ನಡಿಗರೋಲರಿಯೆ, ಕನ್ನಡಿಗರಿಂಪರಿಯೆ, ಸೋದರನೆ, ನೇಹಿಗನೆ, ಲಲಿತ ಲಲಿತಾದ್ರಿಯಲಿ ನಿಂತು ನೋಡು ! ಕಬ್ಬಗಳ ಕಟ್ಟು ವೊಡೆ ಕಬ್ಬಿಗನೆ, ಬಾ ಇಲ್ಲಿ ; ಗಾನವನು ಹಾಡುವೊಡೆ ಗಾಯಕನೆ, ಬಾ ಇಲ್ಲಿ ; ವೀಣೆಯನು ಮಿಡಿಯುವೊಡೆ ಬಾ ಇಲ್ಲಿ ವೈಣಿಕನೆ ; ಧ್ಯಾನವನು ಮಾಡುವೊಡೆ ಬಾ ಇಲ್ಲಿ ತಾಪಸನೆ ; ಬಣ್ಣದಲಿ ಭಾವಗಳ ಬಣ್ಣಿ ಪೊಡೆ ಬಾ ಇಲ್ಲಿ * ವರ್ಣಶಿಲ್ಪಿ !