ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೯ ಮುದುಕರು ನಿಲ್ಲಲಿ ತುಸು ಹಿಂದೆ ಹುಡುಗರ ಸಾಹಸ ಏನೆಂಬೆ! ಮುದುಕರು ಪಾಪ! ಕಂಗಳು ಮಂದ ಮುಂದಿನ ನೋಟವ ನೋಡಲು ಅಂಧ, ಹೊಸ ಹೊಸ ರೀತಿಯ ದೂರುವರು ಹಳೆಯ ಪುರಾಣವ ಹೇಳುವರು. ಅಂಧ ಭಕ್ತಿಗೆ ಉರಿಯನು ಒಡ್ಡಿ ನಿಲ್ಲಿರಿ ಎಲ್ಲರು ಗೋಲಾಗಿ, ಚ೦ದದಿಂದ ಚಪ್ಪಾಳೆಯ ತಟ್ಟುತ ಮುಂದಕೆ ನಡೆಯಿರಿ ಸಾಲಾಗಿ ದೊಡ್ಡ ಮನಸಿನ ಕುದುರೆಯ ಹತ್ತಿ, ಕೈಯಲ್ಲಿ ಹಿಡಿಯಿರಿ ಧೈರ್ಯದ ಕ; ಹಿಂದು ಧರ್ಮದಾ ಫೇಠಾ ಸುತ್ತಿ * ಆತ್ಮಸಂಯಮನ' - ಲಗಾಮು ಜಗ್ಗಿ, ದುಗುಡವ ಬಗ್ಗಿಸಿ, ಹಿರಿ ಹಿರಿ ಹಿಗ್ಗಿ, ಎಲ್ಲ ಜಾತಿಗಳ ಗುಂಪನು ನುಗ್ಗಿ, ಭೇದವನೊಡೆಯಿರಿ ತಲೆಯನು ಬಗ್ಗಿ ; ಆಗ ನಲಿಯುವುದು ಸಂತಸ ಸುಗ್ಗಿ ಭಾರತಭೂಮಿಯ ಅಬಲತೆ ಕುಗ್ಗಿ, ಅ೦ದು ಮೂಡುವನು ದಸರೆಯ ಅರುಣ ಅಜ್ಞಾನದ ಕತ್ತಲೆಗದು ಮರಣ. ಮಾನವ ಧರ್ಮದ ದಸರೆಯ ಮಾಡಿ ಕನ್ನಡನಾಡಿನ ಹಾಡನು ಹಾಡಿ. ದಿನಕರ ದೇಸಾಯಿ ೩೬. ಶ್ರೀ ಕೃಷ್ಣ ರಾಜ ರಜತಮಹೋತ್ಸವ ಪ್ರಗಾಥ ಕಾಯಿ, ತಾಯಿ, ಕೃಪೆಯ ತೋರಿ ನಮ್ಮ ಕೃಷ್ಣನ ; ಬೆಳ್ಳಿ ಬೆಟ್ಟ ದೊಡತಿ ಗೌರಿ, ಬೆಳ್ಳಿಯೊಸಗೆಗೊಸಗೆ ಬೀರಿ ಕಾಯಿ ಕೃಷ್ಣನ.