ಪ್ರಕರಣ ಹದಿನೇಳು ಸಮ್ಮಿಲಿತ ಅನುಭಾವ
ಆನಂದಮಯ ಚಿಪ್ಪನ, ಭಾನುವಿಲ್ಲದ ಬಿಸಿಲು, ಉಕ್ಕುವ ಅಮೃತಕುಂಭ (ರಾಗ-ಭೂಪ, ತಾ-ದೀಪಚಂದಿ)
ಆನಂದವಾದ ಚಿದ್‌ಘನ ವಸ್ತು ನಾ ಕಂಡೆ | ಭಾನುವಿಲ್ಲದ ಬಿಸಲೇನಮ್ಮಾ
ತಾನು ಅಲ್ಲದೆ ತನ್ನ ತವರೂರ ಮನೆಯೊಳು | ತಾನು ಮಾಡಿದ ಪುಣ್ಯ ತನಗವಾ
ಕುಂಡಲದೊಳಗೊಂದು ನೀಲಗನ್ನಡಿ ಇಟ್ಟು 1 ಮಂಡಲದೊಳಗಾಡುವದೇನಾ |
ಸೇರಿ ಉನ್ಮನಿಯೊಳು ಗುರುವಿನ ಪುಣ್ಯದಿ | ಘನವಸ್ತು ದೊರಕಿತು ಎನಗಾ
ನಡುನೀರ ಮಧ್ಯದಿ ವಟವೃಕ್ಷ ನಾ ಕಂಡೆ | ಹೂವಿಲ್ಲ ಮಿಡಿಗಾಯಿ ಹಣ್ಣಾ ||
ಅಖಂಡ ವನದೊಳು ಅಮೃತ ಕೊಡ ಉಕ್ಕಿ | ಉಂಡುಂಡು ಸುಖಿಸಿ ಬಾಳುವೆನವಾ
ಕೈಲಾಸ ಭೂಮಿ ಅಲ್ಲಾ ಕನಕ ಭೂಷಣವಲ್ಲಾ | ಬೈಲೊಳಗಾಡುವದೇನಮ್ಮಾ ||
ವರಕವಿ ನಾಗಲಿಂಗ ಗುರುವಿನ ಪುಣ್ಯದಿ | ಸ್ಥಿರಮುಕ್ತಿ ದೊರಕಿತು ಎನಗವಾ
ಸಂಗವು ಮೇರಗತಿಯ, ತೇಜ-ನಾದ-ಸುಧೆಗಳ
ಅನುಭಾವ ಸುಖವನ್ನು ನೀಡುವದು
( ರಾಗ-ಸಾರಂಗ, ತಾಲ- ಕರವಾ)
ಇಂಥಾದೆಲ್ಲಿದೆ ತಾ ನೋಡಿ | ಸಂಗದ ಸುಖಾ
ಒಂದೊಂದು ಪರಿ ಕೇಳಿಸುವ | ಹನ್ನೊಂದರ ಮೇಲಿನ್ನೊಂದರ ಘೋಷಾ ||
ಧಿಮಿ ಧಿಮಿ ಧಿಮಿ ಧಿಮಿ | ಧಿಮಿ ಧಿಮಿ ಧಿಮಿ ಧಿಮಿ | ಧಿಮಿಗುಡುತ್ತಿದೆ ಆನಂದದ ಘೋಷಾ