ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕನ್ನಡ ಪರಮಾರ್ಥ ಸೋಪಾನ
ಥಳಥಳಿಸುವ ಬ್ರಹ್ಮರಂಧ್ರದಿ ಸುಖದಿಂದ | ಮಲಗುವ ಬ್ರಾಹ್ಮಣನು ||
ಬಲು ರವಿಶತಕೋಟಿ ಶಿಂಶುಮಾರದಲಿ | ಸೇರುವ ಬ್ರಾಹ್ಮಣನು ||
ಕಲಿಯುಗದಲಿ ಹರಿನಾಮಾಮೃತವನು | ಉಂಡವ ಬ್ರಾಹ್ಮಣನು ||
ಸುಲಭದಿ ಪುರಂದರ ವಿಠಲರಾಯನ | ಸೇರುವ ಬ್ರಾಹ್ಮಣನು
ಫಕೀರರಾಗಿ ಸುತ್ತೆಲ್ಲ ಜ್ಯೋತಿಯ ಕಂಡೆವು, ಸವಿಸವಿ ಪ್ರಸಾದ ಉಂಡೆವು ( ರಾಗ-ಭೂಪ, ತಾಲ-ಕೇರವಾ)
ಹುಸೇನಿ ಸಾಹೇಬರ ಬದಿಯಲ್ಲಿ ಹೋಗಿ | ಹಸನಾಗಿ ನಾವು ಬಂದೇವು
ಮಸೂತಿಯೊಳಗಿನ ಮೂಲವ ತಿಳಿದು | ದೀನ ದಯಾಳನ ನೆನೆದೇವು
ಶಾಡ ಬಂಧನದ ಲಾಡಿಯ ಕಟ್ಟಿ | ಓಡ್ಯಾಡು ಪಂಜೆಯ ಹಿಡಿದೇವೊ !
ಸೂರ್ಯ ಚಂದ್ರರು ಎಂದಿಗೆ ಇಲ್ಲಾ | ಅಂದೊಬ್ಬ ಪೀರನ ಕಂಡೇವೊ ||
ಹಸರು ಹಳದಿ ಬಿಳಿದು ಕೆಂಪು | ಕುಶಲದ ಚೌತಿಯ ಕಂಡೇವೊ ||
ಮುಸಲರಗೂಡ ಫಕೀರರಾಗಿ | ಸವಿ ಸವಿ ಪ್ರಸಾದ ಉಂಡೇವೊ
ಖತಾಲವೆಂಬೋ ಕತ್ತಲೆಯೊಳಗೆ 1 ಸುತ್ತೆಲ್ಲ ಜ್ಯೋತಿಯ ಕಂಡೇ ||
ಉತ್ತರ ಪಶ್ಚಿಮ ನವಬಾಜೆ ವಾದ್ಯವ | ಅದರ ಭ್ರಮಿ ನಾವು ಗೊಂಡೇವೋ
ಖಾಲಿಯೆಂಬುವ ಡೋಲಿಯ ಮುರಿದು | ಒಳಗಿನ ಮಲವ ತಿಳಿದೇ ||