ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಎಂಥ ಸುಲಭ ಇದ್ದಾನೊ ದೇವ | ಅಲ್ಲಿ ಏರಿ ಮಾಡಿ ಆತನ ಧಾವಾ ||

ದ್ವಾರ ತೆರೆದು ನೋಡುವೆ ಅವನ | ಪರ | ನಾದ ದಿಮ್ಮದೊಳು ಮುಳುಗುವೆ ನಾ

ಇಷ್ಟ ಅರ್ಥವು ಎಲ್ಲಿ ಅದ | ಫಣಿ ನೇತ್ರ ಮಧ್ಯದ ನಡುವದ

ಮೂರು ಮೀರಿದವಗ ತೋರೇದ | ಗುರು | ಸಾರಿ ಹೇಳಿದರ ತಿಳಿದದ

ಆತ್ಮನ ಅನುಭವ ಬಲ್ಲವರು | ಯೋಗದ ಮಾರ್ಗ ತಿಳಿದವರು | ಗುರು |

ಗುರು ನಿಂಬರಗಿ ಮಹಾರಾಜ ಸಾಧುರು || ಲಿಂಗ ಜಂಗಮ ಕೂಡಿದವರು

ಅಯ್ಯ ಮನವೇ! ಉರಿಯುವ ಕರ್ಪುರದಂತೆ ಬೆಳಗು! ಅಮೃತವ ಕುಡಿ! ನೀಲ ಮಂಟಪದಲ್ಲಿ ಆಡು ! ಬಯಲ ತೊಟ್ಟಿಲಲ್ಲಿ ಮಲಗಯ್ಯ! ( ರಾಗ-ಮಿಶ್ರಕಾಫಿ, ತಾಲ-ಕೇರವಾ)

ಬಾ ಬಾ ಬಾ ಎನ್ನ ಮೋಹದ ಮನಸ

ಯತಿ ಮುನೀಶ್ವರರಿಗೆ ಗತಿಚ್ಚುವ ಕೂಸ

ಹರಗುರುವಿನ ಒಲಿಸುವದು ಬಿರಿಯಲ್ಲೂ ಮನಸ | ನೀನೊಲಿದರೆ ಮೂರು ಲೋಕ ಒಲಿಯುವವು ಕೂಸ

ಮೂಲ ಸಾಲಿ ಬೀಜಮಂತ್ರಾ ಓದು ಕಲಿ ಮನಸ | ಆದಿ ಅನಾದಿ ಆಚಿಕಿನ ಸುದ್ದಿ ಕದ್ದು ಹೇಳು ಕೂಸ

ಸಾಧನ ಮಾಡಿ ನಾದ ಬಿಂದುಕಳೆ ತಿಳಿಯುವ ಮನಸ | ನೀಲ ಮನೆಯೊಳು ಮೇಲು ಮಂಟಪದಿ ಲೋಲ್ಯಾಡು ಕೂಸ || ೩ ||

ಅರಿತು ಅಮೃತ ಗಟಗಟ ಕುಡಿಯುವ ಮನಸ | ಬಿಟ್ಟಿ, ಬೈಲ ತೊಟ್ಟಿಲದೊಳು ಮಲಗುವ ಕೂಸ

ಉರಿ ಉಂಡ ಕರ್ಪುರದಂತೆ ಬೆಳಗುವ ಮನಸ | ಸಂಗ ಲಿಂಗ ಅಂಗಸಹಿತ ನುಂಗುವ ಕೂಸ