ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೊಪಾನ

ದಿವ್ಯ ದರ್ಶನ, ಶ್ರವಣ, ಆತ್ಮಗಳ ಅಪೂರ್ವ ಅನುಭಾವಗಳು ( ರಾಗ-ಆನಂದಭೈರವಿ, ತಾಲ-ದೀಪಚಂದಿ)

ಕಣ್ಣಿನೊಳಗ ನೋಡಿ ಕೈವಲ್ಯವ ನೀವು ಕಣ್ಣು ತುಂಬಿ | ಬಣ್ಣ ಸಲಳವಲ್ಲ ಸದ್ಗುರುಚರಣವ ನಿಜ ನಂಬಿ

ಕತ್ತಲಿ ಮನೆಯಲ್ಲಿ ರತ್ನದ ಮಣಿಯದೆ ನೋಡಿಕೊಳ್ಳಿ 1 ಚಿತ್ರದ ಕೊನೆಯಲಿ ಶ್ರೀಹರಿ ಕುಂತಾನೆ ನೋಡಿಕೊಳ್ಳಿ

ಒಳಹೊರಗೊಂದಾಗಿ ಹೊಳೆಯುತಲಿರುವದು ನಮನ ಮಾಡಿ | ಥಳಥಳಿಸುವ ಸುವರ್ಣದ ಜ್ಯೋತಿಯ ತಾರಕ ನೋಡಿ

ಉನ್ಮನಿಯೊಳಗಿದ್ದ ಓಂಕಾರ ನಾದವ ಕೇಳಿರಯ್ಯಾ | ಸನ್ಮಾನದಿಂದಲಿ ಸಾಧುಸಂತರ ಬಲಗೊಂಬಿರಯ್ಯಾ

ಕಾಯವು ಸ್ಥಿರವಲ್ಲ ಮಾಯದ ಸಂಸಾರ ಅಳಿಯಬೇಕು | ಕಾಯವು ಇರಲಿಕ್ಕೆ ಕಮಲನಾಭನಲ್ಲಿ ಬೆರೆಯಬೇಕು

ಜ್ಞಾನಿಯಾದ ಮೇಲೆ ತಾನೆ ತಾನಾದದ್ದು ತಿಳಿಯಬೇಕು | ಸುಜ್ಞಾನಿ ಪುರಂದರ ವಿಠಲರಾಯನ ಕೂಡ ಬೆರೆಯಬೇಕು || ೫ ||

ಧ್ಯಾನದಲ್ಲಿ ನಿರತನಾದ ಸಾಧಕನಿಗೆ ಪರಮಾತ್ಮನು ಕಾಣಿಸಿಕೊಳ್ಳುವ ವಿವಿಧ ಬಗೆಗಳು (i)

ಷಟ್ಟದಿ

ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ, ಕುಳಿತು ಪಾಡಲು ನಿಲುವ; ನಿಂತರೆ ನಲಿವ; ನಲಿದರೆ ಒಲಿವ ನಿಮಗೆಂಬ |

ಸುಲಭನೋ ಹರಿ ತನ್ನವರನರ- ಗಳಿಗೆ ಬಿಟ್ಟಗಲದ ರಮಾಧವ ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ ||

(ii)

(ಉಗಾಭೋಗ)

ಮಲಗಿ ಪಾಡಿದರೆ ಕುಳಿತು ಕೇಳುವ | ಕುಳಿತು ಪಾಡಿದರೆ ನಿಂತು ಕೇಳುವ |