ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ ಶ್ರೀ ಗುರುದೇವ ಡಾ|| ರಾನಡೆಯವರು ಶ್ರೇಷ್ಠ ಅನುಭಾವಿಗಳು, ಪ್ರಕಾಂಡ ಪಂಡಿತರು. ಅವರ ಅಲೌಕಿಕ ಬುದ್ಧಿ ಯು ಜ್ಞಾನದ ಎಲ್ಲ ಕ್ಷೇತ್ರಗಳಲ್ಲಿ ಲೀಲೆ ಯಿಂದ ವಿಹರಿಸುತ್ತಿದ್ದಿತು. ಎಲ್ಲಿಯೂ ಅದು ತಡವರಿಸುತ್ತಿರಲಿಲ್ಲ. ಅದರ ಫಲ ವಾಗಿ ಅವರು ಅನೇಕ ಶಾಸ್ತ್ರಗಳನ್ನು ಸಹಜವಾಗಿ ಅರಿತರು. ದರ್ಶನವು ಅವರ ಅತ್ಯಂತ ಪ್ರೀತಿಯ ವಿಷಯ. ಗಣಿತ ವಿಜ್ಞಾನಗಳಲ್ಲಿಯೂ ಅವರು ಪಾರಂಗತರು. ಅವರ ಭಾಷಾಪ್ರಭುತ್ವವೂ ಅವರ್ಣನೀಯವಾದುದು. ನಮ್ಮ ಪ್ರಾಚೀನ ಭಾಷೆ ಗಳಾದ ಸಂಸ್ಕೃತ-ಲ್ಯಾಟಿನ್ ಹಾಗೂ ಗ್ರೀಕ, ಆಧುನಿಕ ಪಾಶ್ಚಾತ್ಯ ಭಾಷೆಗಳಾದ ಇಂಗ್ಲಿಷ್ ಹಾಗೂ ಜರ್ಮನ್ ಮತ್ತು ಭಾರತೀಯ ಭಾಷೆಗಳಾದ ಮರಾಠಿ, ಕನ್ನಡ ಹಾಗೂ ಹಿಂದಿ ಇವನ್ನು ಅವರು ಚೆನ್ನಾಗಿ ಅಭ್ಯಸಿಸಿ, ಅವುಗಳ ಮೇಲೆ ಒಳ್ಳೆಯ ಪ್ರಭುತ್ವವನ್ನು ಪಡೆದಿದ್ದರು. ಮರಾಠಿಯು ಅವರ ಮಾತೃ ಭಾಷೆ ಕನ್ನಡವು ಅವರ ಪ್ರಾದೇಶಿಕ ಭಾಷೆ, ಅವರು ಜನಿಸಿದುದು, ಬೆಳೆದುದು ಜಂಬು- ಕಂಡಿಯಲ್ಲಿ, ಕನ್ನಡನಾಡಿನಲ್ಲಿ, ಆದುದರಿಂದ ಅವರಿಗೆ ಮೊದಲಿನಿಂದ ಕನ್ನಡವು ಕೊಂಚ ತಿಳಿಯುತ್ತಿತ್ತು. ಓದಲು, ಬರೆಯಲು ಬರುತ್ತಿರಲಿಲ್ಲ. ಆದರೆ ಮುಂದೆ ಕನ್ನಡ ನುಡಿ ಯನ್ನು ಸೂಕ್ಷ್ಮವಾಗಿ ಅಭ್ಯಸಿಸಬೇಕೆಂದು ಅವರಿಗೆ ಪ್ರಬಲವಾಗಿ ಹೊಳೆದ ಮೂಲಕ ಅವರು ತಮ್ಮದೇ ಆದ ಪದ್ದತಿಯಿಂದ ಬೇಗನೆ ಅದನ್ನು ಕಲಿತರು ಮತ್ತು ಕನ್ನಡ ಲಿಪಿಯ ಪರಿಚಯವಿಲ್ಲದಿದ್ದರೂ, ಅದರಲ್ಲಿ ಪಾರಂಗ ತತೆಯನ್ನು ಪಡೆದರು, e ಕನ್ನಡ ನುಡಿ ಹಾಗೂ ಕನ್ನಡಿಗರ ಅನುಭಾವವು ಶ್ರೀ ಗುರುದೇವರ ಗಮನ ಸೆಳೆದ ಬಗೆಯು ತುಂಬ ಸ್ವಾರಸ್ಯವುಳ್ಳದ್ದಾಗಿದೆ. ಶ್ರೀ ಗುರುದೇವರ ಸದ್ದು ರು ಗಳಾದ ಉಮದಿಯ ಶ್ರೀ ಭಾವೂಸಾಹೇಬ ಮಹಾರಾಜರವರು ಹಾಗೂ ಅವರ ಪರಾತ್ಪರ ಸದ್ಗುರುಗಳಾದ ನಿಂಬರಗಿಯ ಶ್ರೀ ನಾರಾಯಣರಾವ ಇಲ್ಲವೆ ಶ್ರೀ ಗುರುಲಿಂಗಜಂಗಮ ಮಹಾರಾಜರವರು ಕನ್ನಡಿಗರು. ಅವರು ಮರಾಠಿ ಭಾಷೆ ಯನ್ನೂ ಬಲ್ಲರು. ಆದರೆ ತಮ್ಮ ಪರಮಾರ್ಥ- ಪ್ರವಚನಗಳಿಗಾಗಿ ಅವರು ಆಗಾಗ ಕನ್ನಡವನ್ನೇ ಬಳಸುತ್ತಿದ್ದರು. ಆ ಸಮಯದಲ್ಲಿ ಅವರು ಕನ್ನಡ ಅನುಭಾವ ಪದಗಳನ್ನು ಹೇಳಿಸುತ್ತಿದ್ದರು. ಅವುಗಳ ಅರ್ಥವನ್ನು ವಿವರಿಸು ತಿದ್ದರು. ಶ್ರೀ ಗುರುದೇವರಿಗೆ ಕನ್ನಡ ಮಾತು ತಿಳಿದರೂ ಪದಗಳ ಅರ್ಥ ತಿಳಿಯುತ್ತಿರಲಿಲ್ಲ. ಅವರ ಸದ್ಗುರುಗಳು ಒಮ್ಮೆ ಅವರನ್ನು ಈ ರೀತಿ ಎಚ್ಚರಿಸಿ ದರೆಂದು ಶ್ರೀ ಗುರುದೇವರೇ ತಮ್ಮ ಉಪನ್ಯಾಸವೊಂದರಲ್ಲಿ ಅರುಹಿರುವರು. “ಕನ್ನಡಿಗರ ಅನುಭಾವವು ತುಂಬ ವಿಶಾಲವಾದ ವಿಷಯ. ನನ್ನ ಗುರು ಗಳಿಂದಲೂ, ಪರಾತ್ಪರ ಗುರುಗಳಿಂದಲೂ ನನಗದರ ಪರಿಚಯವಾದುದು ನನ್ನ