ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪ್ರಕರಣ ಹತ್ತೊಂಬತ್ತು ಸಾಕ್ಷಾತ್ಕಾರದ ಪರಿಣಾಮಗಳು (ಭಾಗ-೧) ಆತ್ಮಾನುಭಾವಿಯು ಪುನರ್ಜನ್ಮರಹಿತನು ( ರಾಗ-ದೇಸ, ತಾಲ-ದೀಪಚಂದಿ )
ಗುರುವೆ ನಿವಾಜ್ಞೆಯನು ಮೀರದೆ ನಡೆದವನು | ನರನನ್ನಲು ಬೇಡಾ ಆವ ಪರಮಾತ್ಮನು
ಅರಿಯದ ಪ್ರಾಣಿಗಳು ಅವರೇನು ಬಲ್ಲರು | ಪರಕೆ ಪರತರವಾದ ಪರವಸ್ತು ಅವನು
ಹೆಪ್ಪು ಹಾಲಿಗೆ ಕೊಡಲು, ತುಪ್ಪ ಅದರೊಳಗಾಗಿ | ತುಪ್ಪ ಕೊಡುವದೆ ಮರಳಿ ಹಾಲಿನೊಳು ||
ನಿಪ್ಪತ್ತಿ ನಿಜರೂಪನಾದಂಥ ಪುರುಷನು | ಅಪ್ಪಿ ಸಂಸಾರಕ್ಕೆ ಒಳಗಾಗನವನು ||
ನದಿಯು ತಾ ಪುಟ್ಟ ಅದು ಸಮುದ್ರವ ಕೂಡಲು | ನದಿಯು ತಾ ಪೋಗುವದೆ ಪುಟ್ಟದೆಡೆಗೆ ||
ಸದಮಲ ಸುಜ್ಞಾನಿ ಪ್ರಪಂಚ ಮಾಡಲು | ಅದರೊಳು ಕೂಡಿದರೂ ಬೆರೆಯನು ಅವನು
ಮುತ್ತು ನೀರೊಳು ಪುಟ್ಟಿ, ಮತ್ತೆ ನೀರಾಗುವದೆ ? ಮುತ್ತು ಲಕ್ಷಾಂತರಕೆ ಬೆಲೆಯಾದೀತು ||
ತತ್ವದ ಜ್ಞಾನಿಯವನು ಹುಟ್ಟುವ ನರನಲ್ಲ | ಅತ್ಯಂತ ಆನಂದಪರಿಪೂರ್ಣನವನು
ಗರುಡನ ಮಂತ್ರವನು ಕಲಿತಿರುವಾತೆಗೆ ಉರಗ ಕಚ್ಚಿದರೇನು ವಿಷವೇರುವದೆ |
ಪರಿಪರಿ ವಿಷಯದೊಳ ಮುಳುಗಾಡಿದರಾತಗೆ | ಧರ್ಮ ಕರ್ಮಗಳಿಂದ ಆತಗೇನು