ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕನ್ನಡ ಪರಮಾರ್ಥ ಸೋಪಾನ
ಪರಮಾತ್ಮನ ಪ್ರೀತಿಯಿಂದ ಮತ್ತನಾದ ಸಂತನ ವಿವಿಧ ಚಟುವಟಿಕೆಗಳು ( ರಾಗ-ಮಿಶ್ರಕಾಫಿ, ತಾಲ-ಕೇರವಾ )
ಎಂಥಾ ಹುಚ್ಚು ಹಿಡಿದೀತವಗ | ಯಾರು ಕಲಿಸಿ ಬಿಟ್ಟಿರವ್ವಾ ||
ಅಂತು ಅವನು ಏನೇನಾದ | ಸಂತಾನಳಿದು ನಿಃಸಂತಾನಾದಾ
ಕಟ್ಟಿದ ಗೋಡೆ ಕೆಡುವು ತಲಾನ | ಉಟ್ಟ ಅರವಿ ಹರಿವು ತಲಾನ ||
ಅಟ್ಟಿ ಗಡಿಗೆ ಯೆಲ್ಲನೆ ಒಡೆದು | ಹುಬ್ಬಾ ಮುರಿದು ಬಿಟ್ಟಾನವಾ
ತನ್ನ ದೇಹದ ಸುಖವನರಿಯಾ | ಪರರ ಸುಖವನೇನು ಬಲ್ಲಾ ||
ತನ್ನ ಮಾತಾ ತಾನೆ ಹೇಳಿ | ಇನ್ನು ಎಷ್ಟು ನಗುತಿಹನವಾ
ಹಮ್ಮು ದಮ್ಮನೆಲ್ಲಾನಳಿದಾ | ಬ್ರಹ್ಮನೆಂಬುದ ತಾನೆ ತಿಳಿದಾ ||
ಸೃಷ್ಟಿಯೊಳು ಕೂಡಲೂರೇಶನ | ಬಟ್ಟು, ಬಯಲ ಪ್ರಭೆಯಾದಾ
ದೈವೀ ಉನ್ಮಾದಾವಸ್ಥೆಯ ಬಣ್ಣನೆ ( ರಾಗ-ಮಿಶ್ರ ಕಾಫಿ, ತಾಲ-ಕೇರವಾ )
ಹುಚ್ಚು ಹಿಡಿಯಿತು ಎನಗೆ ಹುಚ್ಚು ಹಿಡಿಯಿತು | ಅಚ್ಯುತನ ನಾಮವೆಂಬ ಮೆಚ್ಚು ಮದ್ದು ತಲೆಗೆ ಏರಿ
ವಾಸುದೇವ ಹರಿಯೆ ಎಂದು ವದನದಿಂದ ಒದರುವ | ಮಾಯ- | ಪಾಶವೆಂಬ ಅಂಗಿಯನ್ನು ಹರಿದು ಹರಿದು ಹಾಕುವೆ