ಕನ್ನಡ ಪರಮಾರ್ಥ ಸೋಪಾನ ಭರತಿ ಸದ್ಭಕ್ತಿ ಎಂದೆಂಬ ಬಿಲ್ಲನೆ ಮಾಡಿ | ವಿರತಿ ಎಂದೆಂಬ ಸಿಂಜಿನಿಯ ಹೂಡಿ || ಅರಿವೆಂಬ ಬಾಣವನ್ನೆಚ್ಚಿ ಕೆಡಹುತ | ಗುರುಸಿದ್ದನಂಭ್ರಪಂಕಜಕೆರಗಿ || all 2 ಅಯ್ಯ ! ನಿದ್ರೆಯಲ್ಲಿ ಕನಸಿನಲ್ಲಿ ಮೈಮರೆತ ದಾರಿಕಾರನೆ ! ನಿನ್ನ ಗುರಿಯು ಬಲು ದೂರವಿರುವುದಯ್ಯ! ಎಚ್ಚರಾಗು ! ಮುಂದೆ ಸಾಗಯ್ಯ! - ( ರಾಗ - ಶಂಕರಾಭರಣ, ತಾಲ - ದೀಪಚಂಡಿ ) ಎಲೋ ದಾರಿಕಾರನೆ ಮಲಗಿಕೊಂಬರೆ ಹೀಗೆ | ಬಲು ದೂರ ವೈಕುಂಠ ಪ್ರವಾಸವು ತಲೆಯೊಳು ನಿಂತು ನಗುವಳು ಮೃತ್ಯು ದೇವತೆ | ಹಲವು ಹಂಬಲಿಸಲು ಫಲವೇನು ಕನಸಿನೊಳು || ಅ. ಪ. | ಸ್ಥಳವು ನಿನ್ನದು ಬಿಟ್ಟು ಹಳವ ಸೇರಿದರಿನ್ನು | ತಿಳಿವಳಿಕೆ ಬರಬಾರದೆ ಮಾನವಾ || ತೊಳಲು ದಾರಿಯಲ್ಲಿ ಖಲರು ನಿನ್ನಯ ಬದುಕ | ಸೆಳೆಯದೆ ಬಿಡರಯ್ಯ ಉಳಿಸಿ ಮಾನವಾ ಬರುವ ಮುಂದೆ ತಂದ ಸರುಕೆಲ್ಲ ತೀರಿತು | ತಿರುಗಿ ಬರುವದಲ್ಲ ಬರಿಗಂಟು || ಕರಿ, ಹುಲಿ, ತೋಳ, ನಾಯಿ, ನರಿ, ಕೋಣ, ಕರಡಿಗಳು | }}} |0|| ಕ. ಕ, ೨ ಹರಿದು ತಿಂಬುವು ನಿನ್ನ ತೆರಳಗೊಡವು ಮುನ್ನ || 9 || ಹಿಂದೆ ಹಲವು ಕವಚಂಗಳ ಕಳಕೊಂಡಿ | ಇಂದೀ ಕವಚವಾದರು ಪೋಗುದು || ಮುಂದಿನ್ನು ಸಾಧಿಸಿ ಪುರಂದರ ವಿಠಲನ | ಪೊಂದಿ ಪಾದಕೆ ಸುಖಿಸಿ ಮಾನವಾ || a ||
ಪುಟ:ಕನ್ನಡ ಪರಮಾರ್ಥ ಸೋಪಾನ.pdf/೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.