ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಕಣ್ಣಿನೊಳಗೆ ಇದ್ದ ಮೂರುತಿ ತನ್ನೊಳಗೆ ತಾ ಕಂಡು | ಘನ್ನಪೂರ್ಣ ಪುರಂದರ ವಿಠಲನ ಕೊಂಡಾಡದೆ

ಅಯ್ಯ ! ನಿನ್ನ ನಾಮವೇ ತುಂಬ ಪ್ರಬಲವಿರಲು, ಎನಗೆ ನಿನ್ನ ಪರಿವೆಯೇನು ? (ರಾಗ-ಕಾಫಿ, ತಾಲ-ತಾಲ)

ನೀ ಯಾಕೆ ನಿನ್ನ ಹಂಗ್ಯಾಕೋ | ರಂಗಾ | ನಿನ್ನ ನಾಮದ ಬಲವೊಂದಿದ್ದರೆ ಸಾಕೊ

ಕರಿ ಮಕರಿಗೆ ಸಿಲುಕಿ ಮೊರೆಯಿಡುತಿರುವಾಗ | ಆದಿಮೂಲನೆಂಬ ನಾಮವ ಕಾಯೊ

ಪ್ರಹ್ಲಾದನ ಪಿತ ಬಾಧಿಸುತಿರುವಾಗ | ನರಹರಿಯೆಂಬೊ ನಾಮವೆ ಕಾಯ

ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ | ಕೃಷ್ಣ ಕೃಷ್ಣ ಎಂಬ ನಾಮವೆ ಕಾಯ್ತ

ದಮನ ದೂತರು ಬಂದು ಅಜಮಿಳನೆಳೆವಾಗ | ನಾರಾಯಣನೆಂಬ ನಾಮವೆ ಕಾಯ್ತ

ಆ ಮರಾ ಈ ಮರಾ ಧ್ಯಾನಿಸುತಿರುವಾಗ | ರಾಮ ರಾಮ ಎಂಬ ನಾಮವೆ ಕಾಯ್ತ

ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ | ವಾಸುದೇವನೆಂಬ ನಾಮವೆ ಕಾಯ್ತ

ನಿನ್ನ ನಾಮಕೆ ಸರಿ ಕಾಣೆವು ಜಗದೊಳು | ಘನ್ನ ಮಹಿಮ ಸಿರಿ ಪುರಂದರ ವಿಠಲ

ಹಿಂದಿನ ಸಂತರಿಂದ ದೇವರ ನಾಮಸುಧೆಯ ಸಂಗ್ರಹ (ರಾಗ-ಜಂಗಲಾ, ತಾಲ-ಕೇರವಾ

ಏನ ಸವಿ ಏನ ಸಖಿ ಹರಿನಾಮ | ಮನಸು ತೃಪ್ತಿ ಆಗುದು ಪ್ರೇಮ ||

ಈ ಜನರಿಗೆ ತಿಳಿಯಲಿಲ್ಲ ಇದರ ಮರ್ಮ | ಘನಮಹಿಮ ಸಾಸಿರ ವಿಷ್ಣು ನಾನು

ನಾಮದ ಸವಿಯುಂಡ ವಾಲ್ಮೀಕಾ | ನಾಮವ ಸ್ಮರಿಸಿದ ನರಹರಿ ಕನಕ ||